Political News: ಮುಡಾ ಹಗರಣವನ್ನು ಲೋಕಾಯುಕ್ತ ಬಿಟ್ಟು ಸಿಬಿಐಗೆ ಕೊಡಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಜ.27ಕ್ಕೆ ಮುಂದೂಡಿದ್ದು, ಸಿಎಂ ಸಿದ್ದರಾಮಯ್ಯವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಹೌದು ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸ್ನೇಹಮಯಿ ಕೃಷ್ಣ ಬೆಂಗಳೂರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಮೂರ್ತಿಗಳು ಇಂದು ಧಾರವಾಡ ಹೈಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ, ಅದೇ ಅರ್ಜಿಯನ್ನು ಧಾರವಾಡ ಹೈಕೋರ್ಟ್‌ನಲ್ಲೇ ವಿಚಾರಣೆ ನಡೆಸಿದ್ದರು. ಸ್ನೇಹಮಯಿ ಕೃಷ್ಣ ಪರ ವಕೀಲರಾದ ಮಣಿಂದರ್ ಸಿಂಗ್ ಅವರು ವಾದ ಮಂಡಿಸಿದರು.
ಮುಡಾ ಹಗರಣದ ಬಗ್ಗೆ ಮಣಿಂದರ್ ಸಿಂಗ್ ಅವರು ಎಳೆ ಎಳೆಯಾಗಿ ನ್ಯಾಯಾಲಯದ ಮುಂದಿಟ್ಟರು. ಸಿಎಂ ಪರವಾಗಿ ಅಭಿಷೇಕ್ ಮನು ಸಿಂಫ್ಟಿ ಕೂಡ ವಾದ ಮಂಡಿಸಿದರು. ಸಿಬಿಐಗೆ ಈ ಪ್ರಕರಣವನ್ನು ಕೊಡಬಾರದು ಎಂದು ಸಿಎಂ ಪರ ವಕೀಲ ಅಭಿಷೇಕ ಮನು ಸಿಂಫ್ಟಿ ವಾದ ಮಂಡಿಸಿದರು.
ಇದಕ್ಕೆ ನ್ಯಾಯಮೂರ್ತಿಗಳು ನೀವು ಅದಕ್ಕೆ ಅಬ್ಬೆಕ್ಷನ್ ಹಾಕಿದ್ದೀರಾ ಎಂದು ಪ್ರಶ್ನಿಸಿದರು. ನೀವು ಏನು ವಾದ ಮಾಡಬೇಕೋ ಅದನ್ನು ಮಾಡಿ ನಾವು ಆರ್ಡರ್ ಪಾಸ್ ಮಾಡುತ್ತೇವೆ ತಿಳಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ವಾದ ಆಲಿಸಿದ ನ್ಯಾಯಮೂರ್ತಿಗಳು ಇದೇ ಜ.27ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿ ವಾದ-ಪ್ರತಿವಾದ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಇನ್ನೂ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸ್ನೇಹಮಯಿ ಕೃಷ್ಣರವರು, ನ್ಯಾಯಾಧೀಶರು ಎರಡು ಕಡೆ ತಕಾರರು ಅರ್ಜಿ ಸಲ್ಲಿಸಲು ತಿಳಿಸಿ ಜನೆವರಿ 27 ಕ್ಕೆ ವಿಚಾರಣೆ ಮುಂದೂಡಿದ್ದಾರೆ, ಬಹುತೇಕ 27 ರಂದು ಅಂತಿಮ ಆದೇಶ ಹೊರ ಬರೋ ಸಾಧ್ಯತೆ ಇದೆ ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ ಪರ ನ್ಯಾಯವಾದಿ ವಸಂತಕುಮಾರ ಮಾತನಾಡಿ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡ್ಮೂರು ಹೇರಿಂಗ ಆಗಿದೆ, ಜಸ್ಟೀಸ್ ನಾಗಪ್ರಸನರವರು ಮುಂದೆ ವಿಚಾರಣೆ ನಡೆಯುತ್ತಿದೆ. ನಮ್ಮ ಪರ ಅರ್ಜಿದಾರರಾದ ಸ್ನೇಹಮಯಿ ಕೃಷ್ಣರವರು ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅನುಮಾನವಿದೆ. ಹಾಗಾಗಿ ಸಿಬಿಐಗೆ ನೀಡಲು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಅದರ ಅರ್ಜಿ ವಿಚಾರಣೆ ಇಂದು ಧಾರವಾಡ ಹೈಕೋರ್ಟ್ ನಲ್ಲಿ ನಡೆಸಿ, ಎರಡು ಕಡೆಯಿಂದ ತಕಾರರು ಶಲ್ಲಿಸಲು ನ್ಯಾಯಾಧೀಶರು ಸೂಚನೆ ನೀಡಿ ವಿಚಾರಣೆಯನ್ನು ಜನೆವರಿ 27ಕ್ಕೆ ಮುಂದೂಡಿದ್ದಾರೆ. 27 ರಂದು ಸುದೀರ್ಘವಾದ ವಿಚಾರಣೆ ನಡೆದು ಒಳ್ಳೆಯ ಆದೇಶ ಹೊರಬಿಳುವ ಸಾಧ್ಯತೆ ಇದೆ ಎಂದು ಹೇಳಿದರು.
ಒಟ್ಟಿನಲ್ಲಿ ಮುಡಾ ಹಗರಣ ಇಂದಿನ ವಿಚಾರಣೆಯಲ್ಲಿ ಸಿಎಂ ಸಿದ್ದರಾಮಯ್ಯವರಿಗೆ ತಾತ್ಕಾಲಿಕ ರಿಲೀಫ ಸಿಕ್ಕಿದ್ದು, ಜನೆವರಿ 27 ಕ್ಕೆ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ.