Health Tips: ಮಕ್ಕಳು ತಿನ್ನಲು ಜಂಕ್ ಫುಡ್ ಕೇಳಿದರೆ, ಪೋಷಕರು ಈ ಟಿಪ್ಸ್ ಫಾಲೋ ಮಾಡಿ

Health Tips: ಇಂದಿನ ಕಾಲದ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಜಂಕ್ ಫುಡ್ ಬಂದಿದೆ. ಒಮ್ಮೆ ಅದರ ರುಚಿ ಕಂಡರೆ, ಅವುಗಳೇ ಬೇಕು ಅನ್ನುವ ರೀತಿ ಚಟ ಹಿಡಿಯುತ್ತದೆ. ನಿಮ್ಮ ಮಕ್ಕಳೂ ಕೂಡ ಇದೇ ರೀತಿ ಪಿಜ್ಜಾ, ಬರ್ಗರ್, ಚಿಪ್ಸ್ ಬೇಕು ಅಂತಾ ಹಠ ಹಿಡಿಯುತ್ತಿದ್ದರೆ, ನೀವು ನಾವು ಹೇಳುವ ಟಿಪ್ಸ್ ಅನುಸರಿಸಿ.

ಮೊದಲನೇಯದಾಗಿ ಮಕ್ಕಳಿಗೆ ಹೆಚ್ಚು ಮೊಬೈಲ್, ಟಿವಿ ತೋರಿಸಬೇಡಿ. ಮಕ್ಕಳು ಆಟಿಕೆಯೊಂದಿಗೆ, ಪುಸ್ತಕದೊಂದಿಗೆ ಹೆಚ್ಚು ಸಮಯ ಕಳೆಯುವಂತೆ ನೋಡಿಕೊಳ್ಳಿ. ಇದಕ್ಕೂ ಆಹಾರಕ್ಕೂ ಸಂಬಂಧವೇನು ಅಂತಾ ನೀವು ಕೇಳಬಹುದು. ಸ್ಕ್ರೀನ್ ಟೈಮ್ ಕಡಿಮೆ ಮಾಡಿದಷ್ಟು, ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೇ, ಸ್ಕ್ರೀನ್ ಟೈಮ್ ಹೆಚ್ಚು ಇರುತ್ತದೆಯೋ, ಅಂಥ ಮಕ್ಕಳು ಹೆಚ್ಚು ಹಠ ಮಾಡುತ್ತಾರೆ ಎಂದು ಸಾಬೀತಾಗಿದೆ.

ಎರಡನೇಯದಾಗಿ ನೀವೂ ಅತಿ ಹೆಚ್ಚು ಆರೋಗ್ಯಕರ ತಿಂಡಿ ತಿನ್ನಲು ಟ್ರೈ ಮಾಡಿ. ಅಪ್ಪ ಅಮ್ಮ ಆರೋಗ್ಯಕರ ತಿಂಡಿ ತಿಂದಷ್ಟು, ಮಕ್ಕಳೂ ಅದನ್ನೇ ಫಾಲೋ ಮಾಡುತ್ತಾರೆ. ಕೆಲವರು ತಮ್ಮ ಮಕ್ಕಳಿಗೆ ಚಾಕೋಲೇಟ್, ಬಿಸ್ಕೇಟ್ಸ್, ಕೇಕ್ ಈ ಥರದ ತಿಂಡಿಗಳ ಪರಿಚಯವೇ ಮಾಡಿರುವುದಿಲ್ಲ. ಅವುಗಳಿಂದ ಮಕ್ಕಳನ್ನು ಸಂಪೂರ್ಣವಾಗಿ ದೂರವಿಡುತ್ತಾರೆ. ಆವಾಗ ಮಕ್ಕಳಿಗೆ ಆ ರೀತಿ ತಿಂಡಿ ತಿನ್ನುವ ತವಕವಿರುವುದಿಲ್ಲ. ಇದೊಂದು ಉತ್ತಮ ಅಭ್ಯಾಸವಾಗಿದೆ.

ಮೂರನೇಯದಾಗಿ ಮಕ್ಕಳು ಹೆಚ್ಚು ನಡೆಯುವಂತೆ, ವ್ಯಾಯಾಮ, ಆಟೋಟಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ. ಹೀಗಿದ್ದಾಗ, ಮಕ್ಕಳು ಸೇವಿಸಿದ ಆಹಾರವೂ ಉತ್ತಮವಾಗಿ ಜೀರ್ಣವಾಗುತ್ತದೆ. ಮಕ್ಕಳ ಆರೋಗ್ಯವೂ ಚೆನ್ನಾಗಿರುತ್ತದೆ. ಜಂಕ್ ಫುಡ್ ಸೇವನೆ ಮಾಡಿದ್ದರೂ, ಅದು ಈ ರೀತಿ ಚಟುವಟಿಕೆಗಳ ಮೂಲಕ, ಜೀರ್ಣವಾಗಲು ಸುಲಭವಾಗುತ್ತದೆ.

About The Author