Health Tips: ಕಿಡ್ನಿ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಅನ್ನೋ ಬಗ್ಗೆ ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕರ್ನಾಟಕ ಟಿವಿಯಲ್ಲಿ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ನಮ್ಮ ದೇಹದಲ್ಲಿರುವ ಎಲ್ಲಾ ಮುಖ್ಯವಾದ ಅಂಗಗಳಿಗಿಂತಲೂ ಮುಖ್ಯ ಅಂದ್ರೆ ಅದು ಕಿಡ್ನಿ. ಯಾಕಂದ್ರೆ ಕಿಡ್‌ನಿಯ ಆರೋಗ್ಯ ಹಾಳಾದ್ರೆ, ಅದಕ್ಕಾಗುವ ಖರ್ಚು ಸಣ್ಣಪುಟ್ಟದ್ದಲ್ಲ. ಹಾಗಾದ್ರೆ ಯಾರು ಕಿಡ್ನಿ ಕಸಿ ಮಾಡಿಸಿಕೊಳ್ಳಬೇಕಾಗತ್ತೆ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಕಿಡ್ನಿ ಆರೋಗ್ಯ ಹಾಳಾದ್ರೆ, ಅದಕ್ಕಾಗಿ 10ರಿಂದ 15 ಲಕ್ಷದವರೆಗೆ ಮೊದಲನೇಯ ಹಂತದ ಆಪರೇಷನ್ ಖರ್ಚಾಗುತ್ತದೆ. ಈ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಅಲ್ಲದೇ ಸಾವು ಬರುವವರೆಗೂ ನಾವು ತಿಂಗಳಿಗೆ 30 ಸಾವಿರದವರೆಗೆ ಮೆಡಿಸಿನ್‌ಗೆ ಹಣ ಹಾಕಬೇಕಾಗುತ್ತದೆ. ಹಾಗಾಗಿಯೇ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಅಂತಾರೆ ವೈದ್ಯರು.
ಇನ್ನು ಕಿಡ್ನಿ ಕಸಿ ಮಾಡಿಸುವ ಸಂದರ್ಭ ಯಾವಾಗ ಬರುತ್ತದೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದು, ಕಿಡ್ನಿ ತನ್ನ ಕಾರ್ಯವನ್ನು ಶೇ.15ಕ್ಕಿಂತ ಕಡಿಮೆ ಮಾಡುತ್ತಾರೋ, ಆ ವೇಳೆಯಲ್ಲಿ ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾಗುತ್ತದೆ. ಏಕೆಂದರೆ, ಅದೇ ಆ ಮನುಷ್ಯನ ಕೊನೆಯ ಹಂತವಾಾಗಿರುತ್ತದೆ. ಕಿಡ್ನಿ ಕಸಿ ಮಾಡದಿದ್ದಲ್ಲಿ, ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ ಕಿಡ್ನಿ ಕಸಿ ಯಾವ ರೀತಿ ಮಾಡುತ್ತಾರೆ..? ಇದಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಅನ್ನೋ ಬಗ್ಗೆ ತಿಳಿಯಬೇಕು ಅಂದ್ರೆ ವೀಡಿಯೋ ನೋಡಿ.