201 ವಿದ್ಯಾರ್ಥಿಗಳಿಗೆ ಉದ್ಯಮಿ ಡಾ.ರಾಯ್ ಕಡೆಯಿಂದ ನಗದು ಬಹುಮಾನ.. ಪಡೆಯುವುದು ಹೇಗೆ..?

News: ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸುವ ಆಸೆ ಇರುತ್ತದೆ. ಅವರು ಅತ್ಯುತ್ತಮ ಅಂಕ ಕೂಡ ಗಳಿಸಿರುತ್ತಾರೆ. ಆದರೆ ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರದಿದ್ದ ಕಾರಣ, ವಿದ್ಯಾಭ್ಯಾಸ ಮೊಟಕುಗೊಳಿಸುತ್ತಾರೆ. ಆದರೆ ಇದೀಗ ಅದೃಷ್ಟವಂತ ಬಡ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪಡೆಯುವ ಅವಕಾಶವಿದೆ

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ವಿನ್ ಆದವರಿಗೆ ಡಾಾ.ರಾಯ್ ಎನ್ನುವ ಉದ್ಯಮಿ 50 ಲಕ್ಷ ರೂಪಾಯಿ ಬಹುಮಾನ ನೀಡಿದ್ದರು. ಇದೀಗ ಅದೇ ಉದ್ಯಮಿ, ಅತ್ಯುತ್ತಮ ಅಂಕ ಪಡೆಯುವ ವಿದ್ಯಾರ್ಥಿಗಳಿಗೆಲ್ಲ ಸೇರಿಸಿ 1 ಕೋಟಿ ರೂಪಾಯಿ ಕೊಡುತ್ತೇನೆ ಎಂದು ಘೋಷಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿಕೊಂಡಿರುವ ಡಾ.ರಾಯ್, ನಾನು 201 ವಿದ್ಯಾರ್ಥಿಗಳಿಗೆ ಈ 1 ಕೋಟಿ ರೂಪಾಯಿ ಹಣವನ್ನು ಸ್ಕಾಲರ್‌ಶಿಪ್‌ ರೂಪದಲ್ಲಿ ನೀಡಲಿದ್ದೇನೆ. ನೀವು ಕರ್ನಾಟಕ ಮತ್ತು ಕೇರಳದ ಯಾವುದೇ ಶಾಲೆಯಲ್ಲಿ, ಯಾವುದೇ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಯಾವುದೇ ಜಾತಿಯವರಾಗಿದ್ದರೂ ಕೂಡ, ಅತ್ಯುತ್ತಮ ಅಂಕ ಗಳಿಸಿದ್ದಲ್ಲಿ, ನಿಮಗೆ ಈ ನಗದು ಹಣ ಸಿಗಲಿದೆ ಎಂದು ಹೇಳಿದ್ದಾರೆ.

ಮೇ ತಿಂಗಳ ಅಂತ್ಯದಲ್ಲಿ ಶಾಲೆ ಶುರುವಾಗುತ್ತದೆ. ಆಗ ಆಯ್ದ ವಿದ್ಯಾರ್ಥಿಗಳ ಫೀಸ್ 50 ಸಾವಿರದವರೆಗೆ ಡಾ.ರಾಯ್ ಅವರೇ ಕಟ್ಟಲಿದ್ದಾರಂತೆ. ಆದರೆ ಆ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸ ಇಷ್ಟೇ. ಸದ್ಯ ನಡೆಯುತ್ತಿರುವ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಪರ್ಸೆಂಟೇಜ್ ತೆಗೆದಲ್ಲಿ, ಅಂಥ ವಿದ್ಯಾರ್ಥಿಗಳಲ್ಲಿ 201 ವಿದ್ಯಾರ್ಥಿಗಳ ಫೀಸ್ ಡಾ.ರಾಯ್ ಕಟ್ಟಲಿದ್ದಾರೆ.

ಬಡವಿದ್ಯಾರ್ಥಿಗಳು ತಮ್ಮ ತಂದೆ ತಾಯಿ ಪಡುತ್ತಿರುವ ಕಷ್ಟವನ್ನು ಕಂಡು, ಚೆನ್ನಾಗಿ ಓದಿ ಮುಂದೆ ಬರಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ, ಡಾ.ರಾಯ್ ಈ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಇವರೇ ಹೇಳಿದ ಪ್ರಕಾರ, ಇದಕ್ಕೆ ಯಾವ ರೀತಿಯಾಗಿ ಅಪ್ಲೈ ಮಾಡಬೇಕು ಎಂದು ತಿಳಿಯಲು ನೀವು ಏಪ್ರಿಲ್ ತಿಂಗಳವರೆಗೆ ಕಾಯಬೇಕು. ಇವರ ಇನ್‌ಸ್ಟಾ ಅಕೌಂಟ್ ಫಾಲೋ ಮಾಡಿ, ನೀವು ಇವರು ಯಾವ ದಿನ ಈ ಬಗ್ಗೆ ಮಾಹಿತಿ ನೀಡಲಿದ್ದಾರೆಂದು ತಿಳಿಯಬಹುದು.

ನೀವೂ ಬಡ ವಿದ್ಯಾರ್ಥಿಯಾಗಿದ್ದು, ನಿಮ್ಮ ಅಪ್ಪ ಅಮ್ಮ ನಿಮ್ಮ ಶಾಲೆಯ ಫೀಸ್ ಕಟ್ಟಲು ಕಷ್ಟ ಪಡುತ್‌ತಿದ್ದರೆ, 8,9,10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ, 80ಕ್ಕೂ ಹೆಚ್ಚು ಪರ್ಸೆಂಟ್ ತೆಗೆದುಕೊಳ್ಳಿ. ಬಳಿಕ ಡಾ.ರಾಯ್ ಅವರು ಹೇಳುವ ರೀತಿ ಈ ನಗದು ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಿ.

About The Author