Health Tips: ಗರ್ಭಿಣಿಯರು ಆದಷ್ಟು ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಬೇಕು ಎಂದು ಹೇಳಲಾಗುತ್ತದೆ. ಅಲ್ಲದೇ ಪುಟ್ಟ ಮಕ್ಕಳನ್ನು ಆದಷ್ಟು ಬಿಸಿಲಿಗೆ ನಿಲ್ಲಿಸಲಾಗುತ್ತದೆ. ಹೀಗೆ ಮಾಡಲು ಕಾರಣ, ಮಕ್ಕಳಿಗೆ ವಿಟಾಮಿನ್ ಡಿ ಕೊರತೆಯಾಗದಿರಲಿ ಎಂದು. ಮಕ್ಕಳಿಗೆ ಕಾಮಾಲೆ ರೋಗ ಬಾರದಿರಲಿ, ಮಕ್ಕಳ ಚರ್ಮ ಆರೋಗ್ಯಕರವಾಗಿರಲಿ ಎಂದು.
ಬೆಳಿಗ್ಗೆ 9 ಗಂಟೆಯೊಳಗೆ ಬರುವ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿದರೆ, ವಿಟಾಮಿನ್ ಡಿ ಸಿಗುತ್ತದೆ. ಇದರಿಂದ ಚರ್ಮ ಆರೋಗ್ಯಕರವಾಗಿರುತ್ತದೆ. ಕಾಮಾಲೆ ರೋಗ ಬರುವುದಿಲ್ಲ. ದೇಹ ಸುಕ್ಕುಗಟ್ಟುವುದಿಲ್ಲ. ಹಳದಿಯಾಗುವುದಿಲ್ಲ. ಶಿಶುವಿನ ದೇಹ ಆರೋಗ್ಯಕರವಾಗಿರುತ್ತದೆ.
ಇಷ್ಟೇ ಅಲ್ಲದೇ ಮಗುವಿನ ಮೂಳೆ ಗಟ್ಟಿಯಾಗುತ್ತದೆ. ಸೂರ್ಯನ ಬಿಸಿಲಿನಿಂದ ಬರುವ ವಿಟಾಮಿನ್ ಡಿ ಅಂಶ ನಿಮ್ಮ ದೇಹಕ್ಕೆ ಕ್ಯಾಲ್ಶಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಮಗುವಿನ ಮೂಳೆ ಸ್ಟ್ರಾಂಗ್ ಆಗುತ್ತದೆ. ಜೊತೆಗೆ ಮಗುವಿನ ಮೆದುಳಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ.
ಬೆಳಿಗ್ಗೆ 9 ಗಂಟೆಯೊಳಗೆ ಸಿಗುವ ಸೂರ್ಯನ ತಿಳಿಬಿಸಿಲಿಗೆ ಮಕ್ಕಳನ್ನು 25ರಿಂದ 30 ನಿಮಿಷಗಳ ಕಾಲ ಬಿಡಬಹುದು. ಅದಕ್ಕಿಂತ ಹೆಚ್ಚು ಹೊತ್ತು ನಿಲ್ಲಿಸಬೇಡಿ. ಏಕೆಂದರೆ, ಸೂರ್ಯನ ಬೆಳಕು ಅತಿಯಾದರೂ ಕೂಡ, ಮಗುವಿನ ಆರೋಗ್ಯಕ್ಕೆ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಮಕ್ಕಳನ್ನು ಅರ್ಧ ಗಂಟೆಕಿಂತ ಹೆಚ್ಚು ಕಾಲ ಬಿಸಿಲಿನಲ್ಲಿ ನಿಲ್ಲಿಸಬೇಡಿ.