Sunday, September 8, 2024

Latest Posts

Hijab Controversy ತಾರಕಕ್ಕೇರಿದ್ದು ರಾಜ್ಯದ ಹಲವು ಕಾಲೇಜುಗಳಿಗೆ ರಜೆ..!

- Advertisement -

ಕರಾವಳಿ ಭಾಗದಲ್ಲಿ ಉಂಟಾದಂತಹ ಹಿಜಾಬ್ ವಿವಾದ ( Hijab Controversy) ಈಗ ರಾಜ್ಯ ವ್ಯಾಪ್ತಿ ಹರಡಿದ್ದು, ಪರಿಸ್ಥಿತಿ ಈಗ ತಾರಕಕ್ಕೇರಿದೆ. ರಾಜ್ಯದಾದ್ಯಂತ ಹಲವಾರು ಕಾಲೇಜುಗಳ ಬಳಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿ ಪ್ರತಿಭಟನೆಗಳನ್ನು (Protests wearing saffron shawls and hijabs) ನಡೆಸುತ್ತಿದ್ದಾರೆ. ಈಗ ಇದು ತಾರಕಕ್ಕೇರಿದ್ದು ಶಿವಮೊಗ್ಗದಲ್ಲಿ (Shimoga) ವಿದ್ಯಾರ್ಥಿಗಳು ಪ್ರತಿಭಟನೆಯ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಅಲ್ಲಿರುವ ಧ್ವಜ ಕಂಬಕ್ಕೆ ಕೇಸರಿ ದ್ವಜ ಕಟ್ಟಲುಯತ್ನಿಸಿದ್ದಾರೆ (Saffron tries to build a dual). ಏಕಾಏಕಿ ವಿದ್ಯಾರ್ಥಿಗಳು ಕಾಲೇಜು ಆವರಣಕ್ಕೆ ಹೋಗುತ್ತಿದ್ದಾಗ ಪೊಲೀಸರು ಅವರನ್ನು ಚದುರಿಸಲು ಲಾಠಿಚಾರ್ಜ್ (Lathicharge) ನಡೆಸಿದ್ದಾರೆ. ಈಗ ರಾಜ್ಯದ ಹಲವಾರು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿಯ ಎಂಜಿಎಂ ಕಾಲೇಜು (MGM College, Udupi), ಮಡಿಕೇರಿಯ ಎಫ್‌ಎಂಸಿ ಕಾಲೇಜು(FMC College of Madikeri), ವಿಜಯಪುರದ ಸಂಗಮೇಶ್ವರ ಕಾಲೇಜು ಒಂದು ದಿನದ ಮಟ್ಟಿಗೆ ರಜೆ, ಗದಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಹಲವಾರು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

- Advertisement -

Latest Posts

Don't Miss