Thursday, November 21, 2024

Latest Posts

Health Tips: ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

- Advertisement -

Health Tips: ನಾವು ಪ್ರತಿದಿನ ಅನುಸರಿಸುವ ಆರೋಗ್ಯಕರ ಜೀವನ ಶೈಲಿಯಿಂದ, ನಮ್ಮ ಆಯುಷ್ಯ, ಆರೋಗ್ಯ ಎರಡೂ ಅಭಿವೃದ್ಧಿಯಾಗುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯವಾಗಿದ್ದರೆ, ನಾವು ಸದಾ ಚೈತನ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಆರೋಗ್ಯಾಭ್ಯಾಸದಲ್ಲಿ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಪ್ರತಿದಿನ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ನೀವೇನಾದರೂ ಸುಂದರವಾಗಿ ಕಾಣಬೇಕು. ನಿಮ್ಮ ಸ್ಕಿನ್ ಹೊಳೆಯಬೇಕು ಅಂತಾ ಬೇರೆ ಬೇರೆ ರೀತಿಯ ಕ್ರೀಮ್‌, ಲೋಶನ್ ಬಳಸುತ್ತಿದ್ದರೆ, ಅದನ್ನು ಇಂದೇ ನಿಲ್ಲಿಸಿ, ಪ್ರತಿದಿನ ಮಜ್ಜಿಗೆ ಕುಡಿಯಲು ಶುರು ಮಾಡಿ. ಯಾಕಂದ್ರೆ, ಮಜ್ಜಿಗೆ ಕುಡಿಯುವುದರಿಂದ ನಿಮ್ಮ ಇಡೀ ದೇಹದ ತ್ವಚೆ ಕಾಂತಿಯುತವಾಗುತ್ತದೆ. ಸಾಫ್ಟ್ ಆಗುತ್ತದೆ. ನಿಮ್ಮ ಮುಖದ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.

ಇನ್ನು ಪ್ರತಿದಿನ ಮಧ್ಯಾಹ್ನ ಊಟವಾದ ಬಳಿಕ ಒಂದು ಗ್ಲಾಸ್ ಮಜ್ಜಿಗೆ ಕುಡಿದರೆ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತಿಂದ ಆಹಾರ ಸುಲಭವಾಗಿ ಜೀರ್ಣವಾಗಬೇಕು. ಹೊಟ್ಟೆನೋವು, ಗ್ಯಾಸ್ಟಿಕ್ ಸಮಸ್ಯೆ ಬರಬಾರದು, ಜೀರ್ಣಕ್ರಿಯೆ ಸಮಸ್ಯೆ ಬರಬಾರದು ಅಂದ್ರೆ ಮಜ್ಜಿಗೆ ಸೇವನೆ ಮಾಡಲೇಬೇಕು. ಮಜ್ಜಿಗೆಯಲ್ಲಿರುವ ಪೋಷಕಾಂಶ, ನಿಮ್ಮ ದೇಹವನ್ನು ಸೇರಿ, ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣ ಮಾಡುತ್ತದೆ. ಹಾಗಾಗಿಯೇ ಊಟವಾದ ಬಳಿಕ ಕೊನೆಯಲ್ಲಿ ಮಜ್ಜಿಗೆ ಮೊಸರಿನ ಸೇವನೆ ಮಾಡಲಾಗುತ್ತದೆ.

ನಿಮಗೆ ಸುಸ್ತಾಗುತ್ತಿದೆ. ದೇಹದಲ್ಲಿ ಶಕ್ತಿಯೇ ಇಲ್ಲವೆಂದು ಎನ್ನಿಸಿದಾಗ, ಒಂದು ಗ್ಲಾಸ್ ಮಜ್ಜಿಗೆ ಕುಡಿಯಿರಿ. ನಿಮ್ಮ ಸುಸ್ತೆಲ್ಲ ಹೋಗುತ್ತದೆ. ಮತ್ತು ನಿಮಗೆ ಕೆಲಸ ಮಾಡಲು ಶಕ್ತಿ ಬರುತ್ತದೆ. ಡಿಹೈಡ್ರೇಷನ್ ಕಡಿಮೆ ಮಾಡಲು ಮಜ್ಜಿಗೆ ಸಹಾಯ ಮಾಡುತ್ತದೆ.

ಬರೀ ಮಜ್ಜಿಗೆ ಕುಡಿಯಲು ಇಷ್ಟವಿಲ್ಲದಿದ್ದಲ್ಲಿ, ಆ ಮಜ್ಜಿಗೆಗೆ, ಕೊಂಚ ಪುದೀನಾ, ಕೊತ್ತೊಂಬರಿ ಸೊಪ್ಪು, ಜೀರಿಗೆ, ಶುಂಠಿ, ಉಪ್ಪು ಹಾಕಿ ಪೇಸ್ಟ್ ಮಾಡಿ, ಸೇರಿಸಿ ಕುಡಿಯಿರಿ. ಇದು  ರುಚಿಕರವೂ ಆಗಿರುವುದರ ಜೊತೆಗೆ ಆರೋಗ್ಯಕರವೂ ಆಗಿದೆ.

- Advertisement -

Latest Posts

Don't Miss