Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ಮಕರ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ.
ಮಕರ ರಾಶಿಯವರಿಗೆ ಇಷ್ಟು ದಿನ ಸಾಡೇಸಾಥಿ ಇತ್ತು. ಈ ಯುಗಾದಿ ಹಬ್ಬದ ಸಮಯದಲ್ಲಿ ಸಪ್ತಮ ಶನಿಯಿಂದ ಬಿಡುಗಡೆಯಾಗಲಿದ್ದೀರಿ. ಇನ್ನು ಕೊಲೆಸ್ಟ್ರಾಲ್ ಕಾರಣದಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಲಿದೆ. ಇಷ್ಟು ವರ್ಷ ಅನುಭವಿಸಿದ್ದ ಕಷ್ಟಗಳಿಂದ ಮುಕ್ತಿ ಸಿಗಲಿದೆ. ಸಾಾಲಬಾಧೆಯಿಂದ ಬಳಲುತ್ತಿದ್ದರೆ, ಸಾಲವೂ ಮುಕ್ತವಾಗಲಿದೆ.
ಅಣ್ಣ- ತಮ್ಮಂದಿರ ಜೊತೆ ತಾಳ್ಮೆಯಿಂದ ವರ್ತಿಸಬೇಕು. ಸಂಗಾತಿಯ ಜೊತೆಗೂ ತಾಳ್ಮೆಯಿಂದ ಇದ್ದರೆ ಉತ್ತಮ. ದಾಂಪತ್ಯ ಕಲಹವಾಗುವ ಸಾಧ್ಯತೆ ಇದ್ದು, ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ತಾಳ್ಮೆಯಿಂದ ವರ್ತಿಸುವುದು ಉತ್ತಮ. ಸುಮ್ಮ ಸುಮ್ಮನೆ ಅನುಮಾನ ಪಡುವಂತಾಗುತ್ತದೆ.
ಇದಕ್ಕೆ ಪರಿಹಾರವಾಗಿ ಅಮಾಾಸ್ಯೆಯ ದಿನ ದತ್ತಾತ್ರೇಯನ ದರ್ಶನ ಮಾಡಿ, ಕೆಂಪು ಬಟ್ಟೆ, ಕಡಲೆಕಾಳನ್ನು ದಾನ ಮಾಡಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.