ಬೆಂಗಳೂರು: ಸಚಿವ ಡಿ. ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದಾಗ ತಮ್ಮ ಹೆಸರಲ್ಲಿ ನೂರಾರು ಕೋಟಿ ಆಸ್ತಿ ಮತ್ತು 80 ಕೋಟಿಗೂ ಅಧಿಕ ಹಣ ವಹಿವಾಟು ಕುರಿತಂತೆ ತಾಯಿ ಗೌರಮ್ಮಗೆ ಐಟಿ ನೀಡಿದ್ದ ಶೋಕಾಸ್ ನೋಟೀಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸಚಿವ ಡಿ.ಕೆ ಶಿವಕುಮಾರ್ ನಿವಾಸದ ಐಟಿ ದಾಳಿ ನಡೆದಿದ್ದ ವೇಳೆ ತಾಯಿ ಗೌರಮ್ಮ ಹೆಸರಲ್ಲಿ ನೂರಾರು ಕೋಟಿ ಆಸ್ತಿ ಮತ್ತು ಅವರ ಹೆಸರಲ್ಲಿ ನಡೆದಿದ್ದ ಕೋಟಿ ಕೋಟಿ ಹಣ ವಹಿವಾಟು ಕುರಿತಾಗಿ ಐಟಿಗೆ ದಾಖಲೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಐಟಿ ಗೌರಮ್ಮ ಹೆಸರಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು. ಆದ್ರೆ ಶೋಕಾಸ್ ನೋಟೀಸ್ ರದ್ದತಿ ಕೋರಿ ಹೈಕೋರ್ಟ್ ಗೆ ಗೌರಮ್ಮ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ಇದೀಗ ಮಧ್ಯಂತರ ಆದೇಶ ಹೊರಡಿಸಿರೋ ಹೈಕೋರ್ಟ್ ಶೋಕಾಸ್ ನೋಟೀಸ್ ಗೆ ತಡೆಯಾಜ್ಞೆ ನೀಡಿದೆ.
ಈ ಕುರಿತಂತೆ ಮಾರ್ಚ್ 22 ರಂದು ನೋಟೀಸ್ ನೀಡಿದ್ದ ಐಟಿ ಇಲಾಖೆ, 90 ದಿನಗಳ ಗಡುವು ನೀಡಿ ಜೂನ್ 22ರಂದು ವಿವರಣೆ ನೀಡಬೇಕು ಅಂತ ಹೇಳಿತ್ತು. ಇದಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಗೌರಮ್ಮ ನೋಟೀಸ್ ರದ್ದತಿಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದಾರೆ. ತಮ್ಮ ಕುಟುಂಬ ಪೂರ್ವಜರ ಕಾಲದಿಂದಲೂ ಸಾಕಷ್ಟು ಆಸ್ತಿ ಹೊಂದಿದ್ದು, ಕೃಷಿಯಿಂದ ಹಣ ಸಂಪಾದಿಸಲಾಗಿದೆ. ಇನ್ನು 2016ರಲ್ಲಿ ಬೇನಾಮಿ ಆಸ್ತಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು ನಮ್ಮ ವಿರುದ್ಧ ಈ ಕಾಯ್ದೆ ಅನ್ವಯವಾಗೋದಿಲ್ಲ ಅಂತ ಕೋರ್ಟ್ ಗೆ ಗೌರಮ್ಮ ತಿಳಿಸಿದ್ದಾರೆ. ಹೀಗಾಗಿ ನೋಟೀಸ್ ಗೆ ತಡೆಯಾಜ್ಞೆ ನೀಡಿರೋ ಹೈಕೋರ್ಟ್ ವಿಚಾರಣೆ ಮುಂದೂಡಿದೆ.
ಸಿಎಂ ಆಪ್ತರಿಂದಲೇ ಬೀಳುತ್ತಾ ಸರ್ಕಾರ ?? ಮಿಸ್ ಮಾಡದೇ ಈ ವಿಡಿಯೋ ನೋಡಿ