Monday, December 11, 2023

Latest Posts

ಮಾಜಿ-ಹಾಲಿ ಸಿಎಂಗಳ ಏಟು ಎದಿರೇಟು- ಟ್ವೀಟ್ ನಿಂದಲೇ ಕುಮಾರಸ್ವಾಮಿ ಉತ್ತರ

- Advertisement -

ಬೆಂಗಳೂರು: ಖರ್ಗೆ ಕುರಿತಾದ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದು ಒಂದೆಡೆಯಾದ್ರೆ, ಇದೀಗ ಸಿಎಂ ಕುಮಾರಸ್ವಾಮಿ ಕೂಡ ಸಿದ್ದುಗೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.

ಇಂದು ಬೆಳಗ್ಗೆಯೇ ಸಿದ್ದರಾಮಯ್ಯ, ಜೆಡಿಎಸ್ ನಲ್ಲೂ ಸಿಎಂ ಆಗೋ ಯೋಗ್ಯತೆ ಹೊಂದಿರೋ ಬಹಳ ಜನ ಇದ್ದಾರೆ. ಅದರಲ್ಲಿ ರೇವಣ್ಣ ಕೂಡ ಒಬ್ಬರು ಅಂತ ಟ್ವೀಟ್ ಮಾಡಿ ಕುಮಾರಸ್ವಾಮಿ ಕಸಿವಿಸಿಗೊಳ್ಳುವಂತೆ ಮಾಡಿದ್ರು. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿದ್ದಾರೆ.

‘ನಾಡಿನ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು. ಈ ಹೇಳಿಕೆಗೆ ರಾಜಕೀಯದ ಬಣ್ಣಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ’.ಅಂತ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರೋ ಸಿಎಂ ಕುಮಾರಸ್ವಾಮಿ,’ಈ ಹೇಳಿಕೆಯ ಮೂಲಕ ರಾಜಕೀಯ ಲಾಭ ಪಡೆಯುವ ಕೀಳು ಅಭಿರುಚಿ ನನ್ನದಲ್ಲ. ಖರ್ಗೆಯವರದು ಪಕ್ಷ , ಜಾತಿ ಎಲ್ಲವನ್ನೂ ಮೀರಿದ ಮಹೋನ್ನತ ವ್ಯಕ್ತಿತ್ವ ಎನ್ನುವುದನ್ನು ನಾವು ಮರೆಯಬಾರದು’.ಅಂತ ಹೇಳಿದ್ದಾರೆ.

- Advertisement -

Latest Posts

Don't Miss