Health Tips: ಕೆಲ ದಿನಗಳ ಹಿಂದೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ಬಗ್ಗೆ ವೈದ್ಯರಾಗಿರುವ ಡಾ.ಆಂಜೀನಪ್ಪ ಕೆಲ ವಿಷಯಗಳನ್ನು ವಿವರಿಸಿದ್ದಾರೆ.
ಉತ್ತಮ ಜೀವನ ಶೈಲಿ, ಜಿಮ್‌ಗೆ ಹೋಗುವವರು, ಡಯಟ್ ಮಾಡುವವರು, ಯಾವುದೇ ಕೆಟ್ಟ ಅಭ್ಯಾಸವಿಲ್ಲದಿದ್ದವರು ಕೂಡ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹೃದಯ ಸ್ಥಂಭನ, ಹೃದಯಾಘಾತ, ಹಾರ್ಟ್ ಫೇಲ್ ಆಗೋದು ಹೀಗೆ ಹಲವು ವಿಧಗಳಿದೆ.
ಹೃದಯನಾಳದಲ್ಲಿ ಸಮಸ್ಯೆ ಆಗಿ ಬ್ಲಾಕ್ ಆದಾಗ, ಹೃದಯದ ಸಮಸ್ಯೆ ಬರುವ ಸಾಧ್ಯತೆಗಳು ಹೆಚ್ಚಿದೆ. ಆಹಾರದಲ್ಲಿ ಅವ್ಯವಸ್ಥೆ ಇದ್ದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಅಂತಾರೆ ವೈದ್ಯರು. ಯಾರಿಗೆ ಕ“ಲೆಸ್ಟ್ರಾಲ್ ಹೆಚ್ಚಿರುತ್ತದೆಯೋ, ಅಂಥವರಿಗೆ ಬೆಗ ಹೃದಯಾಘಾತವಾಗುತ್ತದೆ. ಹಾಗಾಗಿ ಆಗಾಗ ನಮ್ಮ ದೇಹದಲ್ಲಿ ಎಷ್ಟು ಪ್ರಮಾಣದ ಕ“ಲೆಸ್ಟ್ರಾಾಲ್ ಇದೆ. ಅದು ಸರಿಯಾಗಿದೆಯಾ, ಸಮಸ್ಯೆ ಇದೆಯಾ ಎಂಬುದನ್ನು ಪರೀಕ್ಷಿಸಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಬೀದಿಬದಿ ತಿಂಡಿ, ಅತೀಯಾದ ಕರಿದ ಪದಾರ್ಥಗಳನ್ನು ಸೇವಿಸುವವರಿಗೆ, ಜಂಕ್ ಫುಡ್ ತಿನ್ನುವವರಿಗೆ ದೇಹದಲ್ಲಿ ಕ“ಲೆಸ್ಟ್ರಾಲ್ ಹೆಚ್ಚಾಗಿರುತ್ತದೆ. ಸ್ಮೋಕ್ ಮಾಡುವವರಿಗೆ, ರೆಡ್ ಮೀಟ್ ತಿನ್ನುವವರಿಗೆ ಹೆಚ್ಚು ಹೃದಯಾಘಾತವಾಗುತ್ತದೆ. ಈ ಅಭ್ಯಾಸಗಳನ್ನು ಕಡಿಮೆ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ನೀವು ಸುಧಾರಿಸಿಕ“ಳ್ಳಬಹುದು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




