Horoscope: ಆಚಾರ್ಯ ತಾಮ್ರಪರ್ಣಿ ಗುರೂಜಿ 2025ರಲ್ಲಿ 12 ರಾಶಿಗಳ ಫಲಾಫಲ ಹೇಗಿರುತ್ತದೆ ಎಂದು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಮೇಷ: ಮೇಷ ರಾಶಿಗೆ ಮಾರ್ಚ್ ಬಳಿಕ ಶನಿಯ ಪ್ರವೇಶವಾಗಲಿದೆ. ಸಾಡೇಸಾಥಿ ಶುರುವಾಗಲಿದ್ದು, ಜೀವನ ಅನುಭವ ಕೊಡಲು ಶನಿ ಬರಲಿದ್ದಾನೆ. ಹೀಗಾಗಿ ಯಾರ್ಯಾರ ಮದುವೆ ವಿಳಂಬವಾಗುತ್ತಿದೆಯೋ, ಅವರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಇನ್ನು ಸಂತಾನಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ, ಸಂತಾನ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆದರೆ ಮುಖ, ತಲೆಗೆ ಸಂಬಂಧ ಪಟ್ಟ ಹಾಾಗೆ, ಆರೋಗ್ಯ ಹದಗೆಡಲಿದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ.
ವೃಷಭ: ವೃಷಭ ರಾಶಿಯವರಿಗೆ 37ವರೆ ವರ್ಷದ ಹಿಂದೆ ಸಿಕ್ಕ ಸುಯೋಗ, ಮತ್ತೆ ಈ ವರ್ಷ ಒದಗಿ ಬರಲಿದೆ. ಯಾಕಂದ್ರೆ ಈ ವರ್ಷ ನಿಮಗೆ ಅತ್ಯುತ್ತಮವಾಗಿರಲಿದೆ. ನಿಮ್ಮ ಬಳಿ ಸಾವಿರ ಇದ್ದರೆ ನಿಮಗೆ ಲಕ್ಷ ಸಿಗುತ್ತದೆ. ಲಕ್ಷವಿದ್ದರೆ, ಕೋಟಿ ಸಿಗುತ್ತದೆ. ಹೀಗೆ ಇರುವ ಆದಾಯ, ಖುಷಿ ಎಲ್ಲವೂ ದುಪ್ಪಟ್ಟಾಗುವ ಯೋಗ ನಿಮಗೆ ಈ ವರ್ಷ ಒದಗಿ ಬಂದಿದೆ. ಏಕೆಂದರೆ, ಭಾಗ್ಯಸ್ಥಾನದಲ್ಲಿ ಶನಿ ಪ್ರವೇಶವಾಗಿದ್ದಾನೆ.
ಮಿಥುನ: ಮಿಥುನ ರಾಶಿಯವರಿಗೆ ಸುಮ್ಮ ಸುಮ್ಮನೆ ಕೋಪ ಬರುವುದಿಲ್ಲ. ಸದುದ್ದೇಶಕ್ಕಾಗಿಯೇ ಕೋಪ ಬರುತ್ತದೆ. ಕಲ್ಮಶವಿಲ್ಲದ ಕೋಪ ನಿಮ್ಮದಾದರೂ ಕೂಡ, ಇದೇ ಕೋಪದಿಂದಲೇ ನಿಮಗೆ ಸಮಸ್ಯೆ ಬರುತ್ತದೆ. ಸಾಲ ಮಾಡಿದವರು, ಸಾಲ ತೀರಿಸುತ್ತೀರಿ. ಆದರೆ ಸ್ವಲ್ಪ ಕಷ್ಟ ಅನುಭವಿಸುತ್ತೀರಿ. ಆದರೆ ಒಳ್ಳೆಯದೇ ಆಗುತ್ತದೆ. ಆದರೆ ಕಾಲಿನ ಬಗ್ಗೆ ಎಚ್ಚರಿಕೆ ವಹಿಸಿ. ವಿಷ್ಣುವಿನ ಆರಾಧಾನೆ, ದೇವಿಯ ದರ್ಶನ, ಹಸಿರು ಕಾಳಿನ ದಾನ ಮಾಡಿದರೆ, ಒಳಿತಾಗುತ್ತದೆ.
ಕರ್ಕ: ಕರ್ಕಾಟಕ ರಾಶಿಯವರಿಗೆ ಈ ವರ್ಷ ಅದ್ಭುತವಾದ ಸಮಯ. ಶನಿ ಪೂರ್ಣ ಫಲವನ್ನೇ ನೀಡುವ ಸಾಧ್ಯತೆ ಇದೆ. ಸ್ಥಾನ ಪಲ್ಲಟ, ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಅಲ್ಲದೇ, ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಇದೆ. ಗೌರಿಯನ್‌ನು ಆರಾಧಿಸಿ, ಮಂಗಳವಾರ ಕುಂಕುಮಾರ್ಚನೆ ಮಾಡಿಸಿ.
ಸಿಂಹ: ಈ ವರ್ಷ ಸಿಂಹ ರಾಶಿಯವರಿಗೆ ಅತ್ಯುತ್ತಮವಾಗಿದೆ. ಜಗಳ ಮಾಡಿದವರು ಕೂಡ, ಬಂದು ಕೂತು ಮಾತನಾಡಿ, ಬಗೆಹರಿಸಿಕೊಳ್ಳುವ ಸಮಯ ಇದಾಗಿದೆ. ಆದಗೆ ಹಿತಶತ್ರುಗಳು ಕೂಡ ಇದ್ದು, ನಿಮ್ಮವರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸುಬ್ರಹ್ಮಣ್ಯ ಆರಾಧನೆ ಮಾಡಿ. ಆರೋಗ್ಯವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.
ಇನ್ನುಳಿದ ರಾಶಿಗಳ ಬಗ್ಗೆ ತಿಳಿಯಲು ವೀಡಿಯೋ ನೋಡಿ.
ಗುರೂಜಿಯ ಬಳಿ ಮಾತನಾಡಲು ಈ ನಂಬರ್ ಸಂಪರ್ಕಿಸಿ: 9900910601