Health Tips: ಕೆಲವೊಮ್ಮೆ ನಾವು ಆರೋಗ್ಯವಾಗಿ ಇರುವಂತೆ ಕಂಡರೂ ನಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆ ಇರಬಹುದು. ಹಾಗಾಗಿ ವರ್ಷಕ್ಕೊಮ್ಮೆಯಾದರೂ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ. ಅದರಲ್ಲೂ ಕಿಡ್ನಿ ಆರೋಗ್ಯದ ಕಡೆ ಗಮನ ಕೊಡಲೇಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಕಿಡ್ನಿ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಬೇಕು. ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಜೊತೆಗೆ ರಕ್ತಪರೀಕ್ಷೆ, ಕಿಡ್ನಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇನ್ನು ನಿಮಗೇನಾದರೂ ಕಿಡ್ನಿ ಆರೋಗ್ಯದಲ್ಲಿ ತೊಂದರೆ ಇದ್ದರೆ, ಅದಕ್ಕೆ ಆತಂಕ ಪಡದೇ, ಚಿಕಿತ್ಸೆ ಪಡೆಯಬೇಕು. ಎಲ್ಲ ರೀತಿಯ ಚಿಕಿತ್ಸೆ ಇದ್ದು, ಅದನ್ನು ತೆಗೆದುಕೊಂಡರೆ ಯಾವುದೇ ತೊಂದರೆಯಾಗುವುದಿಲ್ಲ ಅಂತಾರೆ ವೈದ್ಯರು.
ಇನ್ನು ಪ್ರೋಟೀನ್ ಪೌಡರ್ ಬಳಸುವ ಬಗ್ಗೆ ಮಾತನಾಡಿರುವ ವೈದ್ಯರು, ಎಲ್ಲ ಪ್ರೋಟೀನ್ ಪೌಡರ್ ಅನ್‌ಸೇಫ್ ಎನ್ನಲು ಸಾಧ್ಯವಿಲ್ಲ. ಅದರ ಗುಣಮಟ್ಟ ನೋಡಬೇಕಾಗುತ್ತದೆ. ಕೆಲವೊಂದು ಆರೋಗ್ಯಕ್ಕೆ ಒಳ್ಳೆಯದು ಮಾಡಿದ್ರೆ, ಕೆಲವು ಪ್ರೋಟೀನ್ ಪೌಡರ್ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗಬಹುದು. ಹಾಗಾಗಿ ಎಲ್ಲ ಪ್ರೋಟೀನ್ ಪೌಡರ್ ಅನ್‌ಸೇಫ್ ಅನ್ನಲು ಸಾಧ್ಯವಿಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.