Tuesday, October 15, 2024

Latest Posts

Indian Temple: ಈ ದೇವಸ್ಥಾನದಲ್ಲಿ ಎಂಥ ದುಷ್ಟಶಕ್ತಿ ಇದ್ದರೂ, ಉಚ್ಛಾಟನೆ ಶತಸಿದ್ಧ

- Advertisement -

Temple Story: ಭಾರತದಲ್ಲಿ ದಿಕ್ಕಿಗೊಂದು ದೇವಸ್ಥಾನವಿದೆ. ಆದರೆ ಕೆಲವೇ ಕೆಲವು ದೇವಸ್ಥಾನಗಳು ಪ್ರಸಿದ್ಧ ಮತ್ತು ಪವಾಡಕ್ಕೆ ಹೆಸರುವಾಸಿಯಾಗಿದೆ. ಅಂಥ ದೇವಸ್ಥಾನದಲ್ಲಿ ರಾಜಸ್ಥಾನದ ಬಾಲಾಜಿ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ತಿಳಿಯೋಣ ಬನ್ನಿ..

ರಾಜಸ್ಥಾನದ ದೌಸಾ ಎಂಬಲ್ಲಿ ಬಾಲಾಜಿ ದೇವಸ್ಥಾನವಿದೆ. ಬಾಲಾಜಿ ಎಂದರೆ, ದಕ್ಷಿಣ ಭಾರತದಲ್ಲಿ ತಿರುಪತಿ ಎಂದರ್ಥ. ಆದರೆ ರಾಜಸ್ಥಾನದ ಬಾಲಾಜಿ ದೇವಸ್ಥಾನದಲ್ಲಿ ಬಾಲಾಜಿ ಎಂದರೆ, ಹನುಮಂತ. ಈ ಹನುಮನ ದೇವಸ್ಥಾನದಲ್ಲಿ ದೇಹದಲ್ಲಿ ದೆವ್ವ, ಪಿಶಾಚಿ ಸೇರಿದ್ದರೆ, ಭೂತ-ಪ್ರೇತದ ಕಾಟವಿದ್ದರೆ, ಬಿಡಿಸಲಾಗುತ್ತದೆ.

ಮೆಹಂದಿಪುರ ಬಾಲಾಜಿ ಅಂತಲೇ ಫೇಮಸ್ ಆಗಿರುವ ಈ ದೇವಸ್ಥಾನದಲ್ಲಿ ಕೆಲವೊಂದು ನಿಯಮಗಳಿದೆ. ಅದೇನೆಂದರೆ, ನೀವು ಈ ದೇವಸ್ಥಾನದಿಂದ ಮತ್ತು ಈ ಊರಿನಿಂದ ಯಾವ ತಿಂಡಿ ತಿನಿಸು, ನೀರನ್ನು ತೆಗೆದುಕೊಂಡು ನಿಮ್ಮ ಮನೆಗೆ ಹೋಗುವಂತಿಲ್ಲ. ಮತ್ತು ನಿಮ್ಮ ಮನೆಯಿಂದ ಈ ಊರಿಗೆ ಕಾಲಿಡುವಾಗ ಯಾವುದೇ ತಿಂಡಿ, ನೀರು ತರುವಂತಿಲ್ಲ.

ಹಾಗೇನಾದರೂ ನೀವು ಈ ನಿಯಮವನ್ನು ಮುರಿದು ಇಲ್ಲಿಂದ ಏನಾದರೂ ತೆಗೆದುಕೊಂಡು ಹೋದರೆ, ಅಥವಾ ನಿಮ್ಮ ಮನೆಯಿಂದ ನೀರು ಆಹಾರ ತೆಗೆದುಕೊಂಡು ಈ ಊರಿಗೆ ಕಾಲಿಟ್ಟರೆ, ಪ್ರೇತ ನಿಮ್ಮೊಂದಿಗೆ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಈ ನಿಯಮವನ್ನು ಜನ ಕಟ್ಟುನಿಟ್ಟಾಗಿ ಪಾಲಿಸಬೇಕು.

ಇನ್ನು ಇಲ್ಲಿ ಪ್ರೇತಬಾಧೆ ಇರುವವರನ್ನು ಗೋಡೆಗೆ ಕಟ್ಟಿ, ದೆವ್ವ ಬಿಡಿಸಲಾಗುತ್ತದೆ. ಕುದಿಯುವ ನೀರನ್ನು ಪ್ರೇತವಿರುವವರ ದೇಹದ ಮೇಲೆ ಹಾಕಿ, ಪ್ರೇತವನ್ನು ಓಡಿಸುತ್ತಾರೆ.

- Advertisement -

Latest Posts

Don't Miss