Health Tips: ಬೆಳಿಗ್ಗೆ ಎದ್ದು ಹಲವರಿಗೆ ಖಾಲಿ ಹೊಟ್ಟೆಯಲ್ಲಿ ಟೀ- ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದು ಅತ್ಯಂತ ಕೆಟ್ಟ ಅಭ್ಯಾಸ. ಈ ಅಭ್ಯಾಸದಿಂದ ಗ್ಯಾಸ್ಟಿಕ್ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಸೇರಿ ಹಲವು ಸಮಸ್ಯೆಗಳು ಉದ್ಭವಿಸುತ್ತದೆ. ಆದರೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಸಣ್ಣ ಲೋಟೆಯಲ್ಲಿ ಜೀರಿಗೆ ಕಶಾಯ ಮಾಡಿ ಸೇವಿಸಿದರೆ, ಅದರಿಂದ ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮ ಲಾಭ ಸಿಗಲಿದೆ. ಹಾಗಾದ್ರೆ ಜೀರಿಗೆ ನೀರಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.
ಜೀರಿಗೆ ಕಶಾಯವೆಂದರೆ, ಒಂದು ಗ್ಲಾಸ್ ನೀರನ್ನು ಕುದಿಸಿ, ಅದಕ್ಕೆ ಒಂದು ಸ್ಪೂನ್ ಜೀರಿಗೆ ಹಾಕಿ, ಈ ಕಶಾಯ ಕುದಿ ಬಂದು ಅರ್ಧ ಗ್ಲಾಸ್ ಆಗಬೇಕು. ಆಗ ಜೀರಿಗೆ ಕಶಾಯ ರೆಡಿ. ಈ ಜೀರಿಗೆ ಕಶಾಯವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಆರೋಗ್ಯಕ್ಕೆ ತುಂಬಾನೇ ಉತ್ತಮ. ಈ ಕಶಾಯ ಸೇವನೆಯಿಂದ ನಿಮ್ಮ ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ನೋವಿನ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಸೇರಿ ಎಲ್ಲ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಶುಗರ್ ಇದ್ದವರು ಜೀರಿಗೆ ಕಶಾಯ ಕುಡಿದರೆ, ಶುಗರ್ ಕಂಟ್ರೋಲಿಗೆ ಬರುತ್ತದೆ. ದೇಹದಲ್ಲಿ ಇನ್ಸೋಲಿನ್ ಪ್ರಮಾಣ ನಿಯಂತ್ರಿಸಲು ಇದು ಸಹಕಾರಿಯಾಗಿದೆ.
ದೇಹದಲ್ಲಿ ಉಷ್ಣ ಹೆಚ್ಚಾಗಿ, ಹೊಟ್ಟೆ ಉರಿಯುತ್ತಿದೆ. ಉರಿಮೂತ್ರವಾಗುತ್ತಿದೆ. ಸರಿಯಾಗಿ ಮಲ ವಿಸರ್ಜನೆಯಾಗುತ್ತಿಲ್ಲ ಎಂದಲ್ಲಿ ನೀವು ಜೀರಿಗೆ ಕಶಾಯದ ಸೇವನೆ ಮಾಡಿ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ಕಶಾಯ ಕುಡಿದರೆ ದೇಹಕ್ಕೆ ತಂಪು. ದೇಹ ತಂಪಾದಾಗ, ನಿಮಗೆ ಮಲ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ. ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೇ ಹೊಟ್ಟೆ ಉರಿ, ಉರಿ ಮೂತ್ರ ಎಲ್ಲವೂ ಶಮನವಾಗುತ್ತದೆ.
ಇನ್ನು ನಿಮ್ಮ ದೇಹದ ತೂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಹದ ತೂಕ ಇಳಿಸಬೇಕು ಎಂದಲ್ಲಿ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಕಶಾಯ ಸೇವನೆ ಮಾಡಿದ್ರೆ, ನಿಮ್ಮ ದೇಹದ ತೂಕ ಕ್ರಮೇಣ ಕಡಿಮೆಯಾಗುತ್ತದೆ. ಆದರೆ ನೀವು ಇದರ ಸೇವನೆಯೊಂದಿಗೆ ಡಯಟ್ ಮತ್ತು ವ್ಯಾಯಾಮ ಮಾಡುವುದು ಕೂಡ ಅಷ್ಟೇ ಮುಖ್ಯ.