Sunday, September 8, 2024

Latest Posts

ಮನೆಯ ಹೆಂಗಸರು ಈ ಮೂರೂ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು..!

- Advertisement -

Devotional:

ಈ ಮೂರೂ ತಪ್ಪುಗಳು ಮನೆಯಲ್ಲಿ ಪದೇ ಪದೇ ನಡಿಯುತ್ತಿದೆ ಎಂದರೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ಆದಾಯದ ಮೂಲಗಳು ಕಡಿಮೆಯಾಗುತ್ತಾ ಹೋಗುತ್ತದೆ ಇದರಿಂದ ಮನೆಯ ಯಜಮಾನನಿಗೆ ವ್ಯಾಪಾರದಲ್ಲಿ ಅಬಿವೃದ್ದಿ ಯಾಗುವುದಿಲ್ಲ, ನೀವು ಮಾಡುವಂತಹ ಅಡುಗೆ ಇಂದಲೇ ಅವರಿಗೆ ಅದೃಷ್ಟ ಅನ್ನೋದು ಪ್ರಾಪ್ತಿ ಯಾಗುತ್ತದೆ ಹಾಗೆಯೆ ನೀವು ಮಾಡುವ ಅಡುಗೆ ಇಂದಲೇ ಅವರಗೆ ದುರದೃಷ್ಟ ಎನ್ನೋದು ಪ್ರಾಪ್ತಿಯಾಗುತ್ತದೆ. ಆದಕಾರಣ ಯಾವುದೇ ಕಾರಣಕ್ಕೂ ಈ ಮೂರೂ ತಪ್ಪುಗಳನ್ನು ಅಡುಗೆ ಮನೆಯಲ್ಲಿ ಮಾಡಬಾರದು ಹಾಗಾದರೆ ಆ ಮೂರೂ ತಪ್ಪುಗಳು ಯಾವುದು ಎಂದು ತಿಳಿದುಕೊಳ್ಳೋಣ .

ಮನೆಯಲ್ಲಿ ಯಾರು ಅಡುಗೆ ಕೊನೆಯಲ್ಲಿ ಅಡುಗೆಮಾಡುತ್ತಾರೋ ಯಾರು ಅಡುಗೆ ಕೊನೆಯಲ್ಲಿ ಹೆಚ್ಚು ಹೊತ್ತು ಕಾಲ ಕಳಿಯುತ್ತಾರೋ ಅವರು ಈ ಮೂರೂ ತಪ್ಪುಗಳನ್ನೂ ಎಂದಿಗೂ ಮಾಡಬಾರದು ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಅನ್ನೋದು ಕಡಿಮೆಯಾಗುತ್ತದೆ, ಮನೆ ಏಳಿಗೆ ಅನ್ನೋದು ಆಗುವುದಿಲ್ಲ, ಅದರಲ್ಲಿ ಮೊದಲನೇ ತಪ್ಪು ಯಾವುದೆಂದರೆ,

ತಲೆಯ ಕೂದಲನ್ನು ಬಿಟ್ಟಿಕೊಂಡು ಅಡುಗೆ ಮನೆಗೆ ಪ್ರವೇಶವನ್ನು ಮಾಡಬಾರದು ಹಾಗೂ ಅಡುಗೆಯನ್ನು ತಯಾರು ಮಾಡಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ . ನೀವು ಮಾಡುವಂತಹ ಅಡುಗೆಯನ್ನು ಸೇವಿಸುವ ವ್ಯಕ್ತಿಗಳಿಗೆ ಯಶಸ್ಸು ಸಿಗುವುದಿಲ್ಲ ಆದಕಾರಣ ತಲೆಯ ಕೂದಲನ್ನು ಬಿಚ್ಚಿಕೊಂಡು ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಹೋಗಬಾರದು .ಈ ಒಂದು ನಿಯಮವನ್ನು ಮನೆಯಲ್ಲಿ ಪ್ರತಿಯೊಬ್ಬ ಹೆಂಗಸರು ಪಾಲಿಸಬೇಕು.

ಎರಡನೇಯದಾಗಿ, ಜೇವನದಲ್ಲಿ ಎಷ್ಟೇ ಕಷ್ಟಗಳು ಇದ್ದರು , ಎಷ್ಟು ನೋವು ಮನಸ್ಸಲ್ಲಿ ಇದ್ದರು ಕೂಡ , ಮನೆಯ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಕುಳಿತುಕೊಂಡು ಕಣ್ಣೀರು ಹಾಕಬಾರದು, ಹೀಗೆ ಮಾಡಿದರೆ ನಿಮನ್ನು ಕಷ್ಟಗಳು ಬಿಡುವುದಿಲ್ಲ , ನಿಮ್ಮಿಂದ ಮನೆಯಲ್ಲಿರುವವರಿಗೆಲರಿಗೂ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಮನೆಯ ಯಜಮಾನಿ ನಗುನಗುತ್ತಾ ಇದ್ರೆ ಸುತ್ತಾ ಮುತ್ತಾ ಇರುವವರಿಗೂ ವಿಶೇಷವಾದ ಫಲಗಳು ಸಿಗುತ್ತದೆ . ಅದು ಬಿಟ್ಟು ಮನೆಯ ಹೆಣ್ಣು ಮಕ್ಕಳು ಅಡುಗೆ ಕೋಣೆಯಲ್ಲಿ ಕಣ್ಣೀರಾಕಿದರೆ ಮನೆಗೆ ಕಷ್ಟಗಳು ತಪ್ಪಿದಲ್ಲ . ಯಾವ ರಂಗದಲ್ಲೂ ಯಶಸ್ಸು ಅನ್ನೋದು ಸಿಗುವುದಿಲ್ಲ , ಒಂದು ವೇಳೆ ನೀವು ಕಣ್ಣೀರನ್ನ ಹಾಕಿಕೊಂಡು ಅಡುಗೆ ಬಡಿಸಿದರೆ ಹೀಗೆ ಮಾಡುವುದರಿಂದ ಕಷ್ಟಗಳು ತಪ್ಪುವುದಿಲ್ಲ ಇದು ಮನೆಯಲ್ಲಿ ಇರುವ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಯಾವ ಕೆಲಸ ಮಾಡಿದರು ನಷ್ಟಗಳು ಸಂಭವಿಸುತ್ತದೆ.

ಮೂರನೆಯದಾಗಿ ,ಅಡುಗೆ ಕೋಣೆಯಲ್ಲಿ ನೀವು ಅಡುಗೆ ಮಾಡಿದ ನಂತರ ಪಾತ್ರೆಯಲ್ಲಿ ಇರುವ ಆಹಾರಪದಾರ್ಥಗಳು ಖಾಲಿಯಾದ ಮೇಲೆ ಯಾವುದೇ ಕಾರಣಕ್ಕೂ ಖಾಲಿ ಪಾತ್ರೆಗಳನ್ನ ಗ್ಯಾಸ್ ಸ್ಟವ್ ಮೇಲೆ ಹಾಗೆಯೆ ಇಡುವುದಕ್ಕೆ ಹೋಗಬಾರದು , ಹೀಗೆ ಮಾಡಿದರೆ ಲಕ್ಷ್ಮಿ ದೇವಿಯ ಅನುಗ್ರಹದ’ಜೊತೆಗೆ ಅನ್ನಪೂರ್ಣ ದೇವಿಯ ಆಶೀರ್ವಾದ ಕಡಿಮೆಯಾಗುತ್ತಾ ಹೋಗುತ್ತದೆ. ನೀವು ಅಡುಗೆ ಮಾಡುವ ಹೊಲೆ ಅಥವಾ ಸ್ಟವ್ ಅನ್ನು ಮೊದಲು ಗೌರವದಿಂದ, ಭಕ್ತಿ ಇಂದ ವಿಶೇಷವಾಗಿ ಪೂಜೆ ಮಾಡಿ ಅಡುಗೆ ತಯಾರಿಸಬೇಕು . ಅಡುಗೆ ಮಾಡಿದ ಆಹಾರ ಪದಾರ್ಥಗಳು ಖಾಲಿಯಾದ ಮೇಲೆ ಆ ಖಾಲಿ ಪಾತ್ರೆಗಳನ್ನು ಸ್ಟವ್ ಮೇಲೆ ಹಾಗೆಯೆ ಇಡಬಾರದು ಇದರಿಂದ ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತಾ ಹೋಗುತ್ತದೆ , ಆರ್ಥಿಕ ಸಮಸ್ಯೆಗಳು ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ . ಮನೆಯಲ್ಲಿ ಯಾವಗಲು ಕಿರಿಕಿರಿಗಳು ಉಂಟಾಗುತ್ತದೆ ಮನಸ್ಸಿಗೆ ನೆಮದ್ದಿ ಇರುವುದಿಲ್ಲ , ಕುಟುಂಬದಲ್ಲಿ ಕಲಹಗಳು ಹೆಚ್ಚಾಗುತ್ತಾ ಹೋಗುತ್ತದೆ ಅನ್ನ ಪೂರ್ಣೇಶ್ವರಿ ದೇವಿಯ ಅನುಗ್ರಹ ಆ ಮನೆಗೆ ಕಡಿಮೆಯಾಗುತ್ತಾ ಹೋಗುತ್ತದೆ.ಈ ಮೂರೂ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು.

ಹಾಗಾದರೆ ಯಾವ ಕೆಲಸ ಮಾಡಿದರೆ ಮನೆಯ ಏಳಿಗೆ ಆಗುತ್ತದೆ ಎಂದರೆ , ಬೆಳಿಗ್ಗೆ ಹೆಣ್ಣುಮಕ್ಕಳು ಅಡುಗೆ ಮನೆ ಪ್ರವೇಷ ಮಾಡುವ ಮೊದಲು ಸ್ನಾನವನ್ನು ಮಾಡಿರಬೇಕು , ಸಾಮಾನ್ಯವಾಗಿ ಎಲ್ಲರು ಸ್ನಾನವನ್ನು ಮಾಡದೇ ಅಡುಗೆ ಕೋಣೆಗೆ ಪ್ರವೇಶವನ್ನು ಮಾಡುತ್ತಾರೆ , ಒಂದು ವೇಳೆ ಸ್ನಾನವನ್ನು ಮಾಡುವುದಕ್ಕೆ ಹಾಗದೆ ಇರುವವರು ಕೈಕಾಲು ಮುಖವನ್ನು ತೊಳೆದು ಕೊಂಡು ದೇವರಿಗೆ ನಮಸ್ಕರ ಮಾಡಿ ಅಡುಗೆ ಕೋಣೆಗೆ ಪ್ರವೇಶ ಮಾಡಬೇಕು ಹಾಗೂ ಪ್ರತಿನಿತ್ಯ ನೀವು ಬೆಳಿಗ್ಗೆ ಹಾಲನ್ನು ಕಾಯಿಸುವಾಗ ಈ ಒಂದು ಮಂತ್ರವನ್ನು ಪಠಿಸಿದರೆ ಶಿವ ಪಾರ್ವತಿಯರ ಕೃಪೆ ವಿಶೇಷವಾಗಿ ನಿಮಗೆ ಪ್ರಾಪ್ತಿಯಾಗುತ್ತದೆ .“ಶಿವಾಯನಮಃ” ಎಂಬ ಮಂತ್ರವನ್ನು ಒಂದು ಬಾರಿ ಹೇಳಿಕೊಂಡು ಶಿವನ ಸ್ಮರಣೆಯನ್ನು ಮನಸ್ಸಲಿ ಮಾಡಿಕೊಂಡು ಹಾಲನ್ನು ಕಾಯಿಸಬೇಕು .ಈ ಮಂತ್ರವನ್ನು ನೀವು ಪ್ರತಿ ದಿನ ಹಾಲನ್ನು ಕಾಯಿಸುವ ಮುಂಚೆ ಹೇಳಿಕೊಳ್ಳಬೇಕು , ಇದರಿಂದ ಶಿವ ಪಾರ್ವತಿಯರ ಅನುಗ್ರಹ ಸಿಗುತ್ತದೆ , ಇವರ ಅನುಗ್ರಹ ಇದ್ದರೆ ಅನ್ನಪೂರ್ಣ ದೇವಿಯ ಅನುಗ್ರಹ ಖಂಡಿತ ಸಿಗುತ್ತದೆ . ಇದರಿಂದ ಮನೆಯಲ್ಲಿ ಇರುವ ಎಲ್ಲರಗೂ ವಿಶೇಷವಾಗಿ ದೈವ ಬಲ ಅನ್ನೋದು ಹೆಚ್ಚಾಗುತ್ತಾ ಹೋಗುತ್ತದೆ . ನಿಮ್ಮ ಮನಸ್ಸಿನಲ್ಲಿ ಎಷ್ಟು ಒಳ್ಳೆಯ ಭಾವನೆಗಳನ್ನು ಇಟ್ಟುಕೊಂಡು ಅಡುಗೆ ಮಾಡುತ್ತೀರೋ ಅಷ್ಟೇ ಖುಷಿಯಾಗಿ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಎಲ್ಲ ರಂಗದಲ್ಲೂ ಯಶಸ್ಸು ಸಿಗುತ್ತದೆ . ಇದನ್ನು ನಿಮ್ಮ ಗಮದಲ್ಲಿ ಇಟ್ಟುಕೊಳ್ಳಬೇಕು , ಇದು ನಿಮ್ಮ ಕುಟುಂಬದ ಅಭಿವೃದ್ಧಿಗೆ ಕಾರಣವಾಗುತ್ತದೆ .

ಭಗವದ್ಗೀತೆಯಲ್ಲಿ ಈ ಒಂದು ಚಿಕ್ಕ ಕಥೆ ಕೇಳಿದರೆ ನಿಮ್ಮ ಜೀವನ ಬದಲಾಗುತ್ತದೆ..!

ನಿಮ್ಮ ಮನೆಯಲ್ಲಿ ತುಳಸಿ ಮತ್ತು ಮನಿ ಪ್ಲಾಂಟ್ ಇರುವ ದಿಕ್ಕು ನೋಡಿ..ಈಗಿದ್ದರೆ ತಕ್ಷಣ ಬದಲಾಯಿಸಿ..!

ವಿಷ್ಣುವಿನ ಅನುಗ್ರಹಕ್ಕಾಗಿ ಧನುರ್ಮಾಸದಲ್ಲಿ ಈ ನಿಯಮಗಳನ್ನೂ ಪಾಲಿಸಿ ನಿಷ್ಠೆಯಿಂದ ಪೂಜಿಸಿ..!

 

- Advertisement -

Latest Posts

Don't Miss