News: ಶಾಲೆಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ನಿಯಂತ್ರಿಸುವ ಸಮಗ್ರ ಮಾರ್ಗಸೂಚಿಗಳನ್ನು ದೆಹಲಿ ಹೈಕೋರ್ಟ್ ವಿಧಿಸಿದ್ದು, ಅದರ ಮೇಲೆ ಸಂಪೂರ್ಣ ನಿಷೇಧ ಹೇರುವ ಚಿಂತನೆಯನ್ನು ಕೈ ಬಿಟ್ಟಿದೆ. ಶೈಕ್ಷಣಿಕ ಪ್ರಯೋಜನಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್ ಸಾಧನಗಳ ದುರುಪಯೋಗದ ಸಾಧ್ಯತೆ ಎರಡನ್ನೂ ಗಮನಿಸಿ ಸಮತೋಲನದ ವಿಧಾನವನ್ನು ಅನುಸರಿಸಲು ನ್ಯಾಯಾಲಯ ಹೇಳಿದೆ. ಅಲ್ಲದೆ ಶಾಲಾ ಮಕ್ಕಳ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವದು ನಿರೀಕ್ಷಿತವಲ್ಲ. ಅಲ್ಲದೆ ಅದನ್ನು ಕಾರ್ಯರೂಪಕ್ಕೆ ತರಲೂ ಸಹ ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್‌ತಿಳಿಸಿದೆ.
ಈ ಕುರಿತು ಪ್ರಕರಣವೊಂದರ ವಿಚಾರಣೆಯ ವೇಳೆ ತಮ್ಮ ಆದೇಶದಲ್ಲಿ ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರು ಮೊಬೈಲ್ ಫೋನ್ ಬಳಕೆಯ ನಿಷೇಧವನ್ನು ತಿರಸ್ಕರಿಸಿದ್ದರು. ಅಲ್ಲದೆ ಶಾಲಾ ಮಕ್ಕಳು ಮೊಬೈಲ್ ಫೋನ್ ಬಳಕೆಯನ್ನು ನಿಯಂತ್ರಣ ಮಾಡಬಹುದು. ಅದಕ್ಕೆ ಸಂಬಂಧಿಸಿದ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಲು ಹೈಕೋರ್ಟ್ ಸೂಚಿಸಿದೆ. ಮುಖ್ಯವಾಗಿ ಮಕ್ಕಳಿಗ ಆನ್‌ಲೈನ್ ಚಲನವಲನಗಳ ಬಗ್ಗೆ ಹಾಗೂ ಡಿಜಿಟಲ್ ತಂತ್ರಜ್ಞಾನದ ನೀತಿಗಳ ಬಗ್ಗೆ ಅರಿವು ಮೂಡುವಂತೆ ಶಾಲಾ ಮಕ್ಕಳಿಗೆ ಶಿಕ್ಷಣ ನೀಡುವಂತೆ ತಿಳಿಸಲಾಗಿದೆ.
ಅಲ್ಲದೆ ಶಿಕ್ಷಣ ಹಾಗೂ ಅದಕ್ಕೆ ಅನುಗುಣವಾಗುವ ಕ್ಷೇತ್ರಗಳಲ್ಲಿ ತ್ರಂತ್ರಜ್ಞಾನ ಉಪಯೋಗದ ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಆದರೆ ಸ್ಟಾರ್ಟ್ ಪೋನ್ ವಿಪರೀತ ಬಳಕೆ ಹಾಗೂ ದುದುಪಯೋಗ ಬಿಟ್ಟರೆ ಈ ಮೊಬೈಲ್ ಪೋಷಕರು ಹಾಗೂ ಮಕ್ಕಳು ಪರಸ್ಪರ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಪೋಷಕರಿಗೆ ತಮ್ಮ ಮಕ್ಕಳ ಸುರಕ್ಷತೆಯ ಖಾತರಿಗೆ ಮೊಬೈಲ್ ಫೋನ್ ನೆರವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ನಿಯಂತ್ರಣದ ಮಾರ್ಗಸೂಚಿಗಳೇನು..?
ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಬಾರದು, ಅದರೆ ಅದರ ಬಳಕೆಯ ನಿಯಂತ್ರಣದ ಜೊತೆಗೆ ಮೇಲ್ವಿಚಾರಣೆ ಮಾಡಬೇಕು. ವಿದ್ಯಾರ್ಥಿಗಳು ಶಾಲೆಗೆ ಬಂದ ಬಳಿಕ ಅವರ ಮೊಬೈಲ್‌ಗಳು ಸುರಕ್ಷಿತವಾಗಿಡುವಂತೆ ಶಾಲೆಗಳು ಲಾಕರ್ ವ್ಯವಸ್ಥೆ ಒದಗಿಸಬೇಕು. ಅಲ್ಲದೆ ಶಾಲಾ ತರಗತಿಯಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಜೊತೆಗೆ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಬೇಕು. ಶಾಲಾ ಆವರಣ ಹಾಗೂ ಶಾಲಾ ವಾಹನಗಳಲ್ಲಿ ಕ್ಯಾಮೆರಾ ಕಾರ್ಯನಿರ್ವಹಿಸದಂತೆ ನಿರ್ಬಂಧಿಸುವುದು.
ಅಲ್ಲದೆ ಜವಾಬ್ದಾರಿಯುತ ಡಿಜಿಟಲ್ ನಡವಳಿಕೆಯ ಕುರಿತು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಬೇಕು, ವಿದ್ಯಾರ್ಥಿಗಳಿಗೆ ಸೈಬರ್ ಬೆದರಿಕೆ ಮತ್ತು ನೈತಿಕ ಸ್ಮಾರ್ಟ್‌ಫೋನ್ ಬಳಕೆಯ ಬಗ್ಗೆ ತಿಳಿಸಬೇಕು. ಇನ್ನೂ ಸ್ಮಾರ್ಟ್‌ಫೋನ್‌ಗಳನ್ನು ಪೋಷಕರೊಂದಿಗೆ ಸಂಪರ್ಕ ಸಾಧಿಸುವುದಕ್ಕಾಗಿ ಮಾತ್ರ ಬಳಸಬೇಕು. ಆದರೆ ಶಾಲಾ ಸಮಯದಲ್ಲಿ ಮನರಂಜನೆ ಅಥವಾ ಸಾಮಾಜಿಕ ಮಾಧ್ಯಮಕ್ಕಾಗಿ ಬಳಸಬಾರದು. ಪ್ರತಿಯೊಂದು ಶಾಲೆಯು ಪೋಷಕರು, ಶಿಕ್ಷಕರು ಮತ್ತು ಮಕ್ಕಳ ಮನಶ್ಶಾಸ್ತ್ರಜ್ಞರೊಂದಿಗೆ ಸಮಾಲೋಚಿಸಿ ತನ್ನ ಸ್ಮಾರ್ಟ್‌ಫೋನ್ ನೀತಿಯನ್ನು ರೂಪಿಸಿಕೊಳ್ಳಬೇಕು. ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿದವರ ಮೊಬೈಲ್ ಫೋನ್ ನಿರ್ದಿಷ್ಟ ಅವಧಿಯವರೆಗೆ ಜಪ್ತಿ ಮಾಡಬೇಕು. ಅಲ್ಲದೆ ಕೆಲ ದಿನಗಳ ಮಟ್ಟಿಗೆ ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ತರುವುದನ್ನು ನಿರ್ಬಂಧಿಸುವ ಮೂಲಕ ಅದನ್ನೇ ಶಿಸ್ತು ಕ್ರಮವಾಗಿ ಪರಿಗಣಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.