Wednesday, October 29, 2025

Latest Posts

IPS ಅಧಿಕಾರಿ ರವಿ ಡಿ ಚನ್ನಣ್ಣನವರ್ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತು..!

- Advertisement -

ಭ್ರಷ್ಟಾಚಾರ ಆರೋಪ (Allegations of corruption) ಹಾಗೂ ಅಕ್ರಮವಾಗಿ ಆಸ್ತಿ ಗಳಿಕೆ ಆರೋಪವನ್ನು ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್(Ravi D Channannavar) ಪ್ರಕರಣದ ಬಗ್ಗೆ ಗೃಹ ಸಚಿವರು ಆರಗ ಜ್ಞಾನೇಂದ್ರ (Home Minister Araga Jnanendra) ಇಂದು ಮಾತನಾಡಿದ್ದಾರೆ. ಮೈಸೂರಿನ ನಗರದ ಪೊಲೀಸ್ ಅಕಾಡೆಮಿ ಕವಾಯತು ಮೈದಾನದಲ್ಲಿ 45ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಂಡಿದ್ದರು, ರವಿ ಡಿ ಚನ್ನಣ್ಣನವರ ಪ್ರಕರಣದ ಸಂಬಂಧ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರಾದ ಜ್ಞಾನೇಂದ್ರ ತಿಳಿಸಿದ್ದಾರೆ. ಐಪಿಎಸ್ ಅಧಿಕಾರಿ (IPS officer) ರವಿ ಚಣ್ಣನವರ್ ಅವರಿಗೆ ವರ್ಗಾವಣೆ ನೀಡಿಲ್ಲ, ಆಡಳಿತಾತ್ಮಕ ನಿರ್ಧಾರ ಎಂದು ಸ್ಪಷ್ಟನೆ ನೀಡಿದರು. ಅಂತೆಯೇ ಯಾರು ಬೇಕಾದರೂ ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ಅದರೆ ಸತ್ಯಾಸತ್ಯತೆಯನ್ನು ತಿಳಿಯಲು ತನಿಖೆ ನಡೆಸಲಾಗುವುದು ಎಂದರು. ಜನರ ರಕ್ಷಣೆಗೆ ನೀಡಿರುವ ತರಬೇತಿಯಾಗಿದೆ. ರಾಜ್ಯದಲ್ಲಿ ಸೈಬರ್ ವಿಂಗ್ ಎಫ್ಎಸ್ಎಲ್ (Cyber ​​Wing FSL) ವಿಭಾಗವನ್ನು ಬಲಪಡಿಸುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಎಫ್ಎಸ್ಎಲ್ ಲ್ಯಾಬ್ ಆರಂಭಿಸಲಿದ್ದೇವೆ, ಶಸ್ತ್ರಾಸ್ತ್ರ ಒದಗಿಸಲಿದ್ದೇವೆ. ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಲ್ಲ. ಸಾರ್ವಜನಿಕರ ರಕ್ಷಣೆಗೂ ಸಹ ಆಕೆ ಬದ್ದ ಎಂದು ಹೇಳಿದ್ದಾರೆ. ರಕ್ಷಣೆ ಅಂದರೆ ಗಡಿಯ ಸೈನಿಕರು. ಆತಂರಿಕ ಭದ್ರತೆ ನಾಗರೀಕರ ಮಾನ ಪ್ರಾಣ ಕಾಪಾಡುವ ಹೊಣೆಗಾರಿಕೆ ಪೊಲೀಸರದ್ದು. ಸೈನಿಕರಷ್ಟೇ ಪೊಲೀಸರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಸೈನಿಕರಿಗಿಂತ ಪೊಲೀಸರು ವಿಭಿನ್ನ. ಸೈನಿಕರಿಗೆ ಶತೃಗಳು ಕಾಣಿಸುತ್ತಾರೆ. ಕೊಲ್ಲಬೇಕು ಅಥವಾ ಮಡಿಯಬೇಕು. ಆದರೆ ಪೊಲೀಸರು ಕೊಲ್ಲಲು ಇಲ್ಲ ಕಾನೂನು ಇದಕ್ಕೆ ಅಡ್ಡಿಬರುತ್ತದೆ. ಸೈನಿಕರಷ್ಟು ಕಠಿಣವಾಗಿ ವರ್ತಿಸುವ ಹಾಗೆ ಇಲ್ಲ. ಸಾರ್ವಜನಿಕರನ್ನು ಬಂಧುಗಳಂತೆ ನೋಡಬೇಕು. ನಾಗರೀಕರಿಗೆ ಸಜ್ಜನರಿಗೆ ಅಭಯವನ್ನು ನೀಡಬೇಕು. ಕೆಲವು ಪೊಲೀಸರ ಅನಿಷ್ಟತನ ನೋಡಿದಾಗ ಉತ್ತಮ ನಡವಳಿಕೆಯವರು ತಲೆ ತಗ್ಗಿಸಬೇಕಾಗಿದೆ. ಒಮ್ಮೆಯೂ ತಲೆ ತಗ್ಗಿಸುವ ಕೆಲಸ ಮಾಡಬಾರದು. ಯಾವುದೇ ಅಪಚಾರಗಳು ನಮ್ಮಿಂದ ಆಗಬಾರದು. ನಾವು ಅವರ ರಕ್ಷಕರಾಗಬೇಕು ನಾವು ಯಾರ ಗುಲಾಮರಾಗಬಾರದು ಎಂದು ಹೇಳಿದರು.

- Advertisement -

Latest Posts

Don't Miss