Health Tips: ಸಾಮಾನ್ಯವಾಗಿ ನಮಗೆ ಹೊಟ್ಟೆ ನೋವಾದಾಗ, ನಾವು ಗ್ಯಾಸ್ಟಿಕ್ ಸಮಸ್ಯೆ ಎಂದುಕೊಂಡೋ, ಅಥವಾ ತಿಂದಿದ್ದೇನಾದ್ರೂ ಹೆಚ್ಚು ಕಡಿಮೆಯಾಗಿರಬೇಕು ಎಂದು ಭಾವಿಸಿ ಸುಮ್ಮನಾಗುತ್ತೇವೆ. ಆದರೆ ನಿಮಗೆ ಈ ಹೊಟ್ಟೆ ನೋವು ಪದೇ ಪದೇ ಆಗುತ್ತಿದೆ. ಏನೇ ಮನೆ ಮದ್ದು ಮಾಡಿದರೂ ಹೊಟ್ಟೆ ನೋವು ಕಡಿಮೆಯಾಗುತ್ತಿಲ್ಲವೆಂದು ಎನ್ನಿಸಿದರೆ, ನೀವು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ, ಇದು ಹೊಟ್ಟೆ ಹುಣ್ಣಿನ ಸಮಸ್ಯೆಯೂ ಆಗಿರಬಹುದು. ಈ ಬಗ್ಗೆ ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ.
ನೀವು ವೈದ್ಯರ ಬಳಿ ಹೋಗಿ ಹೊಟ್ಟೆ ನೋವು ಎಂದಾಗ, ಅವರು ಮೊದಲು ಕೇಳುವುದೇನೆಂದರೆ, ನಿಮಗೆ ಹೊಟ್ಟೆಯ ಯಾವ ಭಾಗದಲ್ಲಿ ನೋವಾಗುತ್ತಿದೆ ಎಂದು. ಏಕೆಂದರೆ, ಒಂದೊಂದು ಭಾಗದ ನೋವು ಒಂದೊಂದು ರೀತಿಯ ಸಮಸ್ಯೆ ಸೂಚಿಸುತ್ತದೆ. ಹಾಾಗಾಗಿ ವೈದ್ಯರು ಹೊಟ್ಟೆಯ ಯಾವ ಬದಿ ನೋವುಂಟಾಗುತ್ತಿದೆ ಎಂದು ಕೇಳುತ್ತಾರೆ.
ಹಾಗಾದ್ರೆ ಹೊಟ್ಟೆ ಹುಣ್ಣಾಗುವುದು ಅಂದ್ರೇನು..? ಯಾವ ಕಾರಣಕ್ಕೆ ಈ ಹೊಟ್ಟೆ ಹುಣ್ಣಾಗುತ್ತದೆ..? ಇದರ ಲಕ್ಷಣಗಳೇನು ಅಂತಾ ತಿಳಿಯಲು ಈ ವೀಡಿಯೋ ನೋಡಿ.