Health Tips: ನೀನು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಉದ್ಧಾರವಾಗಬೇಕು ಅಂದ್ರೆ, ಬೆಳಿಗ್ಗೆ ಬೇಗ ಏಳಬೇಕು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಅದರಂತೆ ನಾವೂ ಇಂದು ನಿಮಗೆ ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ಬೆಳಗ್ಗಿನ ಯಾವ ಸೂತ್ರ ಪಾಾಲಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ನಿಯಮ: ಬಿಸಿ ನೀರಿನ ಸೇವನೆ ಮಾಡುವ ಮೂಲಕ ನಿಮ್ಮ ದಿನವನ್ನು ಆರಂಭಿಸಿ. ನೀರು ಹೆಚ್ಚು ಬಿಸಿಯಾಗಿ ಇರಕೂಡದು. ನೀವು ಕುಡಿಯುವಷ್ಟು ಹದವಾಗಿರಬೇಕು. ಬಿಸಿ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಕಲ್ಮಷವನ್ನು ಮಲ ಮೂತ್ರ ವಿಸರ್ಜನೆ ಮೂಲಕ ಅದು ತೆಗೆದು ಹಾಕುತ್ತದೆ. ಆಗ ನಿಮ್ಮ ಹೊಟ್ಟೆಯ ಆರೋಗ್ಯ ಚೆನ್ನಾಗಿರುತ್ತದೆ. ಹೊಟ್ಟೆಯ ಆರೋಗ್ಯ, ಜೀರ್ಣಕ್ರಿಯೆ ಚೆನ್ನಾಗಿದ್ದರೆ, ನಿಮ್ಮ ಉಳಿದ ಆರೋಗ್ಯ ಚೆನ್ನಾಗಿರುತ್ತದೆ.
ಎರಡನೇಯ ನಿಯಮ: ಪ್ರತಿದಿನ ಅರ್ಧ ಗಂಟೆಯಾಾದರೂ, ವ್ಯಾಯಮ, ವಾಕಿಂಗ್‌ಗೆ ಮೀಸಲಿಡಿ. ಇದರಿಂದ ನಿಮ್ಮ ದಿನ ಚೈತನ್ಯದಾಯಕವಾಗಿರುತ್ತದೆ. ಬೆಳಿಗ್ಗೆ ಸಿಗುವ ಸೂರ್ಯನ ಕಿರಣಕ್ಕೆ ಮೈಯೊಡ್ಡಿ ನಿಲ್ಲಿ. ವಿಟಾಮಿನ್ ಡಿ ಪಡೆಯಿರಿ. ಹೆಚ್ಚು ನಿದ್ರಿಸಿ, ಆಲಸ್ಯರಾಗಿರುವ ಬದಲು, ಈ ರೀತಿ ವ್ಯಾಯಾಮ ಮಾಡಿದರೆ, ವಾಕಿಂಗ್ ಮಾಡಿದರೆ, ನೀವು ಇಡೀದಿನ ಆ್ಯಕ್ಟೀವ್ ಆಗಿ ಇರುವಿರಲ್ಲದೇ, ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಬೇಗ ಕೈ ಕಾಲು, ಸಂಧಿವಾತದ ನೋವೆಲ್ಲ ಬರುವುದಿಲ್ಲ. ಇದರೊಂದಿಗೆ ಆರೋಗ್ಯಕರ ಆಹಾರ ಸೇವನೆ ಮಾಡಿ.
ಮೂರನೇಯ ನಿಯಮ: ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಬಳಕೆ ಮಾಡಲೇಬೇಕು. ಎದ್ದ ತಕ್ಷಣ ನಿಮ್ಮ ಕೆಲಸ ಮುಗಿಸಿ. ಮನೆಯವರೊಂದಿಗೆ ತಿಂಡಿ ತಿನ್ನುತ್ತ ಸಮಯ ಕಳೆಯಿರಿ. ಪ್ರೀತಿ ಪಾತ್ರರೊಂದಿಗೆ ನಗು ನಗುತ್ತ ಸಮಯ ಕಳೆದರೆ, ಮೆದುಳಿನ ಆರೋಗ್ಯ ಚೆನ್ನಾಗಿರುತ್ತದೆ. ಮಾನಸಿಕ ನೆಮ್ಮದಿ ಇರುತ್ತದೆ. ಬೆಳಿಗ್ಗೆಯೇ ಜಗಳವಾಡುತ್ತ, ಮೂಡ್ ಆಫ್ ಮಾಡುತ್ತ ಎದ್ದರೆ, ಇಡೀ ದಿನ ಕೆಟ್ಟದಾಗಿರುತ್ತದೆ.
ನಾಲ್ಕನೇಯ ನಿಯಮ: ಪ್ರತಿದಿನ ಸೂರ್ಯಾಸ್ತವಾಗುವುದರೊಳಗೆ, ಅಂದರೆ ಸಂಜೆಯೊಳಗೆ ಆರೋಗ್ಯಕ್ಕೂ ಉತ್ತಮವಾದ, ರುಚಿಕರವೂ ಆದ, ಬೇರೆ ಬೇರೆ ಹಣ್ಣುಗಳ ಸೇವನೆ ಮಾಡಿ. ಪ್ರತಿದಿನ ಬೇರೆ ಬೇರೆ ಹಣ್ಣುಗಳನ್ನು ಸೇವಿಸಿ. ಹಸಿ ತರಕಾರಿ ಸೇವನೆ ಮಾಡಿ. ಎಳನೀರು, ಮಜ್ಜಿಗೆ, ಮೊಸರು, ತುಪ್ಪದ ಸೇವನೆ ಮಾಡಿ. ಡ್ರೈಫ್ರೂಟ್ಸ್, ಮೊಳಕೆ ಕಾಳಿನ ಸೇವನೆ ಮಾಡಿ. ಈ ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸ ನಿಮ್ಮ ಜೀವನವನ್ನು ಅತ್ಯಂತ ಉತ್ತಮವಾಗಿರಿಸುತ್ತದೆ.
ಐದನೇಯ ನಿಯಮ: ಕೊನೆಯದಾಗಿ ಖುಷಿಯಾಗಿರುವುದನ್ನು ಕಲಿಯಿಿರಿ. ನಗು ನಗುತ್ತಲಿರಿ. ಸಿಟ್ಟು ಕಡಿಮೆ ಮಾಡಿ, ಪ್ರೀತಿ, ಕಾಳಜಿಯ ಗುಣ ನಿಮ್ಮಲ್ಲಿರಲಿ. ಹೆಚ್ಚು ಟೆನ್ಶನ್ ತೆಗೆದುಕೊಳ್ಳಬೇಡಿ. ಜೀವನಕ್ಕೆ ಬೇಕಾಗುವ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಿ. ಸುಮ್ಮನೆ ಅಂತೂ ಕೂರಬೇಡಿ. ಮನಸ್ಸಿಗೆ ಇಷ್ಟವಾಗುವ, ಆರ್ಥಿಕ ಲಾಭ ಬರುವಂಥ ಕೆಲಸ ಮಾಡಿ. ಮಹಿಳೆಯಾಗಲಿ, ಪುರುಷನಾಗಲಿ ಇಂದಿನ ಕಾಲದಲ್ಲಿ ಒಂದು ಆದಾಯದ ಮೂಲವಿದ್ದಲ್ಲಿ, ಮಾತ್ರ ಜನ ಬೇಲೆ ಕೊಡುತ್ತಾರೆ. ಹಾಗಾಗಿ ಆರ್ಥಕತೆ ಉತ್ತಮವಾಗಿರಲು ಸ್ವಲ್ಪ ಸಮಯ ಕೊಡಿ.