Health Tips: ವೈದ್ಯೆಯಾಗಿರುವ ದೀಪ್ಶಿಕಾ ಝಾ ಅವರು ಮುಟ್ಟಿನ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಹೆಣ್ಣು ಮಕ್ಕಳಲ್ಲಿ ಕಾಮನ್ ಆಗಿ ಕಂಡು ಬರುವ ಸಮಸ್ಯೆ ಅಂದ್ರೆ, ಇರ್ರೆಗ್ಯೂಲರ್ ಪಿರಿಯಡ್ಸ್. ಅಂದ್ರೆ ಪ್ರತೀ ತಿಂಗಳು ಮುಟ್ಟಾಗದೇ, 2- 3 ತಿಂಗಳಿಗೊಮ್ಮೆ ಮುಟ್ಟಾಗುವ ಸಮಸ್ಯೆ. ಈ ಸಮಸ್ಯೆಯಿಂದ ಏನೇನು ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ ನೋಡಿ.
ನಾರ್ಮಲ್ ಆಗಿ ಪಿರಿಯಡ್ಸ್ ಆದ್ರೆ, ಪ್ರತೀ ತಿಂಗಳು ಹೆಚ್ಚೂ ಅಲ್ಲದೇ, ಕಡಿಮೆಯೂ ಅಲ್ಲದೇ, ಸರಿಯಾದ ಪ್ರಮಾಣದಲ್ಲಿ ಬ್ಲೀಡಿಂಗ್ ಆಗುತ್ತದೆ. ಸಮಯಕ್ಕೆ ಸರಿಯಾಗಿ ಪಿರಿಯಡ್ಸ್ ಆಗುತ್ತದೆ. ನಿಮಗೆ ಸಮಯಕ್ಕೆ ಸರಿಯಾಗಿ ಪಿರಿಯಡ್ಸ್ ಆಗದೇ, 1 ತಿಂಗಳು, 2 ತಿಂಗಳು ಸ್ಕಿಪ್ ಆಗುತ್ತಿದೆ ಅಂತಾದರೆ, ಅದು ಇರ್ರೆಗ್ಯೂಲರ್ ಪಿರಿಯಡ್. ನಿಮಗ್ಯಾವತ್ತೂ ಹೀಗಾಗಿರಲೇ ಇಲ್ಲ. ನೀವು ಆರೋಗ್ಯವಂತರಾಗಿದ್ದು, ಸಡನ್ ಆಗಿ ಹೀಗಾಗಿದೆ. ಮತ್ತು ನೀವು ವಿವಾಹಿತರು ಎಂದಾದರೆ, ಒಮ್ಮೆ ಪ್ರೆಗ್ನೆನ್ಸಿ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ.
ಇನ್ನು ಸರಿಯಾಗಿ ಪಿರಿಯಡ್ಸ್ ಆಗದಿರಲು ಕಾರಣವೇನು ಅಂದ್ರೆ, ನಮ್ಮ ಇತ್ತೀಚಿನ ಜೀವನ ಶೈಲಿ. ಮನೆಗೆಲದಲ್ಲಿ ಭಾಗಿಯಾಗದೇ, ವಾಹನದಲ್ಲೇ ಕುಳಿತು, ಆಫೀಸಿಗೆ ಹೋಗಿ, ಅಲ್ಲಿ ಕುಳಿತುಕೊಂಡೆ ಕೆಲಸ ಮಾಡಿ. ಮತ್ತೆ ವಾಹನದಲ್ಲೆ ಮನೆಗೆ ಬಂದು, ಅನಾರೋಗ್ಯಕರ ಆಹಾರ ಸೇವನೆ ಮಾಡುವುದರಿಂದಲೇ ಇರ್ರೆಗ್ಯೂಲರ್ ಪಿರಿಯಡ್ಸ್ ಬರುತ್ತಿದೆ.
ಯಾಕಂದ್ರೆ ನಮ್ಮ ದೇಹಕ್ಕೆ ಹೆಚ್ಚು ಕೆಲಸ ಸಿಗುತ್ತಿಲ್ಲ. ವ್ಯಾಯಾಮ, ನಡಿಗೆ, ಜಾಗಿಂಗ್ ಏನೂ ಮಾಡದ ಕಾರಣ, ಮನೆಗೆಲಸವೂ ಮಾಡದ ಕಾರಣ, ದೇಹ ಬಡ್ಡುಗಟ್ಟುತ್ತದೆ. ಈ ವೇಳೆ ದೇಹದಲ್ಲಿ ರಕ್ತ ಸಂಚಾರಕ್ಕೆ ಅನಾನೂಕೂಲತೆ ಉಂಟಾಗಿ, ಈ ರೀತಿ ಪಿರಿಯಡ್ಸ್ ಸಮಸ್ಯೆ ಬರುತ್ತದೆ.
ಅಲ್ಲದೇ, ಯಾರು ಸಮಯಕ್ಕೆ ಸರಿಯಾಗಿ, ಆರೋಗ್ಯಕರ ಆಹಾರ ಸೇವಿಸುವುದಿಲ್ಲವೋ, ಪೋಷಕಾಂಶ, ಪ್ರೊಟೀನ್ ಭರಿತವಾದ ಹಣ್ಣು, ತರಕಾರಿ, ಹಾಲು, ಮೊಸರು, ತುಪ್ಪ, ಕಾಳು, ನೀರು ಇವೆಲ್ಲವನ್ನೂ ಸರಿಯಾಗಿ ಸೇವಿಸುವುದಿಲ್ಲವೋ, ಯಾರು ಹೆಚ್ಚು ಬೇಕರಿ, ಜಂಕ್ ಫುಡ್ ಸೇವಿಸುತ್ತಾರೋ, ಅಂಥವರಲ್ಲೇ ಹೆಚ್ಚಾಗಿ ತಿಂಗಳ ಸಮಸ್ಯೆ ಕಂಡುಬರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.