Health Tips: ಯಾವಾಗ ಯಾವ ಘಟನೆ ಸಂಭವಿಸುತ್ತದೆ ಅಂತಾ ಹೇಳಲು ಅಸಾಧ್ಯ. ಯಾವಾಗ ಬೇಕಾದರೂ ಸಾವು, ನೋವು ಸಂಭವಿಸಬಹುದು. ಅದೇ ರೀತಿ ನಮಗೆ ಯಾವುದೇ ಕ್ಷಣದಲ್ಲಿ ಚೇಳು, ಹಾವು, ನಾಯಿ ಏನು ಬೇಕಾದ್ರೂ ಕಚ್ಚಿ, ಅದರಿಂದ ನಮ್ಮ ಜೀವಕ್ಕೆ ಹಾನಿಯಾಗಬಹುದು. ಹಾಗಾದ್ರೆ ವಿಷಜಂತುಗಳು ನಮ್ಮನ್ನು ಕಚ್ಚಿದಾಗ ನಾವು ಏನು ಮಾಡಬೇಕು..? ತಕ್ಷಣಕ್ಕೆ ಏನು ಮನೆ ಮದ್ದು ಮಾಡಬೇಕು ಎಂದು ಪಾರಂಪರಿಕ ವೈದ್ಯೆಯಾಗಿರುವ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
ಇಲಿ, ನಾಯಿ, ಚೇಳು ಕಚ್ಚಿದಾಗ, ಆ ಭಾಗಕ್ಕೆ ತುಳಸಿ ರಸ ಲೇಪಿಸಬೇಕು. ಅಲ್ಲದೇ, ಅರಿಶಿನ ಕೊಂಬಿನಿಂದ ಅರಿಶಿನ ತೇಯ್ದು. ಅದನ್ನು ಗೋಮೂತ್ರದೊಂದಿಗೆ ಸೇರಿಸಿ, ಸೇವಿಸುವುದರಿಂದ ಈ ಪ್ರಾಣಿ, ವಿಷಜಂತುಗಳು ವಿಷ ಏರುವ ಪರಿಣಾಮ ಕಡಿಮೆಯಾಗುತ್ತದೆ.
ಇನ್ನು ವಿಷಭರಿತವಾದ ಹಾವು ಕಚ್ಚಿದರೆ, ಹೊನಗನೆ ಸೊಪ್ಪಿನ ರಸವನ್ನು ಅರ್ಧ ಗಂಟೆಗೊಮ್ಮೆ ಕುಡಿಸಬೇಕು. ಆಗ ಇದರ ವಿಷ ಏರುವುದಿಲ್ಲ. ಜೀವಕ್ಕೇನೂ ಅಪಾಯವಾಗುವುದಿಲ್ಲ. ಅಥವಾ ಆಡು ಮುಟ್ಟದ ಸೊಪ್ಪು ಅಂತಾನೇ ಹೇಳುವ ಆಡುಸೋಗೆ ಸೊಪ್ಪಿನ ಕಶಾಯ ಕುಡಿಸುವುದರಿಂದ ಹಾವಿನ ವಿಷ ಏರುವುದಿಲ್ಲ. ಈ ಕಶಾಯ ಕುಡಿದ ಬಳಿಕ ವಾಂತಿಯಾಗುತ್ತದೆ. ಜೊತೆಗೆ ವಿಷವೂ ಹೊರಹೋಗುತ್ತದೆ.
ಚೇಳು ಕಚ್ಚಿದ ಜಾಗಕ್ಕೆ ಬೆಳ್ಳುಳ್ಳಿಯನ್ನು ಅರೆದು ಹಚ್ಚುವುದರಿಂದ, ವಿಷ ಏರದೇ, ನೋವು ಕೂಡ ಕಡಿಮೆಯಾಗುತ್ತದೆ. ಇನ್ನು ಬೆಳ್ಳುಳ್ಳಿ ಸೊಪ್ಪಿನ ಹೊಗೆ ಹಾಕುವುದರಿಂದ, ಮನೆಗೆ ವಿಷಜಂತುಗಳು ಬರುವುದು ಕಡಿಮೆಯಾಗುತ್ತದೆ. ಚೇಳು, ಜೇನುಹುಳು ಕಚ್ಚಿದ ಜಾಗಕ್ಕೆ ಕತ್ತರಿಸಿದ ಈರುಳ್ಳಿಯನ್ನು ನಯವಾಗಿ ಉಜ್ಜಿದರೆ, ಊತ, ನೋವು ಕಡಿಮೆಯಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.