Health Tips: ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆದೋ, ಕೆಟ್ಟದ್ದೋ ಅನ್ನೋ ಬಗ್ಗೆ ಇಂದು ವೈದ್ಯರು ವಿವರಿಸಲಿದ್ದಾರೆ. ಇದರ ಅರ್ಥ, ಹಲವರು ಮಲಗುವ ಮುನ್ನ ಮೂಗಿನಿಂದ ಉಸಿರಾಡತ್ತಾರೆ. ಆದರೆ ಮಲಗಿದ್ದಾಗ ಬಾಯಲ್ಲಿ ಉಸಿರಾಡುತ್ತಾರೆ. ಹಾಗಾದ್ರೆ ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆಯದ್ದಾ, ಕೆಟ್ಟದ್ದಾ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಲಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಶ್ವಾನ ಮೂಗಿಗಿಂತ ಹೆಚ್ಚಾಗಿ ಬಾಯಿಯಿಂದ ಉಸಿರಾಡುತ್ತದೆ. ಹಾಗಾಗಿ ಅದರ ಆಯಸ್ಸು ಕಡಿಮೆ. ಅಂದರೆ, ಯಾವ ಜೀವಿ ಬಾಯಿಯಿಂದ ಉಸಿರಾಡುತ್ತದೋ, ಅಂಥ ಜೀವಿಗೆ ಆಯಸ್ಸು ಕಡಿಮೆಯಾಗುತ್ತದೆ. ಹಾಗಾಗಿ ಬಾಯಿಯಿಂದ ಉಸಿರಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾರೆ ವೈದ್ಯರು.
ಆದರೆ ಯಾರೂ ಬೇಕಂತಲೇ ಬಾಯಲ್ಲಿ ಉಸಿರಾಡುವುದಿಲ್ಲ. ನಿದ್ದೆ ಬಂದಾಗ, ನಮಗೆ ಏನು ಮಾಡುತ್ತಿದ್ದೇವೆಂದು ಗೊತ್ತಿರುವುದಿಲ್ಲ. ಆಗ ಬಾಯಿಬಿಟ್ಟು ಉಸಿರಾಡಲು ಶುರು ಮಾಡುತ್ತೇವೆ. ಈ ಅಭ್ಯಾಸ ಯಾರಿಗೆ ಈ ಅಭ್ಯಾಸವಿರುತ್ತದೆಯೋ, ಅಂಥವರಿಗೆ ಅರ್ಧ ಜೀರ್ಣ ರೋಗವಿರುತ್ತದೆ. ಅಂದರೆ ತಿಂದ ಆಹಾರವನ್ನು ಸಂಪೂರ್ಣವಾಗಿ ಜೀರ್ಣ ಮಾಡುವ ಶಕ್ತಿ ಅವರಲ್ಲಿ ಇರುವುದಿಲ್ಲ.
ಯಾಕೆ ಹೀಗೆ ಎಂದರೆ, ಬಾಯಿಯಿಂದ ಉಸಿರಾಡುತ್ತ ನಿದ್ರಿಸಿದಾಗ, ನಮ್ಮ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ. ಆಗ, ಹೊಟ್ಟೆ ತನ್ನ ಕಾರ್ಯ ನಿರ್ವಹಿಸುವುದನ್ನು ನಿಧಾನ ಮಾಡುತ್ತದೆ. ಇನ್ನು ಬಾಯಿಯಿಂದ ಉಸಿರಾಡಿದಾಗ, ಕೆಲವು ಬ್ಯಾಕ್ಚಿರಿಯಾಗಳು ನಮ್ಮ ದೇಹ ಸೇರುತ್ತದೆ. ಹಾಗಾಗಿ ಬಾಯಿಯಿಂದ ಉಸಿರಾಡುವುದು ಆರೋಗ್ಯಕ್ಕೆ ಹಾನಿಕಾರಕ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.