Sunday, September 8, 2024

Latest Posts

hijab case ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ..!

- Advertisement -

ಹಿಜಾಬ್ ವಿವಾದದ (Hijab Controversy) ಪ್ರಕರಣ ಕುರಿತಂತೆ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದೆ. ಕರಾವಳಿ ಭಾಗದಲ್ಲಿ ಉಂಟಾದಂತಹ ಹಿಜಾಬ್ ವಿವಾದ ಈಗ ರಾಜ್ಯ ಹಾಗೂ ರಾಷ್ಟ್ರ ವ್ಯಾಪ್ತಿಯಲ್ಲಿ ಹರಡಿದೆ. ಹಿಜಾಬ್ ಧರಿಸಲು ಅವಕಾಶ ಕೋರಿ ವಿದ್ಯಾರ್ಥಿಯೊಬ್ಬರು ಕೋರ್ಟ್ (court) ಮೆಟ್ಟಿಲೇರಿದ್ದರು, ಈ ವಿಚಾರವಾಗಿ ನಿನ್ನೆ ಹೈಕೋರ್ಟ್ ನ ಏಕ ಪೀಠ ಸದಸ್ಯ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ (Justice Krishna S Dixit) ಅವರ ಸಮ್ಮುಖದಲ್ಲಿ ಅರ್ಜಿದಾರರ ಪರ ದೇವದತ್ ಕಾಮತ್ (Devadat Kamath) ಹಾಗೂ ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ (AG Prabhuling  Navadgi) ವಾದವನ್ನು ಮಂಡಿಸಿದರು. ನ್ಯಾಯಮೂರ್ತಿಗಳು ವಿಚಾರಣೆಯನ್ನು ಇಂದು ಮಧ್ಯಾಹ್ನ 2:30 ಕ್ಕೆ ಮುಂದೂಡಿದ್ದರು. ಇಂದು ಮಧ್ಯಾಹ್ನ ವಿಚಾರಣೆ ಮುಂದುವರೆದಿದ್ದು, ಈಗ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಈ ಪ್ರಕರಣವನ್ನು ಸಿಜೆ ತೀರ್ಮಾನಿಸಲಿ ಎಂದು, ಈ ಪ್ರಕರಣ ವಿಸ್ತೃತ ಪೀಠದಲ್ಲಿ (extended pedestal) ವಿಚಾರಣೆಗೆ ಯೋಗ್ಯವಾಗಿದೆ ಎಂದು ತೀರ್ಮಾನಿಸಿ, ತಕ್ಷಣವೇ ಸಂಪೂರ್ಣ ಕಡತಗಳನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ರಿಜಿಸ್ಟರ್ ಗೆ ನಿರ್ದೇಶನ (Direction to the Register) ನೀಡಿದ್ದಾರೆ. ಅಂತರ ನಿಮ್ಮ ವಾದ ಮಂಡನೆಯಿಂದ ನಮ್ಮ ಜ್ಞಾನ ವಿಸ್ತಾರವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

- Advertisement -

Latest Posts

Don't Miss