Sunday, April 20, 2025

Latest Posts

Horoscope: ಖ್ಯಾತ ಜ್ಯೋತಿಷಿ ವೇಣುಗೋಪಾಲ ಶರ್ಮಾರಿಂದ ಕುಂಭ ರಾಶಿ ಯುಗಾದಿ ಭವಿಷ್ಯ

- Advertisement -

Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ಕುಂಭ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ.

ಕುಂಭ ರಾಶಿಯವರ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇರುತ್ತದೆ. ಕುಂಭ ರಾಶಿಯವರ ಮಕ್ಕಳ ಹಠ ಸ್ವಭಾವದಿಂದ ಅವರನ್ನು ದೂರ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಎಷ್ಟೇ ಹಠವಿದ್ದರೂ, ಮಕ್ಕಳನ್ನು ಹಾಸ್ಟೇಲ್‌ಗೆ ಸೇರಿಸುವುದು, ಬೇರೆ ಊರಿಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಬೇಡಿ.

ಇನ್ನು ವಿವಾಹ ವಿಷಯದಲ್ಲಿ ವಿಚಾರಿಸಿ ಮುಂದುವರಿಯುವುದು ಉತ್ತಮ. ಕುಂಭ ರಾಶಿಯ ಗರ್ಭಿಣಿಯರು ಮಕ್ಕಳ ವಿಚಾರದಲ್ಲಿ ಎಚ್ಚರಿಕೆ, ಕಾಳಜಿ ವಹಿಸುವುದು ಅತ್ಯಗತ್ಯ. ವಾಕ್‌ಸ್ಥಾನದಲ್ಲಿ ಶನಿ ಇರುವ ಕಾರಣ, ಎಲ್ಿ ಮಾತನಾಡಬಾರದೋ, ಅಲ್ಲಿ ಮಾತನಾಡಿ, ನಿಷ್ಠುರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಹಣ ಇದ್ದಕ್ಕಿದ್ದಂತೆ ಮಾಯವಾಗಬಹುದು. ಮನೆಯಲ್ಲಿಯೇ ನಿಮ್ಮ ಹಿತೈಷಿಗಳೇ ನಿಮ್ಮ ಹಣವನ್ನು ತೆಗೆದುಕೊಳ್ಳಬಹುದು. ಆಗ ನೀವು ಮನೆಯವರ ಮೇಲೆ ಆರೋಪ ಹೊರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮ್ಮ ಹಣ, ವಸ್ತುಗಳಿಗೆ ನೀವೇ ಜವಾಬ್ದಾರರಾಗಿರಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss