Health Tips: ಲೂಸ್ ಮೋಷನ್ ಕಾಮನ್ ಆರೋಗ್ಯ ಸಮಸ್ಯೆ ಆದ್ರೂ, ಇದು ಜನರ ಜೀವವನ್ನೂ ತೆಗೆದುಕೊಳ್ಳುತ್ತೆ. ಹಾಗಾಗಿ ಲೂಸ್ ಮೋಷನ್ ಅಂತಾ ನಿರ್ಲಕ್ಷ್ಯ ವಹಿಸಬಾರದು. ಈ ರೀತಿಯಾದಾಗ, ಮನೆಮದ್ದನ್ನು ಮಾಡಿ, ಕಂಟ್ರೋಲಿಗೆ ಬರದಿದ್ದಲ್ಲಿ, ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡಿಯಲೇಬೇಕು. ವೈದ್ಯರು ಲೂಸ್ ಮೋಷನ್‌ಗೆ ಯಾವ ರೀತಿಯ ಮನೆ ಮದ್ದು ಮಾಡಬೇಕು ಎಂದು ಹೇಳಿದ್ದಾರೆಂದು ತಿಳಿಯೋಣ ಬನ್ನಿ..
ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದಲ್ಲಿ, ಅಥವಾ ಆ ಆಹಾರದಿಂದ ನಮಗೆ ಅಲರ್ಜಿ ಇದ್ದಲ್ಲಿ, ಅಥವಾ ಆ ಆಹಾರವನ್ನು ಸ್ವಚ್ಛವಾದ ಜಾಗದಲ್ಲಿ, ಉತ್ತಮ ಕ್ವಾಲಿಟಿಯ ಪದಾರ್ಥ ಬಳಕೆ ಮಾಡಿ, ಮಾಡದಿದ್ದಲ್ಲಿ, ನಮಗೆ ಲೂಸ್ ಮೋಷನ್ ಆರಂಭವಾಗುತ್ತದೆ. ಈ ವೇಳೆ ನಮ್ಮ ದೇಹದಲ್ಲಾಗುವ ಮೊದಲ ಏರುಪೇರೆಂದರೆ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು.
ಹಾಗಾಗಿ ಲೂಸ್ ಮೋಷನ್ ಶುರುವಾದಾಗ, ಅತೀ ತಣ್ಣಗಿನ ಅಥವಾ ಅತೀ ತಂಪಾದ ಆಹಾರ ಸೇವಿಸಬಾರದು. ಅತೀ ಬಿಸಿಯಾದ ನೀರನ್ನು ಕುಡಿಯಬಾರದು. ರೂಮ್ ಟೆಂಪ್ರೆಚರ್‌ನಲ್ಲಿರುವ ನೀರು. ಎಳನೀರು, ಮಜ್ಜಿಗೆ, ಇಂಥವನ್ನು ಸೇವಿಸಬೇಕು.
ಇನ್ನು ಇದಕ್ಕಿರುವ ಮನೆ ಮದ್ದು ಅಂದ್ರೆ, ಒಂದರಿಂದ ಒಂದೂವರೆ ಚಮಚ ಮೊಸರು, ಮುಕ್ಕಾಲು ಚಮಚ ಮೆಂತ್ಯೆಯನ್ನು ಸೇರಿಸಿ, ನುಂಗಬೇಕು. ಇನ್ನೊಂದು ಮನೆ ಮದ್ದು ಅಂದ್ರೆ, ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ, ಫೈನ್ ಪುಡಿ ಮಾಡಿ. ಒಂದು ಗ್ಲಾಸ್ ಮಜ್ಜಿಗೆಗೆ ದಾಳಿಂಬೆ ಸಿಪ್ಪೆಯ ಪುಡಿ ಒಂದು ಸ್ಪೂನ್ ಮತ್ತು ಚಿಟಿಕೆ ಸೈಂಧವ ಲವಣ ಸೇರಿಸಿ, ಕುಡಿಯಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.