Health Tips: ಮೊದಲೆಲ್ಲ ಹಲವರಲ್ಲಿ ಕೆಲವರಿಗೆ ಬಿಪಿ ಶುಗರ್ ಬರುತ್ತಿತ್ತು. ಆದರೆ ಇತ್ತೀಚೆಗೆ ಕೆಲವೇ ಕೆಲವರಿಗೆ ಬಿಪಿ ಬರುವುದಿಲ್ಲ, ಬಿಟ್ಟರೆ, ಸಣ್ಣ ವಯಸ್ಸಿನಲ್ಲೇ ಹಲವರು ಬಿಪಿಗೆ ಗುರಿಯಾಗುತ್ತಿದ್ದಾರೆ. 30 ವರ್ಷ ದಾಟುವುದಕ್ಕೂ ಮುಂಚೆ ಬಿಪಿ ವಕ್ಕರಿಸಿಬಿಡುತ್ತಿದೆ. ಹಾಗಾದ್ರೆ ಬಿಪಿಯನ್ನು ಹೇಗೆ ನಿಯಂತ್ರಿಸುವುದು ಅಂತಾ ತಿಳಿಯೋಣ ಬನ್ನಿ.
ಡಾ.ಕಿಶೋರ್ ಅವರು ಬಿಪಿ ನಿಯಂತ್ರಣವನ್ನು ಮಾಡೋದು ಹೇಗೆ ಅಂತಾ ಹೇಳಿದ್ದಾರೆ. ಯಾಾವುದಾದರೂ ಒಂದು ವಿಷಯದ ಬಗ್ಗೆ ಹೆಚ್ಚು ಟೆನ್ಶನ್ ತೆಗೆದುಕೊಂಡಾಗ. ಒಂದು ವಿಷಯದ ಬಗ್ಗೆ ಹೆಚ್ಚು ಚಿಂತೆ ಮಾಡಿದಾಗ, ಆಹಾರ ಸರಿಯಾಗಿ ಸೇರುವುದಿಲ್ಲ. ಇದೆಲ್ಲವೂ ಸೇರಿ ಬಿಪಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮನೆಯಲ್ಲಿ ಕಲಹ, ಆಫೀಸಿನಲ್ಲಿ ಕೆಲಸದ ಒತ್ತಡ, ಸಂಬಂಧದಲ್ಲಿ ಒಡಕು ಇವೆಲ್ಲವೂ ಬಿಪಿ ಬರಲು ಕಾರಣವಾಗಿರುತ್ತದೆ.
ಅಲ್ಲದೇ, ನಾವು ತಿನ್ನುವ ಆಹಾರಗಳು ಕೂಡ ಬಿಪಿ ಬರಲು ಕಾರಣವಾಗುತ್ತದೆ. ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಉಪ್ಪಿನ ಅಂಶವನ್ನು ಕೊಂಚ ಕಡಿಮೆ ಮಾಡಬೇಕು. ದೇಹಕ್ಕೆ ಅವಶ್ಯಕತೆ ಇರುವಷ್ಟೇ ಉಪ್ಪಿನ ಸೇವನೆ ಮಾಡಬೇಕು. ಜಂಕ್ ಫುಡ್ ಸೇವನೆ ಮಾಡುವಾಗ, ಹೆಚ್ಚಿನ ಉಪ್ಪಿನ ಅಂಶ ನಮ್ಮ ದೇಹ ಸೇರುತ್ತದೆ. ಹಾಗಾಗಿ ಹೆಚ್ಚು ಜಂಕ್ ಫುಡ್ ಸೇವಿಸಬೇಡಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.