Friday, April 25, 2025

Latest Posts

ಹನಿಟ್ಯ್ರಾಪ್ ಮಾಡುವವರು ಪಬ್ಲಿಕ್ ಲೈಫ್ ನಲ್ಲಿ ಇರಬಾರದು : ಹೀಗ್ಯಾಕಂದ್ರು ರಾಜಣ್ಣ..?

- Advertisement -

Political News: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣದ ತನಿಖೆ ಮುಂದುವರೆದಿದೆ. ಇದರ ಬಗ್ಗೆ ಆರೋಪಿಸಿದ್ದ ಸಚಿವ ರಾಜಣ್ಣ ಗೃಹ ಸಚಿವರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಆದರೆ ಇದೀಗ ತಮ್ಮ ಪುತ್ರ ರಾಜೇಂದ್ರ ಹಾಗೂ ತಮ್ಮ ಮೇಲಿನ ಹನಿಟ್ಯ್ರಾಪ್ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಈ ಕುರಿತು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಬಾಹಿರ ಕೃತ್ಯಗಳಿಗೆ ಯಾರದೇ ಕುಮ್ಮಕ್ಕಿರಲಿ, ಅಥವಾ ಯಾರೇ ಭಾಗಿಯಾಗಿರಲಿ ಅವರಿಗೆ ದೇವರು ಒಳ್ಳೆಯದು ಮಾಡುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನೂ ಹನಿಟ್ಯ್ರಾಪ್ ಹಾಗೂ ಕೊಲೆಯ ಸಂಚನ್ನು ಯಾರೇ ರೂಪಿಸಿರಲಿ ಅಂತವರು ಯಾರೂ ಕೂಡ ಸಾರ್ವಜನಿಕ ಜೀವನದಲ್ಲಿ ಇರಬಾರದು. ನಾನೇ ಮಾಡಿದರೂ ಕೂಡ ನನಗೂ ಅನ್ವಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದು ಖಂಡನಾರ್ಹ..

ಇನ್ನೂ ಇಂತಹ ಕೃತ್ಯಗಳಲ್ಲಿ ಬೆಂಗಳೂರಿವರಾದ್ರು ಭಾಗಿಯಾಗಿರಲಿ, ಮುಂಬೈನವರಾಗಿರಲಿ ಅದು ತನಿಖೆಯಲ್ಲಿ ಬೆಳಕಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.

ಈ ರೀತಿಯ ಪ್ರಕರಣಗಳ ಹಿಂದೆ ನಮ್ಮ ಪಕ್ಷದವರೇ ಇರಲಿ, ಅಥವಾ ಇನ್ನೊಂದು ಪಕ್ಷದವರಾದ್ರು ಈ ಕೃತ್ಯ ಮಾಡಿರಲಿ ಅದು ತಪ್ಪಾದ ಕೆಲಸವೇ ಆಗಿದೆ ಎಂದು ರಾಜಣ್ಣ ಹೇಳಿದ್ದಾರೆ.

ಅಲ್ಲದೆ ಒಂದು ವೇಳೆ ರಾಜಕಾರಣಿಗಳನ್ನು ಹೊರತು ಪಡಿಸಿ ಇನ್ಯಾರಾದರೂ ಈ ರೀತಿಯ ಹೀನ ಕೃತ್ಯಗಳಿಗೆ ಪ್ರಯತ್ನ ಮಾಡಿರಲಿ ಅದು ಖಂಡನಾರ್ಹವಾಗಿದೆ ಎಂದಿದ್ದಾರೆ.

ಗೃಹ ಸಚಿವ, ಸಿಎಂ ಅವರಿಗೆ ಬಿಟ್ಟ ವಿಚಾರ..

ಈ ಹನಿಟ್ಯ್ರಾಪ್ ಕೇಸ್ ಅನ್ನು ಸರ್ಕಾರ ಯಾವ ರೀತಿ ಮಾಡುತ್ತದೋ ಮಾಡ್ಲಿ , ಎಸ್ ಐಟಿ ತನಿಖೆ ಮಾಡ್ತಾರೋ ಅಥವಾ ಸಿಐಡಿ ತನಿಖೆ ಮಾಡ್ತಾರೋ ಅದು ಗೃಹ ಸಚಿವ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ರಾಜಣ್ಣ ತಿಳಿಸಿದ್ದಾರೆ.

- Advertisement -

Latest Posts

Don't Miss