Wednesday, July 9, 2025

Latest Posts

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು? ಪುಡಿ ಮಾತ್ರೆಗಳು ಬೇಕಾಗಿಲ್ಲ.!

- Advertisement -

Health Tips: ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದಾಗ ಮಾತ್ರ, ನಾವು ಆರೋಗ್ಯವಾಗಿರಲು, ಶಕ್ತಿಶಾಲಿಯಾಗಿರಲು ಸಾಧ್ಯ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಗತ್ಯಕ್ಕಿಂತ ಕಡಿಮೆಯಾಗಿದ್ದಲ್ಲಿ,  ಅದು ನಮ್ಮ ಜೀವಕ್ಕೇ ಕುತ್ತು ತರಬಹುದು. ಹಾಗಾಗಿ ನಾವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಏನೇನು ಸೇವನೆ ಮಾಡಬೇಕು ಎಂದು ಕುಟುಂಬ ವೈದ್ಯರಾದ ಡಾ. ಪ್ರಕಾಶ್ ರಾವ್ ವಿವರಿಸಿದ್ದಾರೆ.

ಪ್ರಪ್ರಥಮವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ, ನಾವು ಯಾವುದೇ ಮಾತ್ರೆಯನ್ನು ಸೇವಿಸಬಾರದು. ನಮ್ಮ ಕೈ ಕಾಲು, ದೇಹವನ್ನು ಸ್ವಚ್ಛವಾಗಿರಿಸಿದರೆ, ನಮ್ಮ ದೇಹಕ್ಕೆ ಕೀಟಾಣುಗಳು ಸೇರದೇ, ನಮ್ಮ ದೇಹ ಆರೋಗ್ಯವಾಗಿ ಇರುತ್ತದೆ. ಇದರಿಂದಲೇ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇನ್ನು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ, ಬಿಸಿ ಬಿಸಿ ನೀರು, ಕಶಾಯ, ಬಿಸಿ ಬಿಸಿ ಫ್ರೆಶ್ ಆಹಾರಗಳನ್ನು ಸೇವಿಸಬೇಕು. ಬೀದಿಬದಿ ತಿಂಡಿ, ಹೋಟೇಲ್ ಊಟ ಇದನ್ನೆಲ್ಲ ನಿಷೇಧಿಸಬೇಕು. ಫ್ರಿಜ್‌ನಲ್ಲಿ ಇರಿಸಿದ್ದನ್ನು ಪದೇ ಪದೇ ಬಿಸಿ ಮಾಡಿ ಸೇವಿಸುವುದು ಬಿಡಬೇಕು. ಹೀಗೆ ಮಾಡಿದ್ದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss