ಪ್ರತಿಯೊಂದು ಹೆಣ್ಣು ಪರಿಪೂರ್ಣವಾಗುವುದು ಸಂತಾನವಾದ ಮೇಲೆ. ಹೀಗಾಗಿ ಗರ್ಭಿಣಿಯಾದ ಹಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಂದು ನಾವು ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಿಮಗೆ ವಿವಾಹದ ನಂತರ ಸರಿಯಾಗಿ ಋತುಸ್ರಾವವಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿ ತಿಂಗಳು ಸರಿಯಾಗಿ ಋತುಸ್ರಾವವಾಗುತ್ತಿದ್ದು, ಸಡೆನ್ ಆಗಿ ಮುಟ್ಟು 10ರಿಂದ 15 ದಿನವಾದರೂ ಮುಟ್ಟಾಗದಿದ್ದರೆ, ಖಂಡಿತವಾಗಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಯಾಕಂದ್ರೆ ಮಹಿಳೆ ತಾನು ಗರ್ಭಿಣಿ ಎಂದು ಎಷ್ಟು ಬೇಗ ತಿಳಿದುಕೊಳ್ಳುವಳೋ ಅಷ್ಟು ಉತ್ತಮ.
ನೀವು ಗರ್ಭಿಣಿಯಾಗಿದ್ದಾಗ, 3 ತಿಂಗಳವರೆಗೆ ತುಂಬಾ ಎಚ್ಚರಿಕೆಯಿಂದಿರಬೇಕು. ಇದೇ ಕಾರಣಕ್ಕಾಗಿ ಹಿರಿಯರು ತಮ್ಮ ಮನೆಯ ಹೆಣ್ಣು ಮಕ್ಕಳು ಗರ್ಭಿಣಿಯಾದರೆ, 3 ತಿಂಗಳ ತನಕ ಯಾರಿಗೂ ಹೇಳುವುದಿಲ್ಲ. ಯಾಕಂದ್ರೆ 3 ತಿಂಗಳ ತನಕ ಮಗು ತುಂಬಾ ನಾಜೂಕಾಗಿರುತ್ತದೆ. ಅದಕ್ಕಾಗಿ ಸರಿಯಾಗಿ ಆರೈಕೆ ಮಾಡಬೇಕಾಗುತ್ತದೆ.
ಮೊದಲ ತಿಂಗಳಿಂದ ಮೂರು ತಿಂಗಳು ತುಂಬುವವರೆಗೂ, ನೀವು ಭಾರವನ್ನು ಎತ್ತಬಾರದು. ಹೆಚ್ಚು ಓಡುವುದು, ನಡೆಯುವುದು, ವಾಹನದಲ್ಲಿ ಸಂಚರಿಸುವುದು, ಬಗ್ಗಿ ಕೆಲಸ ಮಾಡುವುದು, ಹೀಗೆ ದಣಿವಾಗುವ ಕೆಲಸ ಮಾಡಲೇಬಾರದು. ಯಾಕಂದ್ರೆ ಮಗು ನಾಜೂಕಾಗಿರುವ ಕಾರಣ, ಇಂಥ ಕೆಲಸ ಮಾಡುವುದರಿಂದ ಮಗುವಿಗೆ ತೊಂದರೆಯಾಗಬಹುದು.
ಇನ್ನು 3 ತಿಂಗಳ ತನಕ ಸೊಪ್ಪು, ಹಣ್ಣು ತರಕಾರಿ, ಮೊಸರು, ಹಾಲು, ಮಜ್ಜಿಗೆ, ಡ್ರೈ ಫ್ರೂಟ್ಸ್ ಚೆನ್ನಾಗಿ ಸೇವಿಸಬೇಕು. (ಬೇಕಾದರೆ ಅನ್ನ ಊಟಕ್ಕಿಂತ ಹೆಚ್ಚು ಈ ಪದಾರ್ಥಗಳನ್ನೇ ಸೇವಿಸಿದರೂ ಉತ್ತಮ. ಅದರಲ್ಲೂ ಹಸಿರು ಸೊಪ್ಪುಗಳನ್ನು ತಿನ್ನುವುದು ಇನ್ನೂ ಉತ್ತಮ. ಆದ್ರೆ ಡ್ರೈ ಫ್ರೂಟ್ಸ್ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು).
ಈ 3 ತಿಂಗಳು ನೀವು ಹಣ್ಣು-ತರಕಾರಿ, ಹಾಲು-ಮೊಸರು ತಿಂದಷ್ಟು ನಿಮ್ಮ ಮಗು ಗಟ್ಟಿಗೊಳ್ಳುತ್ತದೆ. ಇದರ ಜೊತೆ ಹೆಚ್ಚೆಚ್ಚು ನೀರು ಕುಡಿಯಬೇಕು. ಯಾವುದೇ ಕಾರಣಕ್ಕೂ ಪದೇ ಪದೇ ಅಳುವುದು, ಬೇಸರದಲ್ಲಿರುವುದು, ಸಿಟ್ಟಾಗುವುದು, ಜಗಳ ಮಾಡುವುದೆಲ್ಲ ಮಾಡಬಾರದು. ಮನೆಜನರೊಂದಿಗೆ ನಗು ನಗುತ್ತಲಿದ್ದರೆ, ಮಗು ಚೆನ್ನಾಗಿ ಬೆಳೆಯುವುದಲ್ಲದೇ, ಅದರ ತೂಕ ಕೂಡ ಉತ್ತಮವಾಗಿರುತ್ತದೆ. ಇಲ್ಲವಾದಲ್ಲಿ ಮಗು ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಇದೆ.