Sunday, March 16, 2025

Latest Posts

Health Tips: ಪ್ರತಿದಿನ ಅಖ್ರೋಟ್ ತಿಂದರೆ, ನಿಮಗಾಗಲಿದೆ ಅದ್ಭುತ ಆರೋಗ್ಯ ಲಾಭಗಳು

- Advertisement -

Health Tips: ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ನಟ್ಸ್ ಕೂಡ ಆರೋಗ್ಯಕ್ಕೆ ತುಂಬಾನೇ ಉತ್ತಮ. ಅದರಲ್ಲೂ ನಿಮ್ಮ ಮೆದುಳಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನೀವು ಅಖ್ರೋಟ್ ಸೇವನೆ ಮಾಡಬೇಕು. ಹಾಗಾದ್ರೆ ದಿನಕ್ಕೆ ಎಷ್ಟು ಅಖ್ರೋಟ್ ಸೇವಿಸಬೇಕು. ಹೇಗೆ ಸೇವಿಸಬೇಕು. ಇದರ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.

ಅಖ್ರೋಟ್‌ನ್ನು ಹಾಗೆ ತಿನ್ನುವ ಬದಲು ನೆನೆಸಿ ತಿನ್ನುವುದು ಉತ್ತಮ. ನೀರಿನಲ್ಲಿ ನೆನೆಸಿಟ್ಟು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಖ್ರೋಟ್ ಸೇವನೆ ಮಾಡಬೇಕು. ಇದರಿಂದ ನಿಮ್ಮ ಸ್ಕಿನ್ ಆರೋಗ್ಯವಾಗಿರುತ್ತದೆ. ಕೂದಲು ಆರೋಗ್ಯವಾಗಿರುತ್ತದೆ.

ಅಲ್ಲದೇ ಥೈರಾಯ್ಡ್ ಸಮಸ್ಯೆ ಇದ್ದವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಖ್ರೋಟ್ ನೆನೆಸಿ ತಿಂದರೆ, ಥೈರಾಯ್ಡ್‌ನಿಂದಾಗುವ ಸಮಸ್ಯೆ ಕೊಂಚ ಮಟ್ಟಿಗಾದರೂ ಕಡಿಮೆಯಾಗುತ್ತದೆ.

ಇನ್ನು ಗರ್ಭಿಣಿಯಾದವರು, ಪುಟ್ಟ ಮಕ್ಕಳಿಗೆ ನೆನೆಸಿದ ವಾಲ್ನಟ್ ನೀಡುವುದರಿಂದ ಅವರ ಮೂಳೆಯ ಬೆಳವಣಿಗೆ ಚೆನ್ನಾಗಿರುತ್ತದೆ. ಏಕೆಂದರೆ, ವಾಲ್ನಟ್‌ನಲ್ಲಿ ಕ್ಯಾಲ್ಶಿಯಂ ಹೆಚ್ಚಾಗಿದ್ದು, ಇದು ಮೂಳೆ ಗಟ್ಟಿಯಾಗುವಂತೆ ಮಾಡುತ್ತದೆ.

ಇನ್ನು ಚುರುಕಾದ, ಚೈತನ್ಯದಾಯಕ, ಆರೋಗ್ಯದಾಯಕ ಮಗು ಬೇಕು ಎಂದಲ್ಲಿ ಅಥವಾ ನಿಮ್ಮ ಮಗು ಕಲಿಯುವುದರಲ್ಲಿ ಹೆಚ್ಚು ಚುರುಕಾಗಬೇಕು ಅಂದ್ರೆ, ಮಕ್ಕಳಿಗೆ ಮತ್ತು ಗರ್ಭಿಣಿಗೆ ನೆನೆಸಿಟ್ಟ ವಾಲ್ನಟ್ ತಿನ್ನಲು ಕೊಡಬೇಕು. ಇದರಿಂದ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿ, ಮಕ್ಕಳು ಚುರುಕಾಗುತ್ತಾರೆ.

ಹೃದಯದ ಆರೋಗ್ಯ, ಕಿಡ್ನಿ ಆರೋಗ್ಯ ಚೆನ್ನಾಗಿರಬೇಕು ಅಂದ್ರೂ ಕೂಡ ನೀವು ನೆನೆಸಿಟ್ಟ ಅಖ್ರೋಟ್ ಸೇವನೆ ಮಾಡಬೇಕು.

 

- Advertisement -

Latest Posts

Don't Miss