Health Tips: ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಸುಲಭದ ಮಾತಲ್ಲ. ಕಾರಣ ಹಿರಿಯರು ಅವಶ್ಯಕತೆ ಇರುವ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕ“ಳ್ಳುತ್ತಾರೆ. ಆದರೆ ಮಕ್ಕಳಿಗೆ ನಾವು ಅದೆಲ್ಲ ಸೇವಿಸಲು ನೀಡಲಾಗುವುದಿಲ್ಲ. ಅಲ್ಲದೇ, 6ರಿಂದ 7 ವರ್ಷವಾದ ಮೇಲೆಯೇ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲಿಯವರೆಗೂ ಪದೇ ಪದೇ ಜ್ವರ, ಶೀತ, ಕೆಮ್ಮು ಬರುತ್ತಲೇ ಇರುತ್ತದೆ. ಹಾಗಾಗಿ ನಾವಿಂದು ಮಕ್ಕಳಿಗೆ ಪದೇ ಪದೇ ಅನಾರೋಗ್ಯವಾಗದಿರುವ ಹಾಗೆ ತಡಿಯೋದು ಹೇಗೆ ಅಂತಾ ತಿಳಿಯೋಣ.
ಮಕ್ಕಳಿಗೆ ಅನಾರೋಗ್ಯವಾದಾಗ ನಾವು ಗಮನದಲ್ಲಿರಿಸಬೇಕಾದ ಪ್ರಥಮ ಸಂಗತಿ ಅಂದ್ರೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಮಕ್ಕಳು ಪೂರ್ತಿಯಾಗಿ ಗುಣವಾಗುವವರೆಗೂ ಅವರನ್ನು ಶಾಲೆಗೆ ಕಳುಹಿಸದಿರುವುದೇ ಉತ್ತಮ. ಏಕೆಂದರೆ, ಅದು ಹರಡುವ ರೋಗವಾಗಿರುವ ಕಾರಣ, ರೋಗ ಬೇರೆ ಮಕ್ಕಳಿಗೂ ಹರಡಬಹುದು. ಅಥವಾ ಮಗುವಿನ ಅನಾರೋಗ್ಯ ಇನ್ನೂ ಹಾಳಾಗಬಹುದು. ಹೀಗಾಗಿ ಮಕ್ಕಳು ಪೂರ್ತಿಯಾಗಿ ಗುಣವಾಗುವವರೆಗೂ ಶಾಲೆಗೆ ಕಳುಹಿಸಬಾರದು ಅಂತಾರೆ ವೈದ್ಯರು.
ಆದಷ್ಟು ಮಕ್ಕಳಿಗೆ ಕ್ಲೀನ್ ಆಗಿರಲು ತಿಳಿ ಹೇಳಿ. ಕರ್ಛೀಫ್ ಬಳಸುವ ರೀತಿ, ಹ್ಯಾಂಡ್ ವಾಶ್, ಸ್ಯಾನಿಟೈಸರ್ ಬಳಸೋದು ಹೇಳಿಕ“ಡಿ. ಕೈ ಕ್ಲೀನ್ ಮಾಡಿ, ಆಹಾರ ಸೇವಿಸಲು ಹೇಳಿ. ಬಿಸಿ ನೀರಿನ ಸೇವನೆ ಮಾಡುವುದನ್ನು ಪ್ರಾಕ್ಟೀಸ್ ಮಾಡಿಸಿ. ಮನೆಯನ್ನು ಕ್ಲೀನ್ ಆಗಿರಿಸಿ. ಸೊಳ್ಳೆ ಕಾಟ ಇರದಂತೆ ನೋಡಿಕ“ಳ್ಳಿ. ಮನೆಯ ಬಳಿ ನೀರು ನಿಲ್ಲದ ಹಾಗೆ ನೋಡಿಕ“ಳ್ಳಿ. ಏಕೆಂದರೆ, ನಿಂತ ನೀರಿನಲ್ಲಿ ಟೈಗರ್ ಮಾಸ್ಕಿಟೋ ಬರೋದು ಹೆಚ್ಚು. ಇದೇ ಮಾಸ್ಕಿಟೋ ಕಚ್ಚುವುದರಿಂದಲೇ, ಡೆಂಗ್ಯೂ ಜ್ವರ ಬರೋದು.
ಇನ್ನು ದೇಹವನ್ನು ಸದಾಕಾಲ ಬೆಚ್ಚಗಿಡಿ. ಮಕ್ಕಳಿಗೆ ಸಾಕ್ಸ್, ಸ್ವೆಟರ್, ಕ್ಯಾಪ್ ಎಲ್ಲವೂ ಹಾಕಿ. ಬಿಸಿ ನೀರು, ಬಿಸಿ ಹಾಲು, ಬಿಸಿ ಬಿಸಿ ಅನ್ನ-ಸಾರು ಸೇವಿಸಲು ನೀಡಿ. ಫ್ರಿಜ್ನಲ್ಲಿರಿಸಿದ ಆಹಾರ ಸೇವಿಸುವುದನ್ನು ಪೂರ್ತಿಯಾಗಿ ಬಿಡಿಸಿದರೂ ಅತೀ ಉತ್ತಮ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




