Thursday, December 12, 2024

Latest Posts

ಕಿಡ್ನಿ ಆರೋಗ್ಯ ತಿಳಿಯುವುದು ಹೇಗೆ?: ಈ ಅಪಾಯ ಗೊತ್ತೇ ಆಗಲ್ಲ

- Advertisement -

Health Tips: ಕಿಡ್ನಿ ಆರೋಗ್ಯ ಚೆನ್ನಾಗಿದೆ ಅಂದ್ರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಾಗುತ್ತಿದೆ ಎಂದರ್ಥ. ಹಾಗಾಗಿ ಮನುಷ್ಯ ಕಿಡ್ನಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತಾ ವೈದ್ಯರು ಹೇಳಿರೋದನ್ನು ನೀವು ಕೇಳಿರುತ್ತೀರಿ. ಜೊತೆಗೆ, ಕಿಡ್ನಿ ಆರೋಗ್ಯ ಹಾಳಾಗಿದ್ದೇ ಗೊತ್ತಾಗಿಲ್ಲ ಅಂತಾ ರೋಗಿಗಳು ಹೇಳಿದ್ದನ್ನೂ ಕೇಳಿರುತ್ತೀರಿ. ಹಾಗಾಗಿ ಕಿಡ್ನಿ ಆರೋಗ್ಯವಾಗಿದೆ ಅನ್ನೋದನ್ನ ಹೇಗೆ ತಿಳಿಯಬೇಕು ಅಂತಾ ವೈದ್ಯರೇ ಹೇಳಿದ್ದಾರೆ ಕೇಳಿ.

ನೀವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತಿದೆ. ಮಲ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿದೆ. ಹೊಟ್ಟೆ ಹಸಿವಾಗುತ್ತಿದೆ. ಕೊಟ್ಟ ಆಹಾರವನ್ನು ನೀವು ಇಷ್ಟಪಟ್ಟು ತಿನ್ನುತ್ತಿದ್ದೀರಿ. ನಿಮ್ಮ ದೇಹದ ಯಾವ ಭಾಗವೂ ಸುಮ್ಮ ಸುಮ್ಮನೆ ಊದಿಕೊಳ್ಳುತ್ತಿಲ್ಲವೆಂದಲ್ಲಿ ನಿಮ್ಮ ಕಿಡ್ನಿ ಆರೋಗ್ಯವಾಗಿದೆ ಎಂದರ್ಥ.

ಅದೇ ನಿಮಗೆ ಆಹಾರ ಸೇವಿಸಲು ಇಷ್ಟವಾಗುತ್ತಿಲ್ಲ. ಮಲ ಮೂತ್ರ ವಿಸರ್ಜನೆ ಆಗುತ್ತಿಲ್ಲ. ಕಾಲು, ಕೈ ಸೇರಿ ದೇಹದ ಕೆಲವು ಭಾಗಗಳು ಪದೇ ಪದೇ ಊದಿಕೊಳ್ಳುತ್ತಿದೆ ಎಂದಾದಲ್ಲಿ, ನೀವೊಮ್ಮೆ ಕಿಡ್ನಿ ಚೆಕಪ್ ಮಾಡಿಸಿಕೊಳ್ಳಬೇಕು ಎಂದರ್ಥ.

ಆದರೂ ನಿಮ್ಮಲ್ಲಿ ಉತ್ತಮ ಲಕ್ಷಣಗಳಿದ್ದರೂ, ಒಮ್ಮೊಮ್ಮೆ ಕಿಡ್ನಿಯಲ್ಲಿ ತೊಂದರೆಯಾದಾಗ, ಗೊತ್ತಾಗೋದು ವಿರಳ ಅಂತಾರೆ ವೈದ್ಯರು. ಹಾಗಾಗಿ ನೀವು ಕಿಡ್ನಿಯನ್ನು ಟೆಸ್ಟ್ ಮಾಡಿಸಿಕೊಂಡರೆ, ಉತ್ತಮ. ಏಕೆಂದರೆ, ನಮ್ಮ ದೇಹದ ಎಲ್ಲ ಭಾಗಗಳು ಚೆನ್ನಾಗಿ ಕಾಾರ್ಯನಿರ್ವಹಿಸಬೇಕು ಅಂದ್ರೆ ನಮ್ಮ ಕಿಡ್ನಿ ಆರೋಗ್ಯ ಚೆನ್ನಾಗಿರುವುದು ತುಂಬಾ ಮುಖ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss