Friday, February 7, 2025

Latest Posts

Health Tips: ಈ ವರ್ಷದಲ್ಲಿ ಸಫಲತೆ ಪಡೆಯಲು ಈ ನಿಯಮಗಳನ್ನು ಅನುಸರಿಸಿ

- Advertisement -

Health Tips: ಈ ವರ್ಷ ನಾವು ಹೇಗೆ ಜೀವನದಲ್ಲಿ ಸಫಲರಾಗಬೇಕು ಎಂಬ ಬಗ್ಗೆ ನಿಮಗೆ ಟಿಪ್ಸ್ ನೀಡಲಿದ್ದೇವೆ.

ಮನುಷ್ಯ ಯಾವಾಗಲೂ ಸಫಲನಾಗೋದು ಅವನ ಗುಣದಿಂದ. ಅವನಿಗೆ ಪ್ರೀತಿ, ಕಾಳಜಿಯ ಗುಣ, ಕ್ಷಮಿಸುವ ಗುಣ, ಹೊಂದಿಕೊಂಡು ಹೋಗುವ ಗುಣವಿದ್ದಲ್ಲಿ, ಆತ ಜೀವನದಲ್ಲಿ ಗೆದಿದ್ದಾನೆ ಎಂದರ್ಥ. ಅಪ್ಪಿತಪ್ಪಿ ಕಳೆದ ವರ್ಷ ನೀವು ಯಾರ ಜೊತೆಗಾದರೂ ಮುನಿಸಿಕೊಂಡಿದ್ದರೆ, ಜಗಳವಾಡಿದ್ದರೆ, ಸಂಬಂಧವೇ ಬೇಡವೆಂದು ಬಿಟ್ಟಿದ್ದರೆ, ಈ ವರ್ಷ ಎಲ್ಲವನ್ನೂ ಮರೆತು ಸಂಬಂಧ ಗಟ್ಟಿಗೊಳಿಸುವ ಪ್ರಯತ್ನ ಮಾಡಿ. ಸಿಟ್ಟು ಮುಂದುವರಿಸಿದಷ್ಟು ನಷ್ಟವೇ ಹೊರತು, ಲಾಭವಾಗುವುದಿಲ್ಲ.

ಎರಡನೇಯದಾಗಿ ನಿಮ್ಮ ಜೀವನದ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಬಿಡಿ. ಸುಳ್ಳು ಹೇಳುವುದು, ನೆಪ ಮಾಡುವುದು, ಆಲಸ್ಯ, ಬೇಗ ಸೋಲನ್ನಪ್ಪಿಕೊಳ್ಳುವುದು, ಪ್ರಯತ್ನಿಸದೇ ಸುಮ್ಮನಿರುವುದು, ಇದೆಲ್ಲವೂ ಕೆಟ್ಟ ಅಭ್ಯಾಸಗಳೇ. ಹಾಗಾಗಿ ನೀವು ಜೀವನದಲ್ಲಿ ಯಶಸ್ಸು ಕಾಣಬೇಕು ಅಂದ್ರೆ, ನೀವು ಇಂಥ ಕೆಟ್ಟ ಅಭ್ಯಾಸಗಳನ್ನು ಬಿಡಬೇಕು. ಆಲಸ್ಯ ಬಿಟ್ಟು ಕೆಲಸ ಮಾಡಬೇಕು. ಪ್ರಯತ್ನ ಪಡದೇ ಸೋಲೊಪ್ಪಿಕೊಳ್ಳಬಾರದು.

ಮೂರನೇಯದಾಗಿ ನಿಮ್ಮ ಖುಷಿಗೆ ನೀವು ಬೆಲೆ ಕೊಡಿ. ನಾವು ಇತರರ ಖುಷಿಗೆ ಹೆಚ್ಚು ಬೆಲೆ ಕೊಟ್ಟಾಗಲೇ, ನಮ್ಮ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ನಮ್ಮ ಖುಷಿಗೆ ನಾವು ಬೆಲೆ ಕೊಡಬೇಕು. ಹೆಚ್ಚು ಟೆನ್ಶನ್ ತೆಗೆದುಕೊಳ್ಳುವುದು, ಬೇರೆಯವರಿಗಾಗಿ ನಮ್ಮ ಆಸೆಯನ್ನು ತ್ಯಾಗ ಮಾಡುವುದು ಇದನ್ನೆಲ್ಲ ಕೊನೆ ವರ್ಷಕ್ಕೆ ಅಂತ್ಯಗೊಳಿಸಿ. ಈಗೇನಿದ್ದರೂ ನಿಮ್ಮ ಖುಷಿಯನ್ನು ನೀವು ಕಂಡುಕೊಳ್ಳಿ. ನೆಮ್ಮದಿಯಾಗಿರುವ ಮಾರ್ಗ ಹುಡುಕಿ.

ನಾಲ್ಕನೇಯದಾಗಿ ಸಿಟ್ಟು ಕಡಿಮೆ ಮಾಡಿ. ಮನುಷ್ಯ ಜೀೀವನದಲ್ಲಿ ಫೇಲ್ ಆಗುವುದೇ ಅವನಿಗಿರುವ ಸಿಟ್ಟಿನಿಂದ. ಸಿಟ್ಟಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರೀತಿಯಿಂದ, ತಾಳ್ಮೆಯಿಂದಷ್ಟೇ ನೀವು ಜೀವನದಲ್ಲಿ ಯಶಸ್ಸು, ಪ್ರೀತಿ ಗಳಿಸಬಹುದು. ಸಿಟ್ಟಿನಿಂದ ಇರುವ ಪ್ರೀತಿ, ಯಶಸ್ಸನ್ನೂ ನೀವು ಕಳೆದುಕೊಳ್ಳುತ್ತೀರಿ.

ಕೊನೆಯದಾಗಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಕೆಲಸ ಕೆಲಸವೆಂದು ಕೆಲಸದಲ್ಲೇ ಮುಳುಗಿ, ಮುಂದೊಂದು ದಿನ ಆರೋಗ್ಯ ಕೈಕೊಟ್ಟಾಗ, ನಾವು ವ್ಯಾಯಾಮ ಮಾಡಬೇಕಿತ್ತು. ವಾಕಿಂಗ್ ಮಾಡಬೇಕಿತ್ತು. ಆರೋಗ್ಯಕರ ಆಹಾರ ಸೇವಿಸಬೇಕಿತ್ತು ಅಂತಾ ಕೊರಗುವ ಬದಲು. ಈಗಿಂದಲೇ, ವಾಕಿಂಗ್, ವ್ಯಾಯಾಮ ಮಾಡಿ. ಆರೋಗ್ಯಕರ ಆಹಾರ ಸೇವಿಸಿ, ಕಣ್ತುಂಬ ನಿದ್ರೆ ಮಾಡಿ, ನಗು ನಗುತ್ತ ಜೀವಿಸಿ.

- Advertisement -

Latest Posts

Don't Miss