Wednesday, June 7, 2023

Latest Posts

ಧಾರವಾಡ ಪೇಡಾದ ಸಿಹಿಯಷ್ಟು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ: ಡಿಕೆಶಿ

- Advertisement -

ಹುಬ್ಬಳ್ಳಿ: ಧಾರವಾಡ ಪೇಡಾ ಎಷ್ಟು ಸಿಹಿ ಇದೆಯೋ ಅಷ್ಟರ ಮಟ್ಟಿಗೆ ಈ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನಾನು ಕೊಟ್ಟ ಮಾತಿಗೆ ತಪ್ಪುವನಲ್ಲ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಕಡೇ ದಿನವಾದ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸಚಿವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ತಾವು ಬದ್ಧ ಎಂಬ ಭರವಸೆ ನೀಡಿದರು. ಮಾಜಿ ಸಚಿವ ವಿನಯ ಕುಲಕರ್ಣಿ, ಸಂತೋಷ ಲಾಡ್, ಡಿ.ಕೆ.ಸುರೇಶ, ಆರ್.ಬಿ.ತಿಮ್ಮಾಪುರ ಇದ್ದರು. ಈ ವೇಳೆ ಸಚಿವರು ಹೇಳಿದ್ದಿಷ್ಟು…

*ಇದು ಧರ್ಮ ಯುದ್ಧ*

ಕುಂದಗೋಳ ಕ್ಷೇತ್ರದಲ್ಲಿ ನಡೆಯುತ್ತಿರುವದು ಧರ್ಮಯುದ್ಧ. ಈ‌ ಡಿ.ಕೆ.ಶಿವಕುಮಾರ್ ಕೊಟ್ಟ ಮಾತು ತಪ್ಲಿಲ್ಲ, ಬಳ್ಳಾರಿಯಲ್ಲಿ ಏನೂ ಮಾತು ಕೊಟ್ಟಿದ್ದೆನೆ, ನಾನು ಅದನ್ನ ಉಳಿಸಿಕೊಂಡಿದ್ದೆ.

ಬಳ್ಳಾರಿಯನ್ನ Republic ತಗೆಸಿ, ಸಾಮಾನ್ಯ ಜನರ ಆಡಳಿತ ತಂದಿದ್ದೆನೆ. ಜಗದೀಶ್ ಶೆಟ್ಟರ್, ಯಡಿಯೂರಪ್ಪ ಮತ್ತು ನನಗೆ ಡಿಬೇಟ್ ಮಾಡಿಸಿ ನಾನು ಸಿದ್ಧ.

*ಕುಂದಗೋಳದಿಂದ ನ್ಯಾಯ್ ಯೋಜನೆ ಜಾರಿ*

ರಾಹುಲ್ ಗಾಂಧಿ ಅವರು ಈಗಾಗಲೇ ಘೋಷಣೆ ಮಾಡಿದ  ನ್ಯಾಯ ಯೋಜನೆಯನ್ನು ಕುಂದಗೋಳ ಕ್ಷೇತ್ರದಿಂದ ಆರಂಭ ಮಾಡಲಾಗುವದು. ಈಗಾಗಲೇ ಪ್ರತಿ ಕುಟುಂಬಕ್ಕೆ ೬೦೦೦ ರೂಪಾಯಿ ನೀಡುತ್ತೇವೆ ಎಂದು ಹೇಳಿದ್ದರು ಅದನ್ನು ಇಲ್ಲಿಂದಲೇ ಆರಂಭ ಮಾಡಿಸುತ್ತೇನೆ.ಇದು ನನ್ನ ಮೊದಲ ಪ್ರಯತ್ನ ಮತ್ತು ಮಹತ್ವಾಕಾಂಕ್ಷೆಯ ಯೋಜನೆ ಸಹ.

ಸಿ.ಎಸ್.ಶಿವಳ್ಳಿ ಹಿಂದುಳಿದವ. ಆತ ತೀರಿಕೊಂಡ ನಂತರ ಅವರ ಪತ್ನಿ ಕುಸುಮಾ ಇದ್ದಳು. ಮಾನವಿಯತೆ ಆಧಾರದ ಮೇಲೆ  ಕುಸುಮಾ ಶಿವಳ್ಳಿ ಅವರಿಗೆ ಟಿಕೇಟ್ ನೀಡಿ ಅವರ ಹಿಂದೆ ನಾವು ಎಲ್ಲರೂ ಇದ್ದೇವೆ. ಕುಂದಗೋಳ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಮಾಡುತ್ತೇವೆ. ಧಾರವಾಡ ಪೇಡ್ ಎಷ್ಟು ಸಿಹಿ ಇದೆ ಅಷ್ಟೇ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುವುದು.

ಕುಸುಮಾ ಶಿವಳ್ಳಿ ಹಿಂದುಗಡೆ ನಾವೆಲ್ಲಾ ಇದ್ದು ಅಭಿವೃದ್ಧಿ ಮಾಡಲಾಗುವುದು. ಕ್ಷೇತ್ರದ ಇಂಚಿಂಚ್ಚೂ ಸುಧಾರಣೆ ಮಾಡುತ್ತೇವೆ. ನಾವು ಕಾನೂನಿಗೆ ಗೌರವ ನೀಡಲು ಇಂದಿನಿಂದ ಕ್ಷೇತ್ರದ ಹೊರಗಡೆ  ಇರುತ್ತೇವೆ. ಸಂಪರ್ಕದ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತೇವೆ.

*ಮಹದಾಯಿ ಯೋಜನೆ ಬಿಜೆಪಿ ನಾಯಕರು ವಿಫಲ*

ಮಹದಾಯಿ ಯೋಜನೆ ಜಾರಿಯಲ್ಲಿ ನ್ಯಾಯಾಧೀಕರಣ ನೀಡಿದ ತೀರ್ಪಿನ ಆಧಾರವಾಗಿ ಕೇಂದ್ರ ಸರ್ಕಾರದಿಂದ ನೋಟಿಸ್ ಹೊರಡಿಸಲು ರಾಜ್ಯ ಬಿಜೆಪಿ ನಾಯಕರಿಂದ ಸಾಧ್ಯವಾಗುತ್ತಿಲ್ಲ.

ಉತ್ತರ ಕರ್ನಾಟಕ ಸಮಗ್ರ ಜನತೆಯ ಹೋರಾಟದ ಫಲವಾಗಿ ನ್ಯಾಯಾಧಿಕರಣದಲ್ಲಿ ನೀರು ಸಿಕ್ಕಿದೆ. ಈ ಹೋರಾಟಕ್ಕೆ ಎಲ್ಲ ವರ್ಗದ ಜನತೆ ಈ ಹೋರಾಟದಲ್ಲಿ ತೊಡಗಸಿಕೊಂಡಿದ್ರು. ಇಡೀ ಚಂದನವನ ನಟ ನಟಿಯರು ಕೈ ಜೋಡಿಸಿದ್ದರು.

ಆದರೆ ಜಗದೀಶ್ ಶೆಟ್ಟರ್, ಯಡಿಯೂರಪ್ಪ ಮಹದಾಯಿ ಯೋಜನೆ ಜಾರಿಗೆ ನೋಟಿಸ್ ಜಾರಿ ಮಾಡಿಸಲು ಆಗುತಿಲ್ಲ.

ನಾನು ಯಾವತ್ತೂ ಬೇರೆ ಪಕ್ಷದ ನಾಯಕರನ್ನು ಕೊಂಡುಕೊಂಡಿಲ್ಲ. ಬಿಜೆಪಿಯವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜಗದೀಶ್ ಶೆಟ್ಟರ್ ಯಾಕೆ ಈ ರೀತಿಯ ಹೇಳುತ್ತಿದ್ದಾರೆ  ಗೊತ್ತಿಲ್ಲ.

ಯಡಿಯೂರಪ್ಪನವರು ವೀರಶೈವ ಲಿಂಗಾಯತರಿಗೆ ಮೋಸ ಮಾಡಿದ್ದಾರೆ. ವೀರೇಂದ್ರ ಪಾಟೀಲರನ್ನು ಹೀನಾಯವಾಗಿ ಕಾಂಗ್ರೆಸ್ ನಡೆಸಿಕೊಂಡಿದೆ ಎಂಬ ಹೇಳಿಕೆಗೆ ಸರಿಯಲ್ಲ. ವೀರಶೈವ ಲಿಂಗಾಯತರು ಕೇವಲ ಒಂದು ಪಕ್ಷಕ್ಕೆ ಸೀಮೀತವಾಗಿಲ್ಲ. ಯಾಕೆ ನಮ್ಮ ಪಕ್ಷದಲ್ಲಿ ವೀರಶೈವ ಲಿಂಗಾಯತರು ಇಲ್ವಾ. ಈ ರೀತಿ ಒಡೆದು ಆಳುವ ನೀತಿ ಯಡಿಯೂರಪ್ಪ ಕೈ ಬೀಡಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.

- Advertisement -

Latest Posts

Don't Miss