Friday, August 29, 2025

Latest Posts

Health Tips: ಹೆಣ್ಣು ಮಕ್ಕಳೇ ಈ ವಿಷಯದಲ್ಲಿ ಎಚ್ಚರಿಕೆಯಿಂದಿರಿ

- Advertisement -

Health Tips: ಇಂದಿನ ಕಾಲದ ಕೆಲವು ವಿವಾಹಿತೆಯರ ಸಮಸ್ಯೆ ಅಂದ್ರೆ, ಸಂತಾನ ಸಮಸ್ಯೆ. ಎಷ್ಟೇ ಮದ್ದು ಮಾಡಿದರೂ, ಎಷ್ಟೇ ವೈದ್ಯರ ಬಳಿ ಹೋದರೂ, ಯಾವ ಚಿಕಿತ್ಸೆ ಪಡೆದರೂ ಮಕ್ಕಳಾಗುತ್ತಿಲ್ಲವೆಂದು ಹೇಳುತ್ತಾರೆ. ಆದ್ರೆ ಆ ರೀತಿ ಸಮಸ್ಯೆ ಬರಲು ಹೆಣ್ಣು ಮಕ್ಕಳು ಕೂಡ ಕಾರಣಕರ್ತರಾಗುತ್ತಾರೆ ಎನ್ನುತ್ತಾರೆ ವೈದ್ಯರು. ಪಾರಂಪರಿಕ ವೈದ್ಯೆ ಡಾ. ಪವಿತ್ರ ಈ ಬಗ್ಗೆ ವಿವರಿಸಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಹಿಂದಿನ ಕಾಲದ ಹೆಣ್ಣು ಮಕ್ಕಳು ಆಹಾರ ಸೇವನೆಯ ಬಳಿಕ, ಹೆಚ್ಚು ದೇಹದಂಡನೆ ಮಾಡುತ್ತಿದ್ದರು. ಆರೋಗ್ಯಕರ ಆಹಾರ ಸೇವನೆ ಮತ್ತು ಮನೆಗೆಲಸಗಳೇ ಅವರ ಆರೋಗ್ಯದ ಗುಟ್ಟಾಗಿರುತ್ತಿತ್ತು. ಆದರೆ ಇಂದಿನ ಕಾಲದ ಹೆಣ್ಣು ಮಕ್ಕಳು ಹೆಚ್ಚು ಮನೆಗೆಲಸ ಮಾಡುವುದಿಲ್ಲ. ಆರೋಗ್ಯಕರ ಆಹಾರ ಸೇವನೆಯೂ ಅಪರೂಪ. ಹಾಗಾಗಿ ಇದೇ ಸಂತಾನ ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ವೈದ್ಯರು.

ಅಲ್ಲದೇ, ಮೊದಲೆಲ್ಲ 10ರಿಂದ 12 ಮಕ್ಕಳು ಮಾಡಿಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕಾಗಿ, ಆಪರೇಷನ್ ನಡೆಯುತ್ತಿತ್ತು. ಆದರೆ ಈಗ ಒಂದು ಮಗು ಬೇಕೆಂದು ಆಪರೇಷನ್ ಮಾಡಿಸಿಕೊಳ್ಳುವ ಕಾಲ ಬಂದಿದೆ. ಇದಕ್ಕೆ ಕಾರಣ, ಇಂದಿನ ಹೆಣ್ಣು ಮಕ್ಕಳ ಜೀವನ ಶೈಲಿ. ಆಹಾರ ಶೈಲಿ ಸರಿಯಾಗಿಲ್ಲ. ಎಲ್ಲ ಕೆಲಸಕ್ಕೂ ಮಷಿನ್ ಬಂದಿದ್ದು, ದೇಹ ದಂಡನೆ ಮಾಡುವ ಅವಶ್ಯಕತೆ ಇಲ್ಲ. ಇದರಿಂದ ದೇಹದಲ್ಲಿ ಕೊಬ್ಬಿನ ಅಂಶ, ಬೊಜ್ಜು ಹೆಚ್ಚಾಗುತ್ತಿದೆ. ಹಾಗಾಗಿ ಸಂತಾನ ಸಮಸ್ಯೆ ಹುಟ್ಟಿಕೊಂಡಿದೆ.

ಬರೀ ದೈಹಿಕ ಒತ್ತಡವಲ್ಲದೇ, ಮಾನಸಿಕ ಒತ್ತಡಗಳು ಕೂಡ, ಸಂತಾನ ಹೀನತೆ ಉಂಟಾಗಲು ಕಾರಣವಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss