ಕರ್ನೂಲ್ ನಲ್ಲಿ ನಡೆದಂತಹ ಭೀಕರ ಬೆಂಕಿ ಅವಘಡದ ದುರಂತ ನೋಡುಗರ ಮನ ಕಲುಕುತ್ತಿದೆ. ದೀಪಾವಳಿ ಹಬ್ಬ ಮುಗಿಸಿಕೊಂಡು ಬರ್ತಿದ್ದ ಕೆಲ ಜನರು ಭೀಕರ ಅಪಘಾತಕ್ಕೀಡಾಗಿದ್ದಾರೆ. ದೀಪಾವಳಿ ಹಬ್ಬದ ಬೆಳಕು, ಕ್ಷಣಾರ್ಧದಲ್ಲೇ ಜ್ವಾಲೆಯಾಗಿ ಬದಲಾಗಿದೆ. 20 ಕುಟುಂಬದಲ್ಲಿ ಕತ್ತಲೆ ಆವರಿಸಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಐಷಾರಾಮಿ ಸ್ಲೀಪರ್ ಖಾಸಗಿ ಬಸ್ ಧಗಧಗಿಸಿ ಹೊತ್ತಿ ಉರಿದಿದೆ. ಡ್ರೈವರ್, ಕಂಡಕ್ಟರ್ ಸೇರಿ 42 ಪ್ರಯಾಣಿಕರಲ್ಲಿ, 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಇನ್ನು ಕೆಲವರಿಗೆ ಗಂಭೀರ ಗಾಯಗಳಾಗಿವೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ.
ಇನ್ನು ಬೈಕ್ ಗೆ ಕಾವೇರಿ ಟ್ರಾವೆಲ್ಸ್ ವೋಲ್ವೊ ಬಸ್ ಗುದ್ದಿದ ಪೋರ್ಸ್ ಗೆ ಬೈಕ್ ಬಸ್ ಕೆಳಗೆ ನುಗ್ಗಿ ನುಜ್ಜುಗುಜ್ಜಾಗಿದೆ. ಈ ಬಸ್ ಮೇಲೆ ಸಾಕಷ್ಟು ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಇರುವ ಕಾರಣಕ್ಕಾಗಿ ಸಾಕಷ್ಟು ಫೈನ್ ಬಿದ್ದಿವೆ. ಇನ್ಸುರೆನ್ಸ್ ಕೂಡ ಇಲ್ಲ. ಸದ್ಯ ಕಾವೇರಿ ಟ್ರಾವೆಲ್ಸ್ ಬಸ್ ಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹಾಗಾದ್ರೆ ಯಾಕೆ ಈ ದುರಂತ ಸಂಭವಿಸಿತು? ಯಾವೆಲ್ಲಾ ಕಾರಣಗಳಿವೆ ಅನ್ನೋದನ್ನ ಒಂದೊಂದಾಗೆ ನೋಡ್ತಾ ಹೋಗೋಣ
ಕಾರಣ – 1
ಬಸ್ ಚಾಲಕ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಾಗು ಬೈಕ್ ಸವಾರ ಬಸ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದರು. ಅಷ್ಟಾದರೂ ಕೂಡ ಬಸ್ ಚಾಲಕ ಬಸ್ ನಿಲ್ಲಿಸದೆ ಹಾಗೆ ಸುಮಾರು ಮೀಟರ್ ಗಳ ದೂರ ಎಳೆದೊಯ್ದಿದ್ದಾನೆ. ಆ ಮದ್ಯೆ ಬಸ್ ಮತ್ತು ಬೈಕ್ ಮದ್ಯೆ ಘರ್ಷಣೆ ಉಂಟಾಗಿ, ಪೆಟ್ರೋಲ್ ಲಿಕ್ ಆಗಿ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ.
ಕಾರಣ – 2
ಬಸ್ ನಲ್ಲಿ ಒಂದೇ ಬಾಗಿಲು ಇದ್ದಿದ್ದರಿಂದ ಹೆಚ್ಚು ಜಾಮ್ ಆಗಿದೆ. ಬಸ್ ನಲ್ಲಿ ಮುಂಬಾಗಿಲು ಮಾತ್ರ ಇದ್ದಿದ್ದರಿಂದ ಪ್ರಯಾಣಿಕರಿಗೆ ಕೆಳಗೆ ಇಳಿಯೋಕೆ ಅವಕಾಶ ಸಿಕ್ಕಿಲ್ಲ. ಮುಂದಿನ ಬಾಗಿಲು ಜಾಮ್ ಆಗದೆ ಹೋಗಿದ್ದರೆ ಇನ್ನು ಹೆಚ್ಚಿನ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಇತ್ತು.
ಕಾರಣ – 3
ಸಮಯ ಬಹಳ ಕಡಿಮೆ ಇತ್ತು. ಬೆಂಕಿ ಹೊತ್ತಿಕೊಂಡ ಕೂಡಲೇ ಇಡೀ ಬಸ್ಸನ್ನೇ ಆವರಿಸಿಕೊಂಡಿದೆ. ಎಮರ್ಜನ್ಸಿ ಡೋರ್ ಕೂಡ ಓಪನ್ ಆಗಿಲ್ಲಾ. ಅದು ಕೂಡ ಕಷ್ಟವಾಗಿದೆ. ಆದ್ರೂ ಕೂಡ ಕೆಲ ಜನ ಕಿಟಕಿ ಒಡೆದು ಹೊರಬಂದಿದ್ದಾರೆ. ತಮ್ಮ ಜೀವವನ್ನ ರಕ್ಷಿಸಿಕೊಂಡಿದ್ದಾರೆ.
ಕಾರಣ – 4
ಬಸ್ ಅಪಘಾತ ಆದ ತಕ್ಷಣ ಬಸ್ ಚಾಲಕ ಹಾಗು ಕಂಡೆಕ್ಟರ್ ಪ್ರಯಾಣಿಕರ ರಕ್ಷಣೆಗೆ ನಿಲ್ಲದೆ ಪರಾರಿಯಾಗಿದ್ದಾರೆ. ಚಾಲಕ ಕೂತಿರುವಂತಹ ಸೀಟಿನ ಬಾಗಿಲು ಕೂಡ ತೆರೆಯೋಕೆ ಸಾಧ್ಯವಾಗಿಲ್ಲ. ಆತ ಕೂಡ ಕಿಟಕಿಯಿಂದ ಹರಿ ಪರಾರಿಯಾಗಿದ್ದಾನೆ. ಪ್ರಯಾಣಿಕರೊಬ್ಬರು ಕೂಡ ಹೇಳಿದ್ದಾರೆ. ಅವರು ಯಾವ ರೀತಿ ಕಿಟಕಿಯಿಂದ ಹಾರಿದ್ರು ನಾನು ಕೂಡ ಅದೇ ರೀತಿ ತಮ್ಮ ಪ್ರಾಣ ಉಳಿಸಿಕೊಂಡಿರೋದಾಗಿ ಹೇಳಿಕೊಂಡಿದ್ದಾರೆ.
ಕಾರಣ – 5
ರಾತ್ರಿ ಮಳೆ ಬಂದಿದೆ. ಆ ಪರಿಣಾಮವಾಗಿ ಸರಿಯಾಗಿ ರಸ್ತೆ ಕಾಣಿಸುತ್ತಿರಲಿಲ್ಲ ಅನ್ನೋದಾಗಿದೆ. ಆ ಕಾರಣಕ್ಕಾಗಿ ಈ ರಸ್ತೆ ಅಪಘಾತ ಸಂಭವಿಸಿರಬಹುದು ಅಂತ ಹೇಳಲಾಗುತ್ತಿದೆ.
ಕಾರಣ – 6
ಅಜಾಗರೂಕತೆ, ಅಸಡ್ಡೆ, ಅತಿವೇಗದಿಂದ ಚಾಲನೆ ಮಾಡಿರೋದು. ಟ್ರಾಫಿಕ್ ಜಾಮ್ ಕೂಡ ಆಗಿದೆ. ಪ್ರಯಾಣಿಕರನ್ನ ಕಾಪಾಡಬೇಕಾದವರು, ಬಂದು ನಿಂತು ವಿಡಿಯೋ ಮಾಡಿಕೊಳ್ಳುತ್ತಿದ್ದರು. .
ಕಾರಣ – 7
ಅಪಘಾತವಾಗಿದ್ದಂತಹ ಜಾಗದಲ್ಲಿ ಇದ್ದ ಜನ ಆ ಘಟನೆಯನ್ನ ಸುಮ್ಮನೆ ನೋಡ್ತಾ ನಿಂತಿದ್ರು. ಕೆಲವರು ಮೊಬೈಲ್ ಹಿಡಿದು ಆ ದೃಶ್ಯಗಳನ್ನ ವಿಡಿಯೋ ರೆಕಾರ್ಡ್ ಮಾಡ್ತಾ ನಿಂತಿದ್ದರು. ಯಾರೊಬ್ಬರೂ ಕೂಡ ಅವರನ್ನ ರಕ್ಷಿಸುವ ಪ್ರಯತ್ನ ಮಾಡಿಲ್ಲ.
ಕಾರಣ – 8
ನಿದ್ರೆ. ಹೌದು ಬಸ್ ನಲ್ಲಿ ಅತಿ ಹೆಚ್ಚು ಜನ ನಿದ್ರೆಗೆ ಜಾರಿದ್ದರು. ಹಾಗಾಗಿ ಬೇಗ ಎಚ್ಚರವಾಗಿಲ್ಲ. ಅಷ್ಟರೊಳಗಾಗಿ ಬೆಂಕಿ ಇಡೀ ಬಸ್ಸನ್ನೇ ಆವರಿಸಿಕೊಂಡಿತ್ತು.
ಕಾರಣ – 9
ಈ ದುರಂತ ನಡೆದ ಜಾಗದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಬೇರೆ ಬೇರೆ ವಾಹನಗಳು ಹೋಗೋಕೆ ಜಾಗವಿಲ್ಲದೆ ಸಾಕಷ್ಟು ವಾಹನಗಳು ಅಲ್ಲೇ ನಿಂತಿದ್ದವು. ಹಾಗಾಗಿ ಹೆಚ್ಚಾಗಿ ಈ ಅಪಘಾತದಲ್ಲಿ ಸಿಲುಕಿದ್ದವರ ರಕ್ಷಣೆ ಮಾಡೋಕೆ ಸಾಧ್ಯವಾಗಿಲ್ಲ.
ಕಾರಣ – 10
ಈ ಬಸ್ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದೆ. ಆದ್ರೂ ಕೂಡ ಕಾವೇರಿ ಟ್ರಾವೆಲ್ಸ್ ನ ಮಾಲೀಕ ಕ್ರಮ ಕೈಗೊಳ್ಳದೇ ಮತ್ತೆ ಬಸ್ಸನ್ನ ರಸ್ತೆಗೆ ಬಿಟ್ಟಿದ್ದಾರೆ. ವೇಗವಾಗಿ ಬಂದು, ಮಳೆಯಲ್ಲಿ ರಸ್ತೆ ಕಾಣಿಸದೆ ಈ ದುರಂತ ಸಂಭವಿಸಿದೆ.
ವರದಿ : ಲಾವಣ್ಯ ಅನಿಗೋಳ

