Monday, September 9, 2024

Latest Posts

‘ಶೋಭಕ್ಕಾ ಸ್ವಲ್ಪ ತಾಳ್ಮೆಯಿಂದ ಇರಕ್ಕ- ನಿಮ್ಮ ಸಂಸ್ಕಾರ,ಸಂಸ್ಕೃತಿ ನಮಗೆ ಗೊತ್ತಿದೆ’- ಗೃಹ ಸಚಿವ ತಿರುಗೇಟು

- Advertisement -

ಮೈಸೂರು: ಜಿಂದಾಲ್ ಗೆ ಭೂಮಿ ಮಾರಟ ವಿಚಾರ ಕುರಿತಂತೆ ಪದೇ ಪದೇ ಮೈತ್ರಿ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವ ಸಂಸದೆ ಶೋಭಾ ಕರಂದ್ಲಾಜೆಗೆ ಗೃಹ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡುತ್ತಿದ್ದ ಸಚಿವ ಎಂ.ಬಿ.ಪಾಟೀಲ್, ಜಿಂದಾಲ್ ಗೆ ಭೂಮಿ ಮಾರಟ ವಿಚಾರವಾಗಿ ಬಿಜೆಪಿ ಮಾಡುತ್ತಿರೋ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ರು. ಈ ವೇಳೆ ಪ್ರತ್ಯೇಕವಾಗಿ ಸಂಸದೆ ಶೋಭ ಕರಂದ್ಲಾಜೆಗೆ ತಿರುಗೇಟು ನೀಡಿದ್ರು. ಶೋಭಕ್ಕಾ ಸ್ವಲ್ಪ ತಾಳ್ಮೆಯಿಂದ ಇರಕ್ಕ ಅಂತ ಹೇಳಿದ ಅವರು, ಶೋಭಾ ಕರಂದ್ಲಾಜೆ ಹೆಣ್ಣುಮಗಳು ಅಂತ ನಾನು ಯಾವ ಪದವನ್ನೂ ಪ್ರಯೋಗಿಸುತ್ತಿಲ್ಲ. ನಾವು ಬಿಜಾಪುರದವರು ನಮಗೆ ಬೇರೆ ಪದಗಳೇ ಗೊತ್ತು. ಶೋಭಾರಂತಹ ಹೆಣ್ಣುಮಗಳ ಬಾಯಲ್ಲಿ ಅಂತಹ ಪದ ಬರಬಾರದು. ಅವರ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿ ನನಗೆ ಗೊತ್ತಿದೆ ಅಂತ ಟಾಂಗ್ ನೀಡಿದ್ರು. ಅಲ್ಲದೆ ಜಿಂದಾಲ್ ವಿಚಾರವಾಗಿ ಪ್ರತ್ಯೇಕ ಕಮಿಟಿ ರಚಿಸಿ ಶೋಭಾ ಕರಂದ್ಲಾಜೆಯವರಿಗೆ ತಾಕತ್ತಿದ್ದರೆ ಕಮಿಟಿ ಮುಂದೆ ಹೋಗಲಿ. ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ ಅಂತ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿಗೆ ರಮ್ಯಾ ಕೋಟಿ ಕೋಟಿ ಯಾಮಾರಿಸಿದ್ರಾ??!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=aSbQ5Ib3zCk
- Advertisement -

Latest Posts

Don't Miss