Thursday, November 21, 2024

Latest Posts

ಬಿಸಿ ನೀರಿನ ಸ್ನಾನ ಹಿತವೆನಿಸಿದರೂ ಆರೋಗ್ಯಕ್ಕೆ ಹಾನಿಕಾರಕ..!

- Advertisement -

ಬೇಸಿಗೆಯಲ್ಲಿ ಬಿಸಿಲಿನ ದಾಹ ತಡಿಯಲಾಗದೇ ಧಾರಾಳವಾಗಿ ತಣ್ಣೀರಿನ ಸ್ನಾನ ಮಾಡುವವರು, ಮಳೆಗಾಲ, ಚಳಿಗಾಲ ಬಂತೆಂದರೆ ಅಗತ್ಯಕ್ಕೂ ಹೆಚ್ಚಿನ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ತಂಪಿನ ವಾತಾವರಣದಲ್ಲಿ ಬಿಸಿ ನೀರಿನ ಸ್ನಾನ ಹಿತವೆನಿಸಿದರೂ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ.

ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಗುವ ದುಷ್ಪರಿಣಾಮಗಳೇನು..?

1.. ಬಿಸಿ ನೀರಿನ ಸ್ನಾನದಿಂದ ಹೃದಯಸಂಬಂಧಿ ಖಾಯಿಲೆ ಕಾಣಿಸಿಕೊಳ್ಳುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

2..ಬಿಸಿ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಹೊಟ್ಟಿನ ಸಮಸ್ಯೆ ಕೂಡ ಉದ್ಭವವಾಗುತ್ತದೆ.

3.. ಬಿಸಿ ನೀರಿನ ಸ್ನಾನದಿಂದ ಚರ್ಮ ಸುಕ್ಕುಗಟ್ಟುತ್ತದೆ. ಇದರಿಂದ ಸಮಯಕ್ಕೂ ಮುಂಚೆಯೇ ನೀವು ವಯಸ್ಸಾದಂತೆ ಕಾಣುವಿರಿ.

4..ಊಟದ ನಂತರ ಬಿಸಿ ನೀರಿನ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

5..ತುಂಬ ಬಿಸಿ ಬಿಸಿ ನೀರಿನ ಸ್ನಾನದಿಂದ ಚರ್ಮ ಒಣಗುವುದು. ಅಲ್ಲದೇ, ಗುಳ್ಳೆ, ಅಲರ್ಜಿಗಳಾಗುವ ಸಾಧ್ಯತೆ ಇದೆ.

6..ಶೀತ, ಕೆಮ್ಮು-ಜ್ವರ ಕಾಣಿಸಿಕೊಂಡಲ್ಲಿ ಮಾತ್ರ ಬಿಸಿನೀರಿನ ಸ್ನಾನ ಮಾಡಬಹುದು.

ತಣ್ಣೀರಿನ ಸ್ನಾನ ಯಾಕೆ ಮಾಡಬೇಕು..?
ತಣ್ಣೀರಿನ ಸ್ನಾನದಿಂದ ಆಲಸ್ಯತನ ದೂರವಾಗುತ್ತದೆ. ಇಡೀ ದಿನ ನಾವು ಫ್ರೆಶ್ ಆಗಿರುವಂತೆ ಮಾಡಲು ತಣ್ಣೀರಿನ ಸ್ನಾನ ಸಹಕಾರಿಯಾಗುತ್ತದೆ.

ತಣ್ಣೀರಿನಿಂದ ತಲೆ ಸ್ನಾನ ಮಾಡುವುದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.

ಇನ್ನು ಮುಖಕ್ಕೆ ನೀವೂ ತಣ್ಣೀರನ್ನೇ ಬಳಸಬೇಕು. ಏಕೆಂದರೆ ತಣ್ಣೀರು ಕಣ್ಣಿನ ಆರೋಗ್ಯಕ್ಕೆ ಮತ್ತು, ತ್ವಚೆಯನ್ನ ಅಂದಗಾಣಿಸಲು ಸಹಕಾರಿಯಾಗಿದೆ.

ಲ್ಯಾಪಟಾಪ್‌, ಮೊಬೈಲ್ ಬಳಕೆ ಮಾಡುವರಂತೂ ದಿನಕ್ಕೆ 8ರಿಂದ 10 ಸಲ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ವೇಳೆ ಸೋಪ್ ಬಳಸುವ ಅಗತ್ಯವಿಲ್ಲ. ಆಗಾಗ ಮುಖಕ್ಕೆ ತಣ್ಣೀರು ಚಿಮುಕಿಸಿಕೊಂಡರೆ ಸಾಕು. ಮುಖ್ಯವಾಗಿ ಕಣ್ಣಿನ ಆರೋಗ್ಯಕ್ಕಾಗಿ , ಕಣ್ಣಿಗೆ ನೀರು ತಾಕುವಂತೆ ತಣ್ಣೀರು ಚಿಮುಕಿಸಿಕೊಳ್ಳಿ.

ಚಳಿಗಾಲ, ಮಳೆಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಲಾಗುವುದಿಲ್ಲ. ಪ್ರತಿದಿನ ಬಿಸಿ ನೀರಿನ ಸ್ನಾನ ಮಾಡುತ್ತಿದ್ದವರು ದಿಢೀರ್ ಅಂತ ತಣ್ಣೀರಿನ ಸ್ನಾನ ಮಾಡಿದರೂ ಶೀತ- ಕೆಮ್ಮು ಆಗಬಹುದು. ಹಾಗಾಗಿ ಉಗುರು ಬೆಚ್ಚಿನ ಸ್ನಾನ ಮಾಡುವುದನ್ನ ಅಭ್ಯಾಸ ಮಾಡಿಕೊಳ್ಳಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/CUthzGYMF-0

- Advertisement -

Latest Posts

Don't Miss