Horoscope: ಜ್ಯೋತಿಷ್ಯದಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಆದರೆ ಕೆಲವರು ಜ್ಯೋತಿಷ್ಯವನ್ನು ನಂಬುತ್ತಾರೆ ಮತ್ತೆ ಕೆಲವರು ಜ್ಯೋತಿಷ್ಯವನ್ನು ನಂಬುವುದಿಲ್ಲ. ಆದರೆ ನೀವು ತಿನ್ನುವ ಆಹಾರ, ನಡೆದುಕೊಳ್ಳುವ ರೀತಿಯಿಂದ ಹಿಡಿದು ಧರಿಸುವ ಬಟ್ಟೆಗೂ ಕೂಡ ಜ್ಯೋತಿಷ್ಯದಲ್ಲಿ ತನ್ನದೇ ಮಹತ್ವವಿದೆ. ಹಾಗಾಗಿ ನಾವಿಂದು ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ, ಉತ್ತಮ ಅಂತಾ ಹೇಳಲಿದ್ದೇವೆ.
ಸೋಮವಾರದಂದು ನೀವು ಬಿಳಿ ಬಣ್ಣದ ಬಟ್ಟೆ ಧರಿಸಬಹುದು. ಏಕೆಂದರೆ ಈ ವಾರ ಶಿವನಿಗೆ ಇಷ್ಟವಾದ ವಾರ. ಅಲ್ಲದೇ, ಸೋಮ ಎಂದರೆ ಚಂದ್ರ. ಇಬ್ಬರ ನೆಚ್ಚಿನ ಬಣ್ಣ ಬಿಳಿ. ಹಾಗಾಗಿ ಬಿಳಿ ಬಣ್ಣದ ಬಟ್ಟೆಯನ್ನು ಸೋಮವಾರದ ದಿನ ಧರಿಸಿದರೆ, ಉತ್ತಮ ಅಂತಾ ಹೇಳಲಾಗಿದೆ.
ಮಂಗಳವಾರದಂದು ಕೆಂಪು ಬಣ್ಣದ ಬಟ್ಟೆ ಧರಿಸಬಹುದು. ಈ ದಿನ ಹನುಮ ಮತ್ತು ಗಣೇಶನ ದಿನ. ಇಬ್ಬರಿಗೂ ಕೆಂಪು ಹೂವೆಂದರೆ ಅಚ್ಚುಮೆಚ್ಚು. ಅಲ್ಲದೇ, ಮಂಗಳನಿಗೂ ಕೆಂಪು ಬಣ್ಣವೆಂದರೆ ಇಷ್ಟ. ಹಾಗಾಗಿ ಈ ದಿನಕ್ಕೆ ತಕ್ಕಂತೆ ಕೆಂಪು ಬಣ್ಣದ ಬಟ್ಟೆ ಧರಿಸಬಹುದು.
ಬುಧವಾರದಂದು ಗುಲಾಬಿ ಮತ್ತು ಕಿತ್ತಳೆ ಬಣ್ಣದ ಬಟ್ಟೆ ಧರಿಸುವುದು ಉತ್ತಮ.
ಗುರುವಾರದಂದು ಹಳದಿ ಬಣ್ಣದ ಬಟ್ಟೆ ಧರಿಸಬೇಕು. ಏಕೆಂದರೆ, ಗುರುಗ್ರಹಕ್ಕೆ ಇಷ್ಟವಾಗುವ ಬಣ್ಣ ಅಂದ್ರೆ ಹಳದಿ ಬಣ್ಣ. ಹಾಗಾಗಿ ಗುರುವಾರದಂದು ಹಳದಿ ಬಣ್ಣದ ಬಟ್ಟೆ ಧರಿಸಿದರೆ, ಗುರುದೋಷ ನಿವಾರಣೆಯಾಗುತ್ತದೆ. ನೆಮ್ಮದಿ, ಆರ್ಥಿಕ ಸಧೃಡತೆ ಉಂಟಾಗುತ್ತದೆ ಅಂತಾ ಹೇಳಲಾಗಿದೆ.
ಶುಕ್ರವಾರದಂದು ಬಿಳಿ ಬಣ್ಣದ ಬಟ್ಟೆ ಧರಿಸುವುದು ಶುಕ್ರ ಸಧೃಡನಾಗುತ್ತಾನೆ. ಇದರಿಂದ ಸಮಾಜದಲ್ಲಿ ಗೌರವ, ಆರ್ಥಿಕವಾಗಿ ಧೃಡವಾಗುತ್ತಾರೆ. ಹಾಗಾಗಿ ರಾಜಕಾರಣಿಗಳು ಸದಾ ಕಾಲ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ.
ಶನಿವಾರದಂದು ಕಪ್ಪು, ನೀಲಿ ಬಣ್ಣ ಅಥವಾ ಬಿಳಿ ಬಣ್ಣದ ಬಟ್ಟೆ ಧರಿಸಿ. ಏಕೆಂದರೆ, ಯಾರಿಗೆ ಶನಿದೆಸೆ ಶುರುವಾಗಿರುತ್ತದೆಯೋ, ಅಂಥವರಿಗೆ ಹೆಚ್ಚು ಕಪ್ಪು ಮತ್ತು ನೀಲಿ ಬಣ್ಣವೇ ಇಷ್ಟವಾಗುತ್ತದೆ. ಆದರೆ ಈ ಸಮಯದಲ್ಲಿ ಬಿಳಿ ಬಟ್ಟೆ ಧರಿಸಬೇಕು ಅಂತಾ ಹೇಳಲಾಗುತ್ತದೆ.
ರವಿವಾರದಂದು ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆ ಧರಿಸಿ, ಏಕೆಂದರೆ ಈ ದಿನ ಸೂರ್ಯ ದೇವನ ದಿನವಾಗಿದ್ದು, ಸೂರ್ಯನ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ.