Health Tips: ಮೊಣಕಾಲು ನೋವು ತುಂಬಾ ಕಾಡ್ತಿದ್ಯಾ? ಇಲ್ಲಿವೆ ಮನೆಮದ್ದುಗಳು

Health Tips: ವಯಸ್ಸಾದ ಮೇಲೆ ಮೊಣಕಾಲು ನೋವು ಬರುವುದು ಸಹಜ. ಆದರೆ ಆ ನೋವು ಅತಿಯಾದಾಗ, ಸಹಿಸಲು ಅಸಾಧ್ಯವಾಗುತ್ತದೆ. ಹಾಗಾದ್ರೆ ತುಂಬ ಮೊಣಕಾಲು ನೋವು ಬಂದರೆ, ಏನು ಮಾಡಬೇಕು ಅನ್‌ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋಡಿ.

ವಯಸ್ಸಾಗುತ್ತಿದ್ದಂತೆ, ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತ ಬಂದಾಗ, ನಮ್ಮ ಮಂಡಿ ಚಿಪ್ಪು ಸವೆಯುತ್ತ ಬರುತ್ತದೆ. ಆಗಲೇ ಮೊಣಕಾಲು ನೋವು ಕಾಡೋದು. ಇನ್ನು ಕೆಲವರಿಗೆ ವಾತ ದೋಷದಿಂದ ದೇಹದ ತೂಕ ಹೆಚ್ಚಾಗಿರುತ್ತದೆ. ಹಾಗಾಗಿ ದೇಹದ ತೂಕವೆಲ್ಲ ಕಾಲಿನ ಮೇಲೆ ಬಿದ್ದು, ಮೊಣಕಾಲು ನೋವು ಬರುತ್ತದೆ.

ಉಪವಾಸ ಮಾಡುವುದು, ಹೊತ್ತಿಗೆ ಸರಿಯಾಗಿ ಆಹಾರ ತೆಗೆದುಕೊಳ್ಳದೇ ಇರುವುದು, ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು. 8 ಗಂಟೆಗೂ ಕಡಿಮೆ ಕಾಲ ನಿದ್ದೆ ಮಾಡುವುದು. ಇವೆಲ್ಲವೂ ಮೂಳೆ ಸವೆಯಲು, ದೇಹದಲ್ಲಿ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.

ಇನ್ನು ಮುಖ್ಯವಾಗಿ ಹಾಲು, ತುಪ್ಪ, ಮೊಸರು, ಮಜ್ಜಿಗೆ, ಪನೀರ್, ಇವೆಲ್ಲವನ್ನೂ ಸೇವಿಸಿದರೆ, ಅದರಿಂದ ನಮ್ಮ ದೇಹಕ್ಕೆ ಕ್ಯಾಲ್ಶಿಯಂ ಸಿಕ್ಕು, ನಮ್ಮ ಮೂಳೆಗಳು ಗಟ್ಟಿಗೊಳ್ಳುತ್ತದೆ. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನ ಸೇವಿಸುವುದನ್ನೇ ಬಿಟ್ಟಿದ್ದರೆ, ಟೀ-ಕಾಫಿ ಸೇವನೆ ಹೆಚ್ಚು ಮಾಡಿದ್ದರೆ, ಅದರಿಂದಲೂ ಮೂಳೆ ಸವೆತವಾಗುತ್ತದೆ. ಹಾಗಾದ್ರೆ ಈ ಸಮಸ್ಯೆಗೆ ಮನೆಯಲ್ಲೇ ಮದ್ದು ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

About The Author