Health Tips: ಡಾ. ಆಂಜಿನಪ್ಪಾ ಅವರು ಈಗಾಗಲೇ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ಕರ್ನಾಟಕ ಟಿವಿ ಹೆಲ್ತ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ. ಇದೀಗ ಕಿಡ್ನಿ ಸ್ಟೋನ್ ಹೇಗೆ ಆಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಪಿತ್ತಕೋಶದಲ್ಲಿ ಕಲ್ಲಾಗಬಹುದು, ಕಿಡ್ನಿಯಲ್ಲಿ ಕಲ್ಲಾಗಬಹುದು, ಹೊಕ್ಕಳಿನಲ್ಲಿ ಕಲ್ಲಾಗುವುದು ಹೀಗೆ ದೇಹದಲ್ಲಿ ಕಲ್ಲಾಗುವ ಬಗ್ಗೆ ಕೇಳಿರುತ್ತೀರಿ. ಆದರೆ ಅದು ಹೇಗೆ ಆಗತ್ತೆ..? ಯಾವ ತಪ್ಪಿನಿಂದಾಗತ್ತೆ ಅಂತಾ ಮಾತ್ರ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಡಾ.ಆಂಜಿನಪ್ಪ ವಿವರಿಸಿದ್ದು, ಬಿಸಿಲಿನ ವಾತಾವರಣ ಎಲ್ಲಿ ಹೆಚ್ಚಾಗಿರುತ್ತದೆಯೋ, ಅಂಥ ಜಾಾಗದಲ್ಲಿ ದೇಹವನ್ನು ತಂಪು ಮಾಡಿಕೊಳ್ಳದಿದ್ದಲ್ಲಿ, ದೇಹದಲ್ಲಿ ಕಲ್ಲಾಗುತ್ತದೆ.
ಆದಷ್ಟು ಹೆಚ್ಚು ನೀರು ಕುಡಿಯಬೇಕು, ದೇಹವನ್ನು ಆದಷ್ಟು ತಂಪು ಮಾಡಿಕೊಳ್ಳಬೇಕು ಮತ್ತು ಮೂತ್ರ ಬಂದಾಗ, ಅದನ್ನು ಕಟ್ಟಿಕೊಳ್ಳದೇ, ಹೋಗಲು ಬಿಡಬೇಕು. ಇದರಲ್ಲಿ ನೀವು ಯಾವುದರ ಬಗ್ಗೆ ನಿರ್ಲಕ್ಷ್ಯ ಮಾಡಿದರೂ, ನಿಮ್ಮ ದೇಹದಲ್ಲಿ ಕಲ್ಲಾಗುವ ಸಾಧ್ಯತೆ ಇರುತ್ತದೆ.
ಇನ್ನು ಟೊಮೆಟೋ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಅಂತಾ ಹಲವರು ಹೇಳುತ್ತಾರೆ. ಆದರೆ ಆ ರೀತಿ ಎಂದಿಗೂ ಆಗುವುದಿಲ್ಲ ಅಂತಾರೆ ವೈದ್ಯರು. ಆದರೆ ನಾವು ಯಾವುದೇ ಹಣ್ಣು, ತರಕಾರಿ, ಆಹಾರವನ್ನು ಮಿತಿಯಲ್ಲಿ ಸೇವಿಸಿದರೆ, ಅದೆಂದಿಗೂ ನಮ್ಮ ಆರೋಗ್ಯ ಹಾಳು ಮಾಡುವುದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.