Saturday, October 5, 2024

Latest Posts

ಖರ್ಗೆ ಕುರಿತ ಕುಮಾರಸ್ವಾಮಿ ಹೇಳಿಕೆ- ಟ್ವೀಟ್ ಮೂಲಕವೇ ಸಿದ್ದು ಗುದ್ದು

- Advertisement -

ಬೆಂಗಳೂರು: ಖರ್ಗೆಯವರಿಗೆ ಸಿಎಂ ಆಗೋ ಯೋಗ್ಯತೆ ಇದೆ ಅಂತ ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಇದೀಗ ಸಿದ್ದರಾಮಯ್ಯ ಬೇರೆ ರೀತಿಯೇ ಟ್ವೀಟ್ ಮಾಡಿದ್ದಾರೆ.

ಸಿಎಂ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರೋ ಮಾಜಿ ಸಿಎಂ ಸಿದ್ದು, ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ‌ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ‌ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ‌ ಕೂಡಿ ಬರಬೇಕು. ಅಂತ ಟ್ವೀಟ್ ಮಾಡೋ ಮೂಲಕ ಇದು ಬೇಸರದಿಂದ ನೀಡಿರೋ ಪ್ರತಿಕ್ರಿಯೆಯೋ ಅಥವಾ ವ್ಯಂಗ್ಯವೋ ಅನ್ನೋ ಸಂಶಯ ಮೂಡುವಂತೆ ಮಾಡಿದ್ದಾರೆ.

ಈ ಮೂಲಕ ಜೆಡಿಎಸ್ ನಲ್ಲೂ ಸಿಎಂ ಗಾದಿಗೆ ಪ್ರಯತ್ನ ಮಾಡುತ್ತಿರುವವರೂ ಇದ್ದಾರೆ ಅನ್ನೋ ಸಂದೇಶವನ್ನು ಮೌನವಾಗಿಯೇ ತಲುಪಿಸಿದ್ದಾರೆ ಸಿದ್ದರಾಮಯ್ಯ.

- Advertisement -

Latest Posts

Don't Miss