Health Tips: ಕೆಲವರಿಗೆ ಮುಖದ ಮೇಲೆ ಕೂದಲು ಬೆಳೆದಿರುತ್ತದೆ. ಪುರುಷರಿಗೆ ಈ ಸಮಸ್ಯೆಯಾದರೂ ಗಡ್ಡವೆಂದು ತಿಳಿಯಬಹುದು. ಆದರೆ ಸ್ತ್ರೀಯರಿಗೆ ಈ ರೀತಿ ಸಮಸ್ಯೆಯಾದಲ್ಲಿ ಅಂಥವರು ಮುಜುಗರಕ್ಕೊಳಗಾಗಬೇಕಾಗುತ್ತದೆ. ಹಾಗಾದ್ರೆ ಮುಖದ ಮೇಲೆ ಬೆಳೆಯುವ ಕೂದಲನ್ನು ತೆಗೆಯಲು ಯಾವ ಚಿಕಿತ್ಸೆ ತೆಗೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಮುಖದ ಮೇಲೆ ಉಂಟಾಗುವ ಕೂದಲನ್ನು ತೆಗೆಯಲು ಲೇಸರ್ ಟ್ರೀಟ್‌ಮೆಂಟ್ ಉತ್ತಮವೆಂದು ಹೇಳಿದ್ದಾರೆ. ಆದರೆ ಲೇಸರ್ ಟ್ರೀಟ್‌ಮೆಂಟ್ ಕೊಡುವ ಮುನ್ನ, ಇದು ಅನುವಂಶಿಕವಾಗಿಯೇ ಬಂದಿದ್ದಾ, ಅಥವಾ ಯಾವುದಾದರೂ ಕಾರಣದಿಂದ ಮುಖದ ಮೇಲೆ ಕೂದಲು ಬೆಳೆಯುತ್ತಿದೆಯಾ..? ಬೇರೆ ಯಾವುದಾದರೂ ಔಷದಿ ತೆಗೆದುಕೊಂಡಿರುವ ಸೈಡ್ ಎಫೆಕ್ಟಾ..? ಇತ್ಯಾದಿ ವಿಷಯಗಳನ್ನು ವೈದ್ಯರು ಮೊದಲು ಪರೀಕ್ಷಿಸುತ್ತಾರೆ.
ಇಂಥ ಪರೀಕ್ಷೆಗಳನ್ನು ಮಾಡಿದ ಬಳಿಕ, ಲೇಸರ್ ಟ್ರೀಟ್‌ಮೆಂಟ್ ಶುರು ಮಾಡಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.




