Monday, December 23, 2024

Latest Posts

ಮತ್ತೆ ಏರಿಕೆಯಾಯ್ತು ಪೆಟ್ರೋಲ್-ಡೀಸೆಲ್ ರೇಟು…!

- Advertisement -

ದೇಶದಲ್ಲಿ ಪೆಟ್ರೋಲ್, ಡೀಸಲ್ ದರ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ಇಂದೂ ಕುಡ ತೈಲ ದರ ಏರಿಕೆಯಾಗಿದ್ದು , ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ಗೆ 26 ಪೈಸೆ ಏರಿಕೆಯಾಗಿದ್ದರೆ , ಡೀಸಲ್‌ ಪ್ರತಿ ಲೀಟರ್ ಗೆ 32 ಪೈಸೆ ಏರಿಕೆ ಕಂಡಿದೆ. ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಳಿತದ ನಡುವೆ ಭಾರತದಲ್ಲಿ ಕಳೆದ 12 ದಿನಗಳಲ್ಲಿ 9 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾದಂತಿದೆ.
ಕಳೆದ ಭಾನುವಾರದಂದು ಪ್ರತಿ ಲೀಟರ್ ಮೇಲೆ ಸರಾಸರಿ 20 ರಿಂದ 30 ಪೈಸೆಯಷ್ಟು ಏರಿಕೆ ಮಾಡಲಾಗಿತ್ತು. ಕಳೆದ 9 ದಿನಗಳಲ್ಲಿ ಪೆಟ್ರೋಲ್ 1.25 ರೂಪಾಯಿ, ಡೀಸೆಲ್ 2.30 ರೂಪಾಯಿಯಷ್ಟು ಬೆಲೆ ಹೆಚ್ಚಳ ಕಂಡಿದೆ. ಸೆ.5ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ಇದಾದ ಬಳಿಕ ಇಂಧನ ಬೆಲೆ ಏರಿಕೆಯಾಗುತ್ತಿದೆ. ಇನ್ನು ಈಗಾಗಲೇ ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಹೈರಾಣಾಗಿರೋ ಜನರು ಇದೀಗ ಮತ್ತೆ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಬೇಸತ್ತುಹೋಗಿದ್ದಾರೆ.

- Advertisement -

Latest Posts

Don't Miss