Hubli News: ಹುಬ್ಬಳ್ಳಿ: ಅದೊಂದು ಭೀಕರ ದುರಂತ ಹುಬ್ಬಳ್ಳಿಯನ್ನು ಮಾತ್ರವಲ್ಲದೆ ಅಯ್ಯಪ್ಪ ಸ್ವಾಮಿ ಭಕ್ತಕೋಟಿಯೇ ಕಣ್ಣೀರು ಹಾಕಿತ್ತು. ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಪೋಟದಿಂದ ಎಂಟು ಜನ ಅಯ್ಯಪ್ಪ ಮಾಲಾಧಾರಿಗಳ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಚ್ಚವ್ವನ ಕಾಲೋನಿಯ ಸಾರ್ವಜನಿಕರು ಸಾಮೂಹಿಕವಾಗಿ ಶಾಂತಿ ಹೋಮ, ಹವನ ಮಾಡಲು ನಿರ್ಧಾರ ಮಾಡಿದ್ದಾರೆ.
ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಸಾವು ನಿಜಕ್ಕೂ ಬಹುದೊಡ್ಡ ದುರಂತವನ್ನೇ ಉಂಟುಮಾಡಿದೆ. ಡಿಸೆಂಬರ್ 22 ರಂದು ಸಿಲಿಂಡರ್ ಸ್ಪೋಟಗೊಂಡು 9 ಜನ ಗಾಯಗೊಂಡಿದ್ದರು. 9 ಜನರಲ್ಲಿ ಎಂಟು ಜನ ಮಾಲಾಧಾರಿಗಳು ಮೃತರಾಗಿದ್ದಾರೆ. ಓರ್ವ ಮಾಲಾಧಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಇದೇ 28ರಂದು ಅಂದರೇ ಮಂಗಳವಾರ ಶಾಂತಿಗಾಗಿ, ಮೃತರ ಆತ್ಮಕ್ಕೆ ಶಾಂತಿಕೋರುವ ಹಿನ್ನಲೆಯಲ್ಲಿ ಸಾಮೂಹಿಕ ಹೋಮ ಹವನ ಮಾಡಲು ನಿರ್ಧಾರ ಮಾಡಿದ್ದಾರೆ.
ಇನ್ನೂ ಅಚ್ಚವ್ವನ ಕಾಲೋನಿಯಲ್ಲಿ ನಡೆದ ದುರಂತಕ್ಕೆ ರಾಜ್ಯವೇ ಮಮ್ಮಲ ಮರುಗಿದೆ. ಅಲ್ಲದೇ ಈಗ ಕುಟುಂಬದವರ ಆತ್ಮಸ್ಥೈರ್ಯ ಹೆಚ್ಚಿಸುವ ಸದುದ್ದೇಶದಿಂದ 2 ದಿನಗಳ ಕಾಲ ಹೋಮ ಹವನ ಹಮ್ಮಿಕೊಳ್ಳಲಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಹೋಮ, ನವಗ್ರಹ ಶಾಂತಿ, ಗಣಹೋಮ, ಹವನ ಮಾಡಲು ಸ್ಥಳೀಯರು ತೀರ್ಮಾನ ಮಾಡಿದ್ದಾರೆ.