Monday, December 11, 2023

Latest Posts

ಕ್ಯಾಂಟರ್ ಪಲ್ಟಿಯಾಗಿ ಕೋಳಿಗಳ ಮಾರಣ ಹೋಮ-ಸತ್ತಕೋಳಿಯನ್ನೂ ಬಿಡದೇ ಬಾಚಿಕೊಂಡ ಜನರು..!

- Advertisement -

ದಾವಣಗೆರೆ: ಕ್ಯಾಂಟರ್ ಪಲ್ಟಿಯಾಗಿ ಸುಮಾರು 800 ಕೋಳಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸತ್ತ ಕೋಳಿಯನ್ನೂ ಬಿಡದೆ ಜನರು ಅದನ್ನು ಬಾಚಿಕೊಂಡುಹೋಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ತಾಲೂಕಿನ ದ್ಯಾಮೇನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕೋಳಿ ತುಂಬಿದ್ದ ಕ್ಯಾಂಟರ್ ಏಕಾಏಕಿ ಪಲ್ಟಿ ಹೊಡೆದಿದೆ. ಹೀಗಾಗಿ 800 ಕೋಳಿಗಳು ಸಾವನ್ನಪ್ಪಿವೆ. ವಿಷಯ ತಿಳಿದ ಸ್ಥಳೀಯರು, ಕ್ಯಾಂಟರ್ ನಲ್ಲಿದ್ದವರ ನೆರವಿಗೆ ನಿಲ್ಲದೆ ತಂಡೋಪತಂಡವಾಗಿ ಬಂದು ಸತ್ತು ಬಿದ್ದಿರುವ ಕೋಳಿಗಳನ್ನು ಬಾಚಿಕೊಂಡು ಹೋಗಿದ್ದಾರೆ.

ಇನ್ನು  ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಮಾಯಕೊಂಡ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

- Advertisement -

Latest Posts

Don't Miss