ಕ್ರಿಕೇಟ್ ಆಡುವಾಗ ಹಾರ್ಟ್ ಅಟ್ಯಾಕ್, ಮೈದಾನದಲ್ಲೇ ಮೃತಪಟ್ಟ ಕ್ರಿಕೇಟಿಗ

Cricket News: ಕ್ರಿಕೇಟ್ ಆಡುವ ಸಂದರ್ಭದಲ್ಲಿ ಕ್ರಿಕೇಟಿಗನೊಬ್ಬ ಹೃದಯಾಘಾತದಿಂದ, ಮೈದಾನದಲ್ಲೇ ಮೃತಪಟ್ಟ ಘಟನೆ ನೋಯ್ಡಾದಲ್ಲಿ ನಡೆದಿದೆ. ವಿಕಾಸ್ ನೇಗಿ ಮೃತ ದುರ್ದೈವಿಯಾಗಿದ್ದು, ಇವರಿಗೆ ಕೇವಲ 36 ವರ್ಷವಾಗಿತ್ತು.

ನೋಯ್ಡಾದ ಥಾನಾದಲ್ಲಿ ಕ್ರಿಕೇಟ್ ಪಂದ್ಯ ಏರ್ಪಡಿಸಲಾಗಿತ್ತು. ಈ ವೇಳೆ ಮೈದಾನದಲ್ಲಿ ಕ್ರಿಕೇಟ್ ಆಡುತ್ತಿದ್ದ ಉತ್ತರಾಖಂಡ ಮೂಲದ ವಿಕಾಸ್ ನೇಗಿ, ಹೃದಯಾಘಾತದಿಂದ, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕ್ರಿಕೇಟ್ ಆಡುವಾಗ ವಿಕಾಸ್ ಬ್ಯಾಟಿಂಗ್ ಮಾಡುತ್ತಿದ್ದು, ಇವರಿಗೆ ಹೃದಯಾಘಾತವಾಗುತ್ತಿದ್ದಂತೆ, ಸ್ಥಳದಲ್ಲಿದ್ದವರು ಓಡಿಬಂದು, ವಿಕಾಸ್ ಆರೋಗ್ಯ ವಿಚಾರಿಸಿದ್ದಾರೆ. ತಕ್ಷಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಮಾರ್ಗಮಧ್ಯೆ ವಿಕಾಸ್ ಮೃತಪಟ್ಟಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಾಗ, ವಿಕಾಸ್‌ಗೆ ಹೃದಯಾಘಾತವಾಗಿದ್ದು ತಿಳಿದು ಬಂದಿದೆ. ಈ ಹಿಂದೆ ವಿಕಾಸ್‌ಗೆ ಕೊರೋನಾ ತಗುಲಿತ್ತು. ಬಳಿಕ ಚಿಕಿತ್ಸೆ ಪಡೆದು ವಿಕಾಸ್ ಆರೋಗ್ಯವಂತರಾಗಿದ್ದರು. ಆದರೆ ಕ್ರಿಕೇಟ್ ಆಡುವಾಗ, ವಿಕಾಸ್‌ ಹಾರ್ಟ್‌ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ.

ನನಗೆ ಆರ್ಸಿಬಿ ಪರ ಆಡಲು ಇಷ್ಟವಿಲ್ಲದಿದ್ದರೂ ಬ್ಲಾಕ್ಮೇಲ್ ಮಾಡಿ ಆಡಿಸಿದರು: ಪ್ರವೀಣ್ ಕುಮಾರ್

ಕ್ರಿಕೇಟಿಗ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ

ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್

 

About The Author