Health Tips: ಜೀವನದಲ್ಲಿ ನೆಮ್ಮದಿ ಅನ್ನೋದು ಎಷ್ಟು ಮುಖ್ಯವೋ, ದುಡಿಮೆ ಅನ್ನೋದು ಕೂಡ ಅಷ್ಟೇ ಮುಖ್ಯ. ದುಡಿದರೆನೇ ನಾವು ನಮಗೆ ಬೇಕಾದ ರೀತಿ ಜೀವನ ಮಾಡೋಕ್ಕೆ ಸಾಧ್ಯವಾಗೋದು. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಯಾವ ರೀತಿ ದುಡಿಯುತ್ತಿದೆ ಎಂದರೆ, ಕೆಲಸದ ಒತ್ತಡ ಹೊತ್ತು, ಸರಿಯಾಗಿ ಊಟ, ನಿದ್ರೆ ಮಾಡದೇ, ಕೆಲಸ ಮಾಡುತ್ತಿದೆ. ಇಂಥ ಕೆಲಸದ ಒತ್ತಡದಿಂದಲೇ, ಸಾವು ಸಂಭವಿಸುತ್ತಿದೆ. ಹಾಗಾದ್ರೆ ಟೆನ್ಶನ್ ಇಲ್ಲದೇ, ಕೆಲಸ ಮಾಡೋದು ಹೇಗೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
ನಾವು ಆರೋಗ್ಯವಾಗಿದ್ದಾಗ ಮಾತ್ರ, ನಾವು ನೆಮ್ಮದಿಯಿಂದ, ಖುಷಿಯಿಂದ ಇರಲು ಸಾಧ್ಯ. ನಾವು ಖುಷಿ, ನೆಮ್ಮದಿಯಿಂದ ಇದ್ದಾಗ, ಚೈತನ್ಯದಿಂದ ಕೆಲಸ ಮಾಡಲು ಸಾಧ್ಯ. ಹಾಗಾಗಿ ನಾವು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡರಷ್ಟೇ, ನಮ್ಮ ದೇಹ ನಾವು ಮಾಡುವ ಕೆಲಸಕ್ಕೆ ಸಾಥ್ ಕೊಡೋದು.
ಅದಕ್ಕಾಗಿ ನಾವು ಸರಿಯಾದ ಸಮಯಕ್ಕೆ ನಿದ್ದೆ ಮಾಡಬೇಕು. ಸರಿಯಾದ ಸಮಯಕ್ಕೆ, ಆರೋಗ್ಯಕರವಾದ ಊಟ ಮಾಡಬೇಕು. ಹಣ್ಣು- ತರಕಾರಿ ಸೇವನೆ ಮಾಡಬೇಕು. ಆದರೆ ಬೆಂಗಳೂರಿನಂಥ ಊರಿನಲ್ಲಿ, ಇದಕ್ಕೆಲ್ಲಾ ಟೈಮೇ ಸಿಗಲ್ಲಾ ಅನ್ನೋ ನೆಪ ಹೇಳಿಕೊಂಡು, ಎಷ್ಟೋ ಜನ ತಮ್ಮ ಆರೋಗ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಲೇಟಾಗಿ ಮಲಗಿ, ಲೇಟಾಗಿ ಎದ್ದು, ಸಮಯಕ್ಕೆ ಸರಿಯಾಗಿ ಊಟ ಮಾಡದೇ, ಬಿದಿ ಬದಿ ತಿಂಡಿ ತಿಂದು, ರಾತ್ರಿ ಊಟ ಮಾಡದೇ ಮಲಗುವಂಥ ಅಭ್ಯಾಸವಿಟ್ಟುಕೊಂಡವರು ಅದೆಷ್ಟೋ ಜನರಿದ್ದಾರೆ.
ಇಂಥ ಜೀವನಾಭ್ಯಾಸದಿಂದಲೇ ನಮ್ಮ ಆರೋಗ್ಯ ಹಾಳಾಗುತ್ತಿದೆ. ಕೆಲಸ ಮಾಡುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ದೇಹವನ್ನು ನೀವು ಕಾಪಾಡಿಕೊಳ್ಳಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.