Saturday, June 21, 2025

Latest Posts

Health Tips: ಅಂಜೂರ ಸೇವನೆಯನ್ನು ಈ ರೀತಿ ಮಾಡಿದರೆ ಉತ್ತಮ

- Advertisement -

Health Tips: ಡ್ರೈಫ್ರೂಟ್ಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಎಲ್ಲ ಡ್ರೈಫ್ರೂಟ್ಸ್ ಇಷ್ಟಪಡುವ ಜನ, ಅಂಜೂರವನ್ನು ಮಾತ್ರ ಅಷ್ಟು ಇಷ್ಟಪಡುವುದಿಲ್ಲ. ಆದರಲ್ಲೂ ನೀರಿನಲ್ಲಿ ನೆನೆಸಿಟ್ಟ ಅಂಜೂರವನ್ನು ತಿನ್ನುವವರು ಬಲು ಅಪರೂಪ. ಆದ್ರೆ ಹೀಗೆ ಅಂಜೂರವನ್ನು ತಿನ್ನುವ ಬದಲು ನೀರಿನಲ್ಲಿ ನೆನೆಸಿಟ್ಟ ಅಂಜೂರ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾದ್ರೆ ನೀರಿನಲ್ಲಿ ನೆನೆಸಿಟ್ಟ ಅಂಜೂರ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..

ನೆನೆಸಿಟ್ಟ ಅಂಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮ್ಮ ಕೂದಲ ಆರೋಗ್ಯ ಚೆನ್ನಾಗಿರುತ್ತದೆ. ಕೂದಲು ತುಂಬ ಉದುರುತ್ತಿದ್ದರೆ, ಕೂದಲ ಬುಡ ದುರ್‌ಬಲವಾಗಿದ್ದರೆ, ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ನೆನೆಸಿಟ್ಟ ಅಂಜೂರ ಸೇವಿಸಿ. ಇದರಿಂದ ಕೂದಲ ಬುಡ ಗಟ್ಟಿಗೊಂಡು, ಕೂದಲು ಸಧೃಡವಾಗಿ ಬೆಳೆಯುತ್ತದೆ.

ಇನ್ನು ತೂಕ ಕಳೆದುಕೊಳ್ಳಬೇಕು ಎನ್ನುವವರು, ಪ್ರತಿದಿನ ಎರಡು ನೆನೆಸಿಟ್ಟ ಅಂಜೂರ ಖಾಲಿ ಹೊಟ್ಟೆಯಲ್ಲಿ ತಿಂದ್ರೆ, ಅವರ ತೂಕ ಇಳಿಯುತ್ತದೆ. ಆದರೆ ಇದರೊಂದಿಗೆ, ಅವರು ವ್ಯಾಯಾಮ, ವಾಕಿಂಗ್ ಮಾಡುವುದು ಕೂಡ ಅಷ್ಟೇ ಮುಖ್ಯ. ಉತ್ತಮ ಆಹಾರ ಸೇವನೆಯಿಂದ ಅರ್ಧ ಪರ್ಸೆಂಟ್ ತೂಕ ಇಳಿದರೆ, ಇನ್ನುಳಿದ ಅರ್ಧ ತೂಕ ಇಳಿಯಲು ನೀವು ನಿಮ್ಮ ದೇಹವನ್ನು ದಂಡಿಸಬೇಕು.

ಅಂಜೂರದಲ್ಲಿ ನಾರಿನಂಶ ಹೆಚ್ಚಾಗಿ ಇರುವ ಕಾರಣ, ನೀವು ತಿಂದ ಆಹಾರವನ್ನು ಸುಲಭವಾಗಿ ಜೀರ್ಣಿಸಲು ಇದು ಸಹಕಾರಿಯಾಗಿದೆ. ಅಲ್ಲದೇ, ಮಲವಿಸರ್ಜನೆ ಸರಿಯಾಗಿ ಆಗದಿದ್ದರೂ ಕೂಡ, ನೆನೆಸಿದ ಅಂಜೂರ ಸೇವನೆ ಮಾಡಿದ್ದಲ್ಲಿ, ಈ ಸಮಸ್ಯೆಗೂ ಪರಿಹಾರ ಸಿಗುತ್ತದೆ.

ನಿಮ್ಮ ದೇಹಕ್ಕೆ ಶಕ್ತಿ ತುಂಬುವಲ್ಲಿ ಎಲ್ಲ ಡ್ರೈಫ್ರೂಟ್ಸ್ ಸಹಕಾರಿಯಾಗಿದೆ. ಅದೇ ರೀತಿ ನೆನೆಸಿಟ್ಟ ಅಂಜಬರ ಕೂಡ, ನಿಮ್ಮ ದೇಹಕ್ಕೆ ಶಕ್ತಿ ನೀಡಲು ಅನುಕೂಲಕರವಾಗಿದೆ. ಯಾವಾಗ ನೋಡಿದರೂ, ಕೆಲಸ ಮಾಡಲು ಮನಸ್ಸಾಗುವುದಿಲ್ಲ, ಬರೀ ಸುಸ್ತಾಗುತ್ತದೆ ಎಂದಾದಲ್ಲಿ, ನೀವು ಅಂಜೂರ ಸೇವನೆ ಮಾಡಿ, ಚೈತನ್ಯದಿಂದ ಇರಲು ಸಹಕಾರಿಯಾಗುತ್ತದೆ.

ಇನ್ನು ಮುಖ್ಯವಾದ ವಿಷಯ ಅಂದ್ರೆ, ನೀವು ದಿನಕ್ಕೆ ಒಂದರಿಂದ ಎರಡು ಅಂಜೂರ ಮಾತ್ರ ತಿನ್ನಬಹುದು. ಸಿಹಿ ಇಷ್ಟವೆಂದು ಎರಡಕ್ಕೂ ಹೆಚ್ಚು ಅಂಜೂರವನ್ನು ತಿಂದರೆ, ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಆಗ ಆರೋಗ್ಯಕಾರಿ ಪರಿಣಾಮ ನೀಡಬೇಕಾದ ಅಂಜೂರ, ಅನಾರೋಗ್ಯಕ್ಕೀಡಾಗುವಂತೆ ಮಾಡುತ್ತದೆ.

- Advertisement -

Latest Posts

Don't Miss